ಭಾರತೀಯ ಷೇರು ಮಾರುಕಟ್ಟೆ 
ವಾಣಿಜ್ಯ

Indian Stock Market: ಸತತ 2ನೇ ದಿನವೂ ಭಾರಿ ಕುಸಿತ; ಹೂಡಿಕೆದಾರರ 11 ಲಕ್ಷ ಕೋಟಿ ರೂ ನಷ್ಟ; ಕನಿಷ್ಠ ರೂಪಾಯಿ ಮೌಲ್ಯ ಮಟ್ಟಕ್ಕೆ

ಮಂಗಳವಾರ ಭಾರತೀಯ ಷೇರುಮಾರುಕಟ್ಟೆ ಭಾರಿ ಪ್ರಮಾಣದ ಕುಸಿತ ಕಂಡಿದ್ದು, ಷೇರುಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ರೆಡ್ ನಲ್ಲಿ ವಹಿವಾಟು ಅಂತ್ಯಗೊಳಿಸಿದೆ.

ಮುಂಬೈ: ಸತತ 2ನೇ ದಿನವೂ ಭಾರತೀಯ ಷೇರುಮಾರುಕಟ್ಟೆ ಭಾರಿ ಕುಸಿತ ಕಂಡಿದ್ದು, ಮಂಗಳವಾರ ಹೂಡಿಕೆದಾರರ ಬರೊಬ್ಬರಿ 11 ಲಕ್ಷ ಕೋಟಿ ರೂ ಹೂಡಿಕೆ ನಷ್ಟವಾಗಿದೆ.

ಮಂಗಳವಾರ ಭಾರತೀಯ ಷೇರುಮಾರುಕಟ್ಟೆ ಭಾರಿ ಪ್ರಮಾಣದ ಕುಸಿತ ಕಂಡಿದ್ದು, ಷೇರುಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ರೆಡ್ ನಲ್ಲಿ ವಹಿವಾಟು ಅಂತ್ಯಗೊಳಿಸಿದೆ. ಇಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ ಶೇ.1.92ರಷ್ಟು ಇಳಿಕೆ ಕಂಡಿದ್ದರೆ, ನಿಫ್ಟಿ ಕೂಡ ಶೇ.1.83ರಷ್ಟು ಇಳಿಕೆ ದಾಖಲಿಸಿದೆ.

ಸೆನ್ಸೆಕ್ಸ್ ಇಂದು ಬರೊಬ್ಬರಿ 1,456.04 ಅಂಕಗಳ ಇಳಿಕೆಯೊಂದಿಗೆ 74,559.24 ಅಂಕಗಳಿಗೆ ಕುಸಿತವಾಗಿದ್ದರೆ, ನಿಫ್ಟಿ 436.30ಅಂಕಗಳ ಇಳಿಕೆಯೊಂದಿಗೆ 23,379.55 ಅಂಕಗಳಿಗೆ ಕುಸಿತವಾಗಿ ದಿನದ ವಹಿವಾಟು ಅಂತ್ಯಗೊಳಿಸಿದೆ.

ಇಂದಿನ ವಹಿವಾಟಿನಲ್ಲಿ ಐಟಿ, ರಿಯಾಲ್ಟಿ, ಗ್ರಾಹಕ ಬಾಳಿಕೆ ಬರುವ ಮತ್ತು ಹಣಕಾಸು ಷೇರುಗಳು ಭಾರಿ ಕುಸಿತ ಕಂಡಿವೆ.

ಯಾರಿಗೆ ಲಾಭ? ಯಾರಿಗೆ ನಷ್ಟ?

ಇಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ ನಲ್ಲಿ ಪಟ್ಟಿ ಮಾಡಲಾದ ಸಂಸ್ಥೆಗಳ ಪೈಕಿ ಟೆಕ್ ಮಹೀಂದ್ರಾ, ಅದಾನಿ ಪೋರ್ಟ್ಸ್, ಎಚ್‌ಸಿಎಲ್ ಟೆಕ್, ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್, ಟೈಟಾನ್ ಮತ್ತು ಭಾರತ್ ಎಲೆಕ್ಟ್ರಾನಿಕ್ಸ್ ಷೇರುಗಳು ನಷ್ಟ ಕಂಡಿದೆ. ಅಂತೆಯೇ ಇಂದಿನ ವಹಿವಾಟಿನಲ್ಲಿ ಲಾಭಾಂಶ ಗಳಿಸಿದ ಏಕೈಕ ಸಂಸ್ಥೆ ಎಂದರೆ ಎಸ್ ಬಿಎ ಮಾತ್ರ ಎಂದು ವರದಿಯಾಗಿದೆ.

