ಮರ್ಚೆಂಟ್ ಡಿಸ್ಕೌಂಟ್ ರೇಟ್ ಶುಲ್ಕ ಜಾರಿ ಮುಂದೂಡಿಕೆ ಸಾಧ್ಯತೆ? AI Image
ವಾಣಿಜ್ಯ

UPI ಬಳಕೆದಾರರಿಗೆ ಸಿಹಿಸುದ್ದಿ! ಯುಪಿಐ MDR ಶುಲ್ಕ 2027ರ ಚುನಾವಣೆವರೆಗೆ ಮುಂದೂಡಿಕೆ ಸಾಧ್ಯತೆ?

ಆಯ್ದ ಯುಪಿಐ ವಹಿವಾಟುಗಳ ಮೇಲೆ ವಿಧಿಸಲು ಉದ್ದೇಶಿಸಲಾಗಿದ್ದ ಮರ್ಚೆಂಟ್ ಡಿಸ್ಕೌಂಟ್ ರೇಟ್ ಶುಲ್ಕದ ಜಾರಿಯು 2027ರ ವಿಧಾನಸಭಾ ಚುನಾವಣೆಗಳವರೆಗೆ ವಿಳಂಬವಾಗುವ ಸಾಧ್ಯತೆಯಿದೆ. ಆ ಕುರಿತ ವರದಿ ಇಲ್ಲಿದೆ:

ಮುಂಬೈ (ಮಹಾರಾಷ್ಟ್ರ): ಆಯ್ದ ಯುಪಿಐ (UPI) ವಹಿವಾಟುಗಳ ಮೇಲೆ ವಿಧಿಸಲು ಉದ್ದೇಶಿಸಲಾಗಿದ್ದ ಮರ್ಚೆಂಟ್ ಡಿಸ್ಕೌಂಟ್ ರೇಟ್ (MDR) ಶುಲ್ಕದ ಜಾರಿಯು 2027ರ ವಿಧಾನಸಭಾ ಚುನಾವಣೆಗಳವರೆಗೆ ವಿಳಂಬವಾಗುವ ಸಾಧ್ಯತೆಯಿದೆ. ವ್ಯಾಪಾರಿ ಸಂಘಟನೆಗಳ ವಿರೋಧ ಮತ್ತು ರಾಜಕೀಯ ಸೂಕ್ಷ್ಮತೆಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಈ ನಿರ್ಧಾರಕ್ಕೆ ಮುಂದಾಗಿದೆ ಎನ್ನಲಾಗಿದೆ. ಆ ಕುರಿತ ವರದಿ ಇಲ್ಲಿದೆ:

ವಿಳಂಬಕ್ಕೆ ಕಾರಣವೇನು?

2027ರ ಮೊದಲಾರ್ಧದಲ್ಲಿ ಉತ್ತರ ಪ್ರದೇಶ, ಪಂಜಾಬ್, ಉತ್ತರಾಖಂಡ, ಗೋವಾ ಮತ್ತು ಮಣಿಪುರ ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿವೆ. ಈ ಸಂದರ್ಭದಲ್ಲಿ ವ್ಯಾಪಾರಿಗಳು ಮತ್ತು ವಾಣಿಜ್ಯ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾಗಬಹುದು ಎಂಬ ಆತಂಕದಿಂದ ಸರ್ಕಾರ ಈ ನಿರ್ಧಾರವನ್ನು ಮುಂದೂಡಲು ಚಿಂತಿಸುತ್ತಿದೆ ಎನ್ನಲಾಗಿದೆ. ಇದರೊಂದಿಗೆ, ನಿಯಂತ್ರಕ ಮತ್ತು ಕಾರ್ಯಾಚರಣೆಯ ಮಟ್ಟದಲ್ಲಿ ಬಹುತೇಕ ಸಿದ್ಧತೆಗಳು ಪೂರ್ಣಗೊಂಡಿದ್ದರೂ, ಶುಲ್ಕ ಜಾರಿಗೆ ತರುವ ನಿಖರವಾದ ದಿನಾಂಕದ ಬಗ್ಗೆ ಸರ್ಕಾರ, ಕೇಂದ್ರ ಸರ್ಕಾರ, ಭಾರತೀಯ ರಿಸರ್ವ್ ಬ್ಯಾಂಕ್ (RBI) ಮತ್ತು ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (NPCI) ನಡುವೆ, ಇನ್ನೂ ಒಮ್ಮತ ಮೂಡಿಲ್ಲ ಎನ್ನಲಾಗಿದೆ. ಏತನ್ಮಧ್ಯೆ, ಈ ಹಿಂದೆ ಅಕ್ಟೋಬರ್ 15, 2026ರಿಂದಲೇ ಈ ಶುಲ್ಕ ಜಾರಿಯಾಗಬೇಕಿತ್ತಾದರೂ, ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಮುಂದೂಡಲಾಗಿತ್ತು.

