ಸಾಂದರ್ಭಿಕ ಚಿತ್ರ 
ವಾಣಿಜ್ಯ

ಪೆಟ್ರೋಲ್-ಡೀಸೆಲ್ ಮೇಲಿನ ಅಬಕಾರಿ ಸುಂಕ ಕಡಿತ, ಆದರೆ ಬಂಕ್ ಗಳಲ್ಲಿ ಬೆಲೆ ಇಳಿಕೆ ಇಲ್ಲ; ಏನು ಕಾರಣ?

ಫೆಬ್ರವರಿ 28ರಂದು ಅಮೆರಿಕಾ ಮತ್ತು ಇಸ್ರೇಲ್ ಇರಾನ್ ಮೇಲೆ ದಾಳಿ ಆರಂಭಿಸಿದ ನಂತರ, ಜಾಗತಿಕ ಕಚ್ಚಾ ತೈಲದ ಬೆಲೆಗಳು ಸುಮಾರು 50 ಶೇಕಡಾ ಏರಿಕೆಯಾಗಿದೆ.

ಸರ್ಕಾರವು ಪೆಟ್ರೋಲ್ ಮೇಲಿನ ವಿಶೇಷ ಹೆಚ್ಚುವರಿ ಅಬಕಾರಿ ಸುಂಕವನ್ನು ಲೀಟರ್‌ಗೆ 3 ರೂಪಾಯಿಗೆ ಇಳಿಸಿದ್ದು, ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಸಂಪೂರ್ಣವಾಗಿ ರದ್ದುಗೊಳಿಸಿದೆ. ಇದು ದೊಡ್ಡ ಮಟ್ಟದ ತೆರಿಗೆ ಕಡಿತವಾದರೂ, ಗ್ರಾಹಕರು ಪಂಪ್‌ಗಳಲ್ಲಿ ತಕ್ಷಣವೇ ಬೆಲೆ ಇಳಿಕೆಯನ್ನು ಕಾಣುವ ಸಾಧ್ಯತೆ ಕಡಿಮೆ. ಕಾರಣ, ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧದಿಂದ ಜಾಗತಿಕ ಕಚ್ಚಾ ತೈಲದ ಬೆಲೆ ಏರಿಕೆಯ ಪರಿಣಾಮದಿಂದ ಗ್ರಾಹಕರನ್ನು ರಕ್ಷಿಸುವುದೇ ಸರ್ಕಾರದ ಉದ್ದೇಶವಾಗಿದ್ದು, ಬೆಲೆಗಳನ್ನು ಕಡಿಮೆ ಮಾಡುವುದಲ್ಲ.

ತಕ್ಷಣ ಬೆಲೆ ಇಳಿಕೆಯಾಗದ ಪ್ರಮುಖ ಕಾರಣಗಳು:

  • ಫೆಬ್ರವರಿ 28ರಂದು ಅಮೆರಿಕಾ ಮತ್ತು ಇಸ್ರೇಲ್ ಇರಾನ್ ಮೇಲೆ ದಾಳಿ ಆರಂಭಿಸಿದ ನಂತರ, ಜಾಗತಿಕ ಕಚ್ಚಾ ತೈಲದ ಬೆಲೆಗಳು ಸುಮಾರು 50 ಶೇಕಡಾ ಏರಿಕೆಯಾಗಿದೆ.

  • ಈ ತಿಂಗಳ ಆರಂಭದಲ್ಲಿ ತೈಲದ ಬೆಲೆ ಬ್ಯಾರೆಲ್‌ಗೆ 119 ಡಾಲರ್ ತಲುಪಿದ್ದು, ನಂತರ ಸುಮಾರು 100 ಡಾಲರ್ ಗೆ ಇಳಿಕೆಯಾಗಿದೆ.

  • ಭಾರತ ತನ್ನ ಕಚ್ಚಾ ತೈಲದ ಅಗತ್ಯದ 88 ಶೇಕಡಾ ಹಾಗೂ ನೈಸರ್ಗಿಕ ಅನಿಲದ ಸುಮಾರು ಅರ್ಧವನ್ನು ಆಮದು ಮಾಡಿಕೊಳ್ಳುತ್ತದೆ.

  • ಈ ಆಮದುಗಳ ಬಹುಪಾಲು ಹಾರ್ಮುಜ್ ಸಾಗರ ದ್ವಾರ ಮೂಲಕ ಬರುತ್ತದೆ. ಸಂಘರ್ಷದ ಹಿನ್ನೆಲೆ ಸಾಗಾಟಕ್ಕೆ ಅಡ್ಡಿಪಡಿಸಿ, ವಿಮಾ ಕಂಪನಿಗಳು ಕವರೇಜ್ ಹಿಂತೆಗೆದುಕೊಂಡ ಪರಿಣಾಮ ಟ್ಯಾಂಕರ್ ಸಂಚಾರವೂ ಕುಂಠಿತವಾಗಿದೆ.

ಸರ್ಕಾರಿ ತೈಲ ಕಂಪನಿಗಳಾದ ಹಿಂದೂಸ್ತಾನ್ ಪೆಟ್ರೋಲಿಯಂ (HPCL), ಭಾರತ್ ಪೆಟ್ರೋಲಿಯಂ (BPCL) ಮತ್ತು ಇಂಡಿಯನ್ ಆಯಿಲ್ ಕಾರ್ಪೊರೇಷನ್ (IOC) ಇವು, ಇಂಧನ ಬೆಲೆಗಳನ್ನು ಸ್ಥಿರವಾಗಿಟ್ಟುಕೊಂಡಿರುವುದರಿಂದ ಭಾರೀ ನಷ್ಟ ಅನುಭವಿಸುತ್ತಿವೆ. ಈ ಸುಂಕ ಕಡಿತವು ಆ ನಷ್ಟವನ್ನು ಭರಿಸಲು ನೆರವಾಗಿ, ಪಂಪ್ ಬೆಲೆಯಲ್ಲಿ ತೀವ್ರ ಏರಿಕೆಯನ್ನು ತಪ್ಪಿಸುವ ಉದ್ದೇಶ ಹೊಂದಿದೆ.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ , ಈ ಕ್ರಮವು ಬೆಲೆ ಏರಿಕೆಯಿಂದ ಗ್ರಾಹಕರಿಗೆ ರಕ್ಷಣೆ ಒದಗಿಸುತ್ತದೆ ಎಂದು ತಿಳಿಸಿದ್ದಾರೆ. ಜೊತೆಗೆ ಡೀಸೆಲ್ ರಫ್ತಿಗೆ ಲೀಟರ್‌ಗೆ 21.5 ರೂಪಾಯಿ ಮತ್ತು ವಿಮಾನ ಇಂಧನ (ATF) ರಫ್ತಿಗೆ 29.5 ರೂಪಾಯಿ ಸುಂಕ ವಿಧಿಸಿರುವುದರಿಂದ ದೇಶೀಯ ಬಳಕೆಗೆ ಸಾಕಷ್ಟು ಲಭ್ಯತೆ ಖಚಿತವಾಗುತ್ತದೆ ಎಂದು ಹೇಳಿದ್ದಾರೆ.

ಹಣಕಾಸು ಸಚಿವಾಲಯದ ಅಧಿಸೂಚನೆಯ ಪ್ರಕಾರ, ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು 13ರೂಪಾಯಿಗಳಿಂದ 3 ರೂಪಾಯಿಗೆ ಇಳಿಸಲಾಗಿದ್ದು, ಡೀಸೆಲ್ ಮೇಲಿನ ಸುಂಕವನ್ನು 10ರೂಪಾಯಿಗಳಿಂದ ಶೂನ್ಯಕ್ಕೆ ಇಳಿಸಲಾಗಿದೆ. ಈ ಕಡಿತ ತಕ್ಷಣದಿಂದಲೇ ಜಾರಿಗೆ ಬಂದಿದೆ.

ಈ ಘೋಷಣೆಯ ನಂತರ, IOC, BPCL ಮತ್ತು HPCL ಷೇರುಗಳು ಬಿಎಸ್‌ಇಯಲ್ಲಿ ಏರಿಕೆಯಿಂದ ಆರಂಭಗೊಂಡವು. ICRA ವರದಿ ಪ್ರಕಾರ, ಕಚ್ಚಾ ತೈಲದ ಬೆಲೆ 100–105 ಡಾಲರ್ ಪ್ರತಿ ಬ್ಯಾರೆಲ್ ಮಟ್ಟದಲ್ಲಿದ್ದರೆ, ಪೆಟ್ರೋಲ್ ಮೇಲೆ ಲೀಟರ್‌ಗೆ 11 ರೂಪಾಯಿ ಮತ್ತು ಡೀಸೆಲ್ ಮೇಲೆ 14 ರೂಪಾಯಿ ನಷ್ಟ ಉಂಟಾಗಬಹುದು.

ನಯಾರಾ ಎನರ್ಜಿ ತನ್ನ ಪಂಪ್‌ಗಳಲ್ಲಿ ಪೆಟ್ರೋಲ್ ಬೆಲೆಯನ್ನು 5 ರೂಪಾಯಿ ಹಾಗೂ ಡೀಸೆಲ್ ಬೆಲೆಯನ್ನು 3 ರೂಪಾಯಿ ಏರಿಕೆ ಮಾಡಿದೆ. ನಯಾರಾದಲ್ಲಿ ಪೆಟ್ರೋಲ್ ಬೆಲೆ 100.71 ರೂಪಾಯಿ ಮತ್ತು ಡೀಸೆಲ್ 91.31 ರೂಪಾಯಿ ಆಗಿದೆ.

ಆದರೂ, ಮಾರುಕಟ್ಟೆಯ ಸುಮಾರು 90 ಶೇಕಡಾ ನಿಯಂತ್ರಣ ಹೊಂದಿರುವ ಸರ್ಕಾರಿ ತೈಲ ಕಂಪನಿಗಳು ಬೆಲೆಗಳನ್ನು ಸ್ಥಿರವಾಗಿಯೇ ಉಳಿಸಿಕೊಂಡಿವೆ. ದೆಹಲಿಯಲ್ಲಿ ಪೆಟ್ರೋಲ್ ಲೀಟರ್‌ಗೆ 94.77 ರೂಪಾಯಿ ಮತ್ತು ಡೀಸೆಲ್ 87.67 ರೂಪಾಯಿ ದರದಲ್ಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರಲ್ಲಿ ಆಪರೇಷನ್‌ ಫುಟ್‌ಪಾತ್‌: ಇದುವರೆಗೆ 9,878 ಅತಿಕ್ರಮಣ ತೆರವು; CM ಡಿಕೆಶಿ ಸಿಟಿ ರೌಂಡ್ಸ್!

Kumbh Mela viral girl ಮೊನಾಲಿಸಾ 'ನಾಪತ್ತೆ'​: ಪೊಲೀಸ್ ರಕ್ಷಣೆ ಹಿಂಪಡೆದ ಕೇರಳ ಹೈಕೋರ್ಟ್

BJP ಆರೋಪಗಳ ಬೆನ್ನಲ್ಲೇ ಮಂಗಳೂರಿನಲ್ಲಿ 8 ಬಾಂಗ್ಲಾದೇಶಿ ಪ್ರಜೆಗಳ ಬಂಧನ; ಗಡಿಪಾರಿಗೆ ಸಿದ್ಧತೆ

ವಿಜಯಪುರದಲ್ಲಿ ಭೀಕರ ಅಪಘಾತ: ಡಿವೈಡರ್‌ಗೆ ಕಾರು ಡಿಕ್ಕಿ; ಇಬ್ಬರು ಪುತ್ರರ ಜೊತೆ ತಾಯಿ ಸ್ಥಳದಲ್ಲೇ ಸಾವು!

'ಮಮತಾರಂತೆ ನಾನು ದುರ್ಬಲ, ಹೇಡಿ CM ಅಲ್ಲ': ಶಾಸಕ ಹುಮಾಯೂನ್ ಕಬೀರ್​ ಬೆವರಿಳಿಸಿದ ಸುವೇಂದು ಅಧಿಕಾರಿ