ಹೂಡಿಕೆದಾರರ 11 ಲಕ್ಷ ಕೋಟಿ ರೂ. ನಷ್ಟ

ಸೋಮವಾರದ ವಹಿವಾಟು ಮುಕ್ತಾಯದ ವೇಳೆಗೆ, ಒಟ್ಟು ಬಿಎಸ್‌ಇ ಸೆನ್ಸೆಕ್ಸ್ ಮಾರುಕಟ್ಟೆ ಬಂಡವಾಳೀಕರಣವು 4,67,30,829 ರೂ.ಗಳಷ್ಟಿತ್ತು. ಆದರೆ, ಮಂಗಳವಾರದ ಮುಕ್ತಾಯದ ವೇಳೆಗೆ ಅದು 4,56,99,946 ರೂ.ಗಳಿಗೆ ಕುಸಿದಿದೆ. ಆ ಮೂಲಕ ಹೂಡಿಕೆದಾರರ 11 ಲಕ್ಷ ಕೋಟಿ ರೂ ಬಂಡವಾಳ ನಷ್ಟವಾಗಿದೆ.

ಕಚ್ಚಾತೈಲ ಬೆಲೆ ಏರಿಕೆ, ರೂಪಾಯಿ ಮೌಲ್ಯ ಕುಸಿತ

ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲವು ಬ್ಯಾರೆಲ್‌ಗೆ 2.75 ಪ್ರತಿಶತದಷ್ಟು ಏರಿಕೆಯಾಗಿ 107.1 ಡಾಲರ್‌ಗೆ ವಹಿವಾಟು ನಡೆಸುತ್ತಿದೆ. ಅಂತೆಯೇ ಮಂಗಳವಾರ ಯುಎಸ್ ಡಾಲರ್ ವಿರುದ್ಧ ರೂಪಾಯಿ ಮೌಲ್ಯ 35 ಪೈಸೆ ಕುಸಿತ ಕಂಡು 95.63 (ತಾತ್ಕಾಲಿಕ) ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ತಲುಪಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹಡಗುಗಳ ಮೇಲೆ ಇರಾನ್ ದಾಳಿ: 'ಕದನ ವಿರಾಮ ಉಲ್ಲಂಘನೆ ಮೂರ್ಖತನ-ಟ್ರಂಪ್ ಕೆಂಡಾಮಂಡಲ!

Bidadi Township Project: ಸಿಎಂ ಡಿಕೆ ಶಿವಕುಮಾರ್ ಗಾಗಿ ಭೈರಮಂಗಲದಲ್ಲಿ ನಾಳೆ ಸಂಜೆಯವರೆಗೂ ಕಾಯುವೆ- ಕುಮಾರಸ್ವಾಮಿ

Op Sindoor: ವರ್ಷದ ಬಳಿಕ ಮಹತ್ವದ ಮಾಹಿತಿ ಬಹಿರಂಗಪಡಿಸಿದ ಕೇಂದ್ರ ಸರ್ಕಾರ, ಆರು ಹುತಾತ್ಮ ಯೋಧರ ಹೆಸರು ಪ್ರಕಟ!

ದೆಹಲಿಗೆ ತಮಿಳುನಾಡು ವಿಶೇಷ ಪ್ರತಿನಿಧಿಯಾಗಿ ಜನ ನಾಯಗನ್ ನಿರ್ಮಾಪಕನ ನೇಮಕ!

ಮುಂದಿನ ಚುನಾವಣೆಯಲ್ಲಿ ನೀನು ಸೋತರೆ HDK ಮನೆಯ ವಾಚ್ ಮೆನ್ ಆಗ್ತೀಯಾ? ಪ್ರದೀಪ್ ಈಶ್ವರ್ ಗೆ JDS ಶಾಸಕನ ಸವಾಲು