ಇದರ ನಡುವೆ, UPI ಶುಲ್ಕಗಳು ಮತ್ತು ಚುನಾವಣೆಗೆ ಸಂಬಂಧಿಸಿದ ಅನಿಶ್ಚಿತತೆಯು ಫಿನ್‌ಟೆಕ್ (fintech) ಷೇರುಗಳ ಮೇಲೆ ಪರಿಣಾಮ ಬೀರುತ್ತಿವೆ ಎನ್ನಲಾಗಿದ್ದು, ಪೇಟಿಎಂ, ಮೊಬಿಕ್ವಿಕ್ ಮತ್ತು ಪೈನ್ ಲ್ಯಾಬ್ಸ್ ನಂತಹ ಫಿನ್‌ಟೆಕ್ ಪ್ಲಾಟ್‌ಫಾರ್ಮ್‌ಗಳ ಷೇರುಗಳು ಗುರುವಾರ 7% ರಷ್ಟು ಕುಸಿದಿವೆ. ಅದರಲ್ಲೂ, ಆಯ್ದ ಯುನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ (UPI) ವಹಿವಾಟುಗಳ ಮೇಲೆ 'ಮರ್ಚೆಂಟ್ ಡಿಸ್ಕೌಂಟ್ ರೇಟ್' (MDR) ಜಾರಿಯನ್ನು ಮತ್ತಷ್ಟು ಮುಂದೂಡಬಹುದು ಎಂಬ ವರದಿಗಳು ಹೊರಬಂದಿರುವುದೇ ಈ ಕುಸಿತಕ್ಕೆ ಕಾರಣ ಎನ್ನಲಾಗಿದೆ.

ಶುಲ್ಕದ ನಿಯಮಗಳು ಏನು ಹೇಳುತ್ತವೆ?

ಪ್ರಸ್ತಾವಿತ ಚೌಕಟ್ಟಿನ ಪ್ರಕಾರ, 2,000 ರೂ.ಗಿಂತ ಹೆಚ್ಚಿನ ಮೌಲ್ಯದ ಆಯ್ದ ವ್ಯಾಪಾರ ವಹಿವಾಟುಗಳ (P2M) ಮೇಲೆ ಮಾತ್ರ ವ್ಯಾಪಾರಿಗಳಿಗೆ ಶೇ. 0.4ರಷ್ಟು MDR ಶುಲ್ಕ ಅನ್ವಯವಾಗುತ್ತದೆ (75,000 ರೂ. ಮತ್ತು ಅದಕ್ಕಿಂತ ಹೆಚ್ಚಿನ ವಹಿವಾಟುಗಳಿಗೆ ಗರಿಷ್ಠ 300 ರೂ. ಮಿತಿ ಇರುತ್ತದೆ). ಆದರೆ, ವ್ಯಕ್ತಿಗಳಿಂದ ವ್ಯಕ್ತಿಗಳಿಗೆ (P2P) ಹಣ ವರ್ಗಾವಣೆ ಮಾಡುವುದು, 2,000 ರೂ.ವರೆಗಿನ ಅಂಗಡಿ ಪಾವತಿಗಳು ಮತ್ತು ಸಣ್ಣ ವ್ಯಾಪಾರಿಗಳ ವಹಿವಾಟುಗಳಿಗೆ ಈ ಶುಲ್ಕ ಅನ್ವಯಿಸುವುದಿಲ್ಲ. ಹಾಗಾಗಿ, ಗ್ರಾಹಕರು ನೇರವಾಗಿ ಯಾವುದೇ ಶುಲ್ಕ ಪಾವತಿಸಬೇಕಾಗಿಲ್ಲ.

ದೆಹಲಿ ವಿಮಾನ ನಿಲ್ದಾಣದಲ್ಲಿ ಆಗಂತುಕನ ಆತಂಕ: ಟಿಕೆಟ್ ಇಲ್ಲ, ದಾಖಲೆಗಳೂ ಇಲ್ಲ, ಬಲವಂತವಾಗಿ ನುಗ್ಗಲು ಯತ್ನಿಸಿದವ CISF ವಶಕ್ಕೆ! Video

Arnab ಚಂಡಮಾರುತ ಸಂಕಷ್ಟದಲ್ಲಿ ನೆರವು; ಕರ್ನಾಟಕಕ್ಕೆ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಧನ್ಯವಾದ; ಡಿಕೆಶಿ ಹೇಳಿದ್ದೇನು?

Wellington Test: ಸಂಕಷ್ಟದಲ್ಲಿದ್ದ ನ್ಯೂಜಿಲೆಂಡ್ ಫಿಲಿಪ್ಸ್-ನಿಕೋಲ್ಸ್ ಆಸರೆ, ಮೊದಲ ದಿನದಾಟದ ಅಂತ್ಯಕ್ಕೆ NZ 243/5

ತಮಿಳುನಾಡಿನಲ್ಲಿ ಅಮಾನವೀಯ ಘಟನೆ; ಪಾಠ ಕೇಳದಿದ್ದಕ್ಕೆ 3 ವರ್ಷದ ಬಾಲಕನ ಕೈಕಟ್ಟಿ, ಹಾಳೆಯಲ್ಲಿ ಸುತ್ತಿದ ಶಿಕ್ಷಕಿ!

ದೇವಾಲಯದ ಹುಂಡಿ ತುಂಬಿದರೂ ಅರ್ಚಕರ ಹೊಟ್ಟೆ ತುಂಬುತ್ತಿಲ್ಲ; ಹಾಲು, ತುಪ್ಪ, ಅಕ್ಕಿ ಬೆಲೆ ಏರಿಕೆ, ವೇತನ ಹೆಚ್ಚಳ, ವಿಮೆಗೆ ಆಗ್ರಹ!