ಬೆಂಗಳೂರು ಟೆಕ್ಕಿ ಅರ್ಕಾ ಮಜುಂದಾರ್  
ವಾಣಿಜ್ಯ

ಕೇವಲ 3 ವರ್ಷಗಳಲ್ಲಿ ಗೂಗಲ್ ಸೇರಿ 80 ಲಕ್ಷ ವೇತನ ಪಡೆದೆ, 2031ಕ್ಕೆ ರಿಟೈರ್ ಮೆಂಟ್ ಪ್ಲಾನ್ ಎಂದು ವಿವರಿಸಿದ ಬೆಂಗಳೂರು ಟೆಕ್ಕಿ, ಇದು ನಿಜಾನ ಗುರೂ ಎಂದ ನೆಟ್ಟಿಗರು...

ಕೇವಲ ಮೂರು ವರ್ಷಗಳಲ್ಲಿ ಕಂಪನಿಗಳನ್ನು ಬದಲಾಯಿಸುವ ಮೂಲಕ ವರ್ಷಕ್ಕೆ 3.2 ಲಕ್ಷ ರೂಪಾಯಿಗಳಿಂದ 80 ಲಕ್ಷ (LPA) ರೂಪಾಯಿಗಳವರೆಗೆ ತಮ್ಮ ವೇತನವನ್ನು ಹೆಚ್ಚಿಸಿಕೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.

ಬೆಂಗಳೂರು: ಐಟಿ ಉದ್ಯೋಗದಲ್ಲಿ ಇಂದಿನ ಜಾಗತಿಕ ಪರಿಸ್ಥಿತಿಯ ನಡುವೆ ಅನಿಶ್ಚಿತತೆ, ಕಂಪೆನಿಗಳಲ್ಲಿ ಲೇಆಫ್ ಟ್ರೆಂಡ್ ಗಳ ಮಧ್ಯೆ ಬೆಂಗಳೂರಿನ 26 ವರ್ಷದ ಸಾಫ್ಟ್‌ವೇರ್ ಡೆವಲಪರ್ ಒಬ್ಬರು ತಮ್ಮ ವೃತ್ತಿ ಪಯಣವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು ಸಾಕಷ್ಟು ವೈರಲ್ ಆಗಿದೆ.

ಕೇವಲ ಮೂರು ವರ್ಷಗಳಲ್ಲಿ ಕಂಪನಿಗಳನ್ನು ಬದಲಾಯಿಸುವ ಮೂಲಕ ವರ್ಷಕ್ಕೆ 3.2 ಲಕ್ಷ ರೂಪಾಯಿಗಳಿಂದ 80 ಲಕ್ಷ (LPA) ರೂಪಾಯಿಗಳವರೆಗೆ ತಮ್ಮ ವೇತನವನ್ನು ಹೆಚ್ಚಿಸಿಕೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ. ಪ್ರಸ್ತುತ Google ನಲ್ಲಿ ಕೆಲಸ ಮಾಡುತ್ತಿರುವ ಅರ್ಕಾ ಮಜುಂದಾರ್, ನಿಷ್ಠೆಯಿಂದ ಒಂದೇ ಕಂಪನಿಯಲ್ಲಿ ಉಳಿಯುವುದರಿಂದಲೇ ವೇತನ ಹೆಚ್ಚಾಗುವುದಿಲ್ಲ ಎಂದು ಹೇಳಿದ್ದಾರೆ.

ಅವರು ತಮ್ಮ ಇನ್ಸ್ಗಾಗ್ರಾಂನಲ್ಲಿ ಹಂಚಿಕೊಂಡ ವಿಡಿಯೊದಲ್ಲಿ, ತಮ್ಮ ವೃತ್ತಿಯನ್ನು 23ನೇ ವಯಸ್ಸಿನಲ್ಲಿ TCS ಕಂಪೆನಿಯಲ್ಲಿ ಆರಂಭಿಸಿದ್ದು, ಆಗ ಅವರ ಸಂಬಳ 3.2 ರೂಪಾಯಿ ವರ್ಷಕ್ಕೆ ಆಗಿತ್ತು. ಎರಡು ವರ್ಷಗಳ ನಂತರ ಅವರು Kuku FM ಗೆ ಬದಲಾಯಿಸಿ 14 ರೂಪಾಯಿ ವರ್ಷಕ್ಕೆ ಗಳಿಸಿದರು. ನಂತರ ಅವರು Google ಕಂಪೆನಿಯಲ್ಲಿ ಕೆಲಸ ಪಡೆದು 80 ಲಕ್ಷ ರೂಪಾಯಿ ಪ್ಯಾಕೇಜ್‌ನೊಂದಿಗೆ ಕೆಲಸ ಪಡೆಯುವಲ್ಲಿ ಯಶಸ್ವಿಯಾದರು ಎಂದು ವಿವರಿಸಿದ್ದಾರೆ.

TCS Ninja ದಿಂದ Google ಇಂಜಿನಿಯರ್ ವರೆಗೆ ಅರ್ಕಾ ಪಯಣ

ಮಜುಂದಾರ್ ಅವರು 2021ರಲ್ಲಿ TCS‌ನ Ninja ಪ್ರೋಗ್ರಾಂ ಮೂಲಕ ಅಸಿಸ್ಟೆಂಟ್ ಸಿಸ್ಟಮ್ ಇಂಜಿನಿಯರ್ ಆಗಿ ತಮ್ಮ ವೃತ್ತಿಯನ್ನು ಆರಂಭಿಸಿದರು. ಆಗ ಅವರ ಸಂಬಳ ವರ್ಷಕ್ಕೆ 3.2 ಲಕ್ಷ ರೂಪಾಯಿ ಆಗಿತ್ತು. ಕಾಲೇಜಿನಿಂದ ಹೊಸದಾಗಿ ಹೊರಬಂದ ನಾನು ಆಗ ಕೆಲಸ ಕಲಿಯುವುದರಲ್ಲಿ ತುಂಬಾ ಉತ್ಸುಕನಾಗಿದ್ದೆ ಎನ್ನುತ್ತಾರೆ.

2022ರಲ್ಲಿ TCS‌ನ ಡಿಜಿಟಲ್ ಪ್ರೋಗ್ರಾಂ (Wings 1) ಪಾಸ್ ಮಾಡಿದ ನಂತರ ಅವರಿಗೆ ಸಿಸ್ಟಮ್ ಇಂಜಿನಿಯರ್ ಹುದ್ದೆಗೆ ಪದೋನ್ನತಿ ದೊರಕಿತು. ಇದರಿಂದ ಅವರ ಸಂಬಳ ಸುಮಾರು 7 ಲಕ್ಷ ರೂಪಾಯಿ ವರ್ಷಕ್ಕೆ ಏರಿಕೆಯಾಯಿತು. ಇದೇ ಸಮಯದಲ್ಲಿ ಅವರು ಡೇಟಾ ಸ್ಟ್ರಕ್ಚರ್ ಮತ್ತು ಆಲ್ಗೊರಿತಮ್ಸ್ (DSA) ಅಭ್ಯಾಸವನ್ನು ಆರಂಭಿಸಿದರು. ಇದು ಉತ್ಪನ್ನ ಆಧಾರಿತ ಟೆಕ್ ಉದ್ಯೋಗಗಳಿಗೆ ಬಹಳ ಮುಖ್ಯವೆಂದು ಪರಿಗಣಿಸಲಾಗುತ್ತದೆ.

380+ LeetCode ಪ್ರಾಬ್ಲಂ ಬಗೆಹರಿಸುವಿಕೆ, ಉದ್ಯೋಗದಲ್ಲಿ ದೊಡ್ಡ ಬದಲಾವಣೆ

2023ರ ವೇಳೆಗೆ, ಮಜುಂದಾರ್ ದಿನಕ್ಕೆ 5–6 ಗಂಟೆಗಳ ಕಾಲ DSA ಅಭ್ಯಾಸ ಮಾಡುತ್ತಿದ್ದೆ ಎಂದು ಹೇಳಿದ್ದಾರೆ. ಅವರು 380ಕ್ಕೂ ಹೆಚ್ಚು LeetCode ಸಮಸ್ಯೆಗಳನ್ನು ಪರಿಹರಿಸಿ ಮಧ್ಯಮ ಮತ್ತು ಕಠಿಣ ಮಟ್ಟದ ಪ್ರಶ್ನೆಗಳನ್ನು ಬಗೆಹರಿಸುವುದರ ಮೇಲೆ ಆತ್ಮವಿಶ್ವಾಸ ಗಳಿಸಿದರು.

2024ರ ಜನವರಿಯಲ್ಲಿ ಅವರು TCS ಹೊರಗೆ ಉದ್ಯೋಗಗಳಿಗೆ ಅರ್ಜಿ ಸಲ್ಲಿಸಲು ಆರಂಭಿಸಿದರು. ಆದರೆ ಮೊದಲ ಆಫರ್ ಪಡೆಯಲು ಸುಮಾರು ಎಂಟು ತಿಂಗಳು ಕಾಯಬೇಕಾಯಿತು ಎಂದು ಹೇಳಿದ್ದಾರೆ. ಹಲವಾರು ಸಂದರ್ಶನಗಳಲ್ಲಿ ವಿಫಲವಾದರೂ, ಕೊನೆಗೆ ಅವರು ಬೆಂಗಳೂರಿನ ಉತ್ಪನ್ನ ಸ್ಟಾರ್ಟ್‌ಅಪ್ Kuku FMನಲ್ಲಿ ಕೆಲಸ ಪಡೆದರು. ಅಲ್ಲಿ ಅವರ ಸಂಬಳ ವರ್ಷಕ್ಕೆ 14–15 ಲಕ್ಷ ಪ್ಯಾಕೇಜ್ ಗೆ ಏರಿಕೆಯಾಯಿತು.

ವೇತನದಲ್ಲಿ ಅತಿದೊಡ್ಡ ಏರಿಕೆ

2025ರಲ್ಲಿ ಅವರು Google ಸೇರಿದ್ದು, ವರ್ಷಕ್ಕೆ 80 ಲಕ್ಷ ರೂಪಾಯಿ ಪ್ಯಾಕೇಜ್ ಪಡೆದಿದ್ದು ತಮ್ಮ ವೃತ್ತಿಯ “ಅತಿದೊಡ್ಡ ಏರಿಕೆ” ಎಂದು ಹೇಳಿದ್ದಾರೆ. ಆಫರ್ ಪಡೆದ ನಂತರವೂ ಅವರು ಅಭ್ಯಾಸ ಮುಂದುವರೆಸಿದರು, ಗ್ರಾಫ್ಸ್, ಟ್ರೈಸ್ ಮತ್ತು ಡೈನಾಮಿಕ್ ಪ್ರೋಗ್ರಾಮಿಂಗ್ ಮುಂತಾದ ಉನ್ನತ ವಿಷಯಗಳನ್ನು ಕಲಿತು, ತಮ್ಮ LeetCode ಸಮಸ್ಯೆಗಳ ಸಂಖ್ಯೆಯನ್ನು 750ಕ್ಕೂ ಹೆಚ್ಚು ವಿಸ್ತರಿಸಿಕೊಂಡರು.

ನನಗೆ ಕಾಲೇಜಿನಲ್ಲಿ ಇರುವಾಗಲೇ Google ನಲ್ಲಿ ಕೆಲಸ ಮಾಡುವ ಕನಸು ಇತ್ತು, ಬಹುತೇಕ ಎಲ್ಲಾ BTech ವಿದ್ಯಾರ್ಥಿಗಳಂತೆ. ಆದರೆ ಮಾರ್ಗದರ್ಶನದ ಕೊರತೆ ಮತ್ತು ಟಿಯರ್-3 ಕಾಲೇಜಿನ ಮಿತಿಗಳಿಂದ ನಾನು 3.2 ಲಕ್ಷ ರೂಪಾಯಿ ಸಂಬಳದೊಂದಿಗೆ TCS ನಲ್ಲಿ ಸೇರಬೇಕಾಯಿತು ಎಂದು ಮಜುಂದಾರ್ ಹೇಳಿದರು. ಇನ್ನು ಐದು ವರ್ಷಗಳಲ್ಲಿ ನಿವೃತ್ತಿ ಪಡೆದು ಸ್ವಂತ ಉದ್ಯಮ ಆರಂಭಿಸುವ ಆಸೆ ನನಗಿದೆ ಎಂದು ಹೇಳಿಕೊಂಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ವ್ಯತಿರಿಕ್ತ ಪ್ರತಿಕ್ರಿಯೆ

ಅರ್ಕಾ ಅವರ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿದ್ದು, ಅವರ ಹೇಳಿಕೆಗಳು ಕೆಲವರಲ್ಲಿ ಅನುಮಾನ ಹುಟ್ಟಿಸಿವೆ. ಕೆಲವು ಬಳಕೆದಾರರು 15 ಲಕ್ಷ ರೂಪಾಯಿಗಳಿಂದ 80 ಲಕ್ಷ ರೂಪಾಯಿಗಳವರೆಗೆ ಹೇಗೆ ಏರಿಕೆಯಾಯಿತು ಎಂದು ಪ್ರಶ್ನಿಸಿದ್ದಾರೆ. 15 ಲಕ್ಷ ರೂಪಾಯಿಗಳಿಂದ ದಿಢೀರನೆ 80 ಲಕ್ಷ ರೂಪಾಯಿಗಳವರೆಗೆ ಹೋಗುವುದು ಅಸಾಧ್ಯವೆನಿಸುತ್ತದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ನೀವು ಗೂಗಲ್ ಕಂಪೆನಿಯವರನ್ನು ಹೇಗೆ ಮನವರಿಕೆ ಮಾಡಿದ್ದೀರಿ? ನಿಮ್ಮ ಹಿಂದಿನ ಸಂಬಳವನ್ನು ಪರಿಗಣಿಸಲಿಲ್ಲವೇ ಎಂದು ಕೇಳಿದ್ದಾರೆ.

ಇನ್ನೂ ಕೆಲವರು ಕಠಿಣವಾಗಿ ಪ್ರತಿಕ್ರಿಯಿಸಿದ್ದಾರೆ. TCS ನಲ್ಲಿ ನಾನು 14 ವರ್ಷ ಕೆಲಸ ಮಾಡಿದ್ದೇನೆ… ನಿಮ್ಮ ಸಂಬಳದ ಒಂಬತ್ತನೇ ಭಾಗ ಮಾತ್ರ ಪಡೆಯುತ್ತಿದ್ದೇನೆ ಎಂದು ಒಬ್ಬರು ಬರೆದರೆ, ಮತ್ತೊಬ್ಬರು 80 ಲಕ್ಷ ರೂಪಾಯಿ ಸಂಬಳ ಪಡೆದವರು ಇದನ್ನು ಇಂತಹ ಪ್ಲಾಟ್‌ಫಾರ್ಮ್‌ನಲ್ಲಿ ಹಂಚಿಕೊಳ್ಳುವುದಿಲ್ಲ. ಇದು ಸುಳ್ಳು ಎಂದು ಹೇಳಿದ್ದಾರೆ.

ಆದರೆ ಮಜುಂದಾರ್ ನನ್ನ ಶಿಸ್ತಿನ ಅಭ್ಯಾಸ, ಸತತ ಕಠಿಣ ಪರಿಶ್ರಮ ಮತ್ತು ಸೂಕ್ತ ನಿರ್ಧಾರಗಳಿಂದ ಸಾಧ್ಯವಾಯಿತು ಎಂದು ಹೇಳಿದ್ದಾರೆ.

ಜನರು Googleನಲ್ಲಿ ನನ್ನ 80 ಲಕ್ಷ ರೂಪಾಯಿ ಪ್ಯಾಕೇಜ್ ಮಾತ್ರ ನೋಡುತ್ತಾರೆ, ಅದರ ಹಿಂದಿನ ನನ್ನ ಹೋರಾಟ ಅರ್ಥ ಮಾಡಿಕೊಳ್ಳುವುದಿಲ್ಲ ಎಂದಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇರಾನ್: ಮಶಾದ್ ವಿಮಾನ ನಿಲ್ದಾಣದ ಮೇಲೆ ಅಮೆರಿಕ ದಾಳಿ, ಮಾನವೀಯ ನೆರವು ಸಂಗ್ರಹಿಸಲು ಭಾರತಕ್ಕೆ ಬರಬೇಕಿದ್ದ ವಿಮಾನಕ್ಕೆ ಹಾನಿ!

ಸಿದ್ದರಾಮಯ್ಯ ಅಂದು ಕಳ್ಳಮತಗಳಿಂದ ನನ್ನ ವಿರುದ್ಧ ಬಾದಾಮಿಯಲ್ಲಿ ಗೆದ್ದರು : ಶ್ರೀರಾಮುಲು

ಒಪ್ಪಂದಕ್ಕೆ ಒಪ್ಕೋತೀರೋ ಇಲ್ವೋ.. Kharg ದ್ವೀಪ ಸ್ಫೋಟಿಸ್ತೀವಿ..: ಇರಾನ್ ಗೆ Donald Trump ಅಂತಿಮ ಗಡುವು

ಇತರರಿಗೆ ಹೋಲಿಸಿದರೆ ಡಾಲರ್ ಎದುರು ರೂಪಾಯಿ ಮೌಲ್ಯ ಉತ್ತಮವಾಗಿದೆ: ನಿರ್ಮಲಾ ಸೀತಾರಾಮನ್

IPL 2026: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್; CSK ವಿರುದ್ಧ RRಗೆ ಭರ್ಜರಿ ಗೆಲುವು

SCROLL FOR NEXT