ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಾಣಿಜ್ಯ

'ಐಕಾನಿಕ್ ಡ್ರಿಂಕ್ಸ್' ಮತ್ತೆ ಬರುತ್ತಾ? ಇದೇನಿದು Gold Spot ಜೊತೆಗೆ ಸಾಕ್ಷಿ ಧೋನಿ ಫೋಟೋ!

ವಾರಾಂತ್ಯದಲ್ಲಿ ಸಾಕ್ಷಿ ಧೋನಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಪೋಟೋದಲ್ಲಿ ಗೋಲ್ಡ್ ಸ್ಪಾಟ್ ಕ್ಯಾನ್‌ಗಳಿವೆ. ಇದು ವೈರಲ್ ಆಗಿದ್ದು, ಸಾಕ್ಷಿ ಮತ್ತೆ ಇದನ್ನು ಲಾಂಚ್ ಮಾಡಿದ್ದಾರೆ ಎಂಬ ಊಹಾಪೋಹ ಹರಿದಾಡುತ್ತಿದೆ.

ಸಾಕ್ಷಿ ಧೋನಿ
Nagaraja AB
Updated On : 24 Nov 2026, 1:06 pm

ಕ್ರಿಕೆಟಿಗ ಎಂಎಸ್ ಧೋನಿ ಅವರ ಪತ್ನಿ ಸಾಕ್ಷಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಫೋಟೋವೊಂದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. 1952 ರಲ್ಲಿ ಪಾರ್ಲೆ ಭಾರತದಲ್ಲಿ ಬಿಡುಗಡೆ ಮಾಡಿದ ಮತ್ತು 2000 ರಲ್ಲಿ ಕೋಕಾ-ಕೋಲಾ ಸ್ಥಗಿತಗೊಳಿಸಿದ ಜನಪ್ರಿಯ ಕಿತ್ತಳೆ ರುಚಿಯ ಕಾರ್ಬೊನೇಟೆಡ್ ತಂಪು ಪಾನೀಯ ಗೋಲ್ಡ್ ಸ್ಪಾಟ್ ( Gold Spot) ಬಗ್ಗೆ ಸಂಚಲನ ಮೂಡಿಸಿದೆ.

ವಾರಾಂತ್ಯದಲ್ಲಿ ಸಾಕ್ಷಿ ಧೋನಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಪೋಟೋದಲ್ಲಿ ಗೋಲ್ಡ್ ಸ್ಪಾಟ್ ಕ್ಯಾನ್‌ಗಳಿವೆ. ಇದು ವೈರಲ್ ಆಗಿದ್ದು, ಸಾಕ್ಷಿ ಮತ್ತೆ ಇದನ್ನು ಲಾಂಚ್ ಮಾಡಿದ್ದಾರೆ ಎಂಬ ಊಹಾಪೋಹ ಹರಿದಾಡುತ್ತಿದೆ. ಆದಾಗ್ಯೂ, 1993 ರಲ್ಲಿ ಪಾರ್ಲೆ ಗ್ರೂಪ್‌ನಿಂದ ಕೋಕಾ-ಕೋಲಾ ಕಂಪನಿ ಸ್ವಾಧೀನಪಡಿಸಿಕೊಂಡಿದ್ದ ಬ್ರ್ಯಾಂಡ್ ಪ್ರಚಾರಕ್ಕೆ ಧೋನಿ ಸಹಿ ಮಾಡಿದ್ದಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

26 ವರ್ಷಗಳ ಅಂತರದ ಬಳಿಕ ಕೋಕಾ-ಕೋಲಾ Gold Spot ಮರಳಿ ತರಲು ತಯಾರಿ ನಡೆಸುತ್ತಿದೆ ಎಂಬ ವರದಿಗಳ ನಡುವೆ ಈ ಊಹಾಪೋಹ ಕೇಳಿಬಂದಿದೆ. ದಿ ಎಕನಾಮಿಕ್ ಟೈಮ್ಸ್‌ನ ವರದಿಯ ಪ್ರಕಾರ, ಈ ಪಾನೀಯವು ಮುಂದಿನ ವಾರದ ಆರಂಭದಲ್ಲಿ ಕಡಿಮೆ-ಸಕ್ಕರೆ ಅಥವಾ ಸಕ್ಕರೆ ರಹಿತ ಸೂತ್ರೀಕರಣದಲ್ಲಿ ಭಾರತೀಯ ಮಾರುಕಟ್ಟೆಗೆ ಮರಳುವ ನಿರೀಕ್ಷೆಯಿದೆ.

Advertisement

Advertisement

ಭಾರತದ ತಂಪು ಪಾನೀಯಗಳ ಮಾರುಕಟ್ಟೆಯು ಈಗಾಗಲೇ ಇರುವ ಕಂಪನಿಗಳು ಹಾಗೂ ಮಾರುಕಟ್ಟೆ ಪ್ರವೇಶಿಸುವ ಕೆಲವು ಪ್ರಾದೇಶಿಕ ಬ್ರ್ಯಾಂಡ್‌ಗಳಿಂದ ಹೆಚ್ಚುತ್ತಿರುವ ಸ್ಪರ್ಧೆಯನ್ನು ಕಾಣುತ್ತಿರುವ ಸಮಯದಲ್ಲಿ ಈ ಮಾತು ಕೇಳಿಬರುತ್ತಿದೆ.

ಈ ಮಧ್ಯೆ ಫೋಟೋಗಳು ಬಳಕೆದಾರರಿಗೆ 90 ರ ದಶಕದ ನೆನಪುಗಳನ್ನು ಮರುಕಳಿಸುವಂತೆ ಮಾಡುತ್ತಿವೆ. ಗೋಲ್ಡ್ ಸ್ಪಾಟ್ ಅನ್ನು ಪ್ರಯತ್ನಿಸಲು ಇಷ್ಟಪಡುತ್ತೇನೆ ಎಂದು ನೆಟ್ಟಿಗರೊಬ್ಬರು ಕೇಳಿದ್ದಾರೆ. ಅದು OG ಗೋಲ್ಡ್ ಸ್ಪಾಟ್ ಆಗಿದೆಯೇ?" ಎಂದು ಮತ್ತೋರ್ವ ಬಳಕೆದಾರರು ಕೇಳಿದ್ದಾರೆ.

ಒಂದು ಕಾಲದಲ್ಲಿ 'ಗೋಲ್ಡ್ ಸ್ಪಾಟ್' (Gold Spot) ಭಾರತದ ಅತ್ಯಂತ ಸುಪರಿಚಿತ ಸ್ಥಳೀಯ ತಂಪು ಪಾನೀಯ ಬ್ರಾಂಡ್‌ಗಳಲ್ಲಿ ಒಂದಾಗಿತ್ತು. ವಿಶೇಷವಾಗಿ 1980 ಮತ್ತು 1990ರ ದಶಕಗಳಲ್ಲಿ ಇದು ಹೆಚ್ಚು ಜನಪ್ರಿಯವಾಗಿತ್ತು. ತನ್ನ ಗಾಢ ಕಿತ್ತಳೆ ಬಣ್ಣ ಮತ್ತು ವಿಶಿಷ್ಟ ರುಚಿಗೆ ಹೆಸರುವಾಸಿಯಾಗಿದ್ದ ಈ ಪಾನೀಯವು ಮಕ್ಕಳು ಹಾಗೂ ಯುವಜನರ ನಡುವೆ ಬಹಳ ಜನಪ್ರಿಯವಾಯಿತು.

Also Read

'IPL 2027ರ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವುದು ಎಂಎಸ್ ಧೋನಿ ಕೆಲಸವಲ್ಲ': CSK ಮೆಂಟರ್ ಬಗ್ಗೆ ಇರ್ಫಾನ್ ಪಠಾಣ್

ಈ ಬ್ರಾಂಡ್ 'ಪಾರ್ಲೆ' (Parle) ಸಂಸ್ಥೆಯ ಪಾನೀಯಗಳ ಶ್ರೇಣಿಯ ಭಾಗವಾಗಿತ್ತು; ಇದೇ ಶ್ರೇಣಿಯಲ್ಲಿ 'ಥಮ್ಸ್ ಅಪ್' (Thums Up), 'ಲಿಮ್ಕಾ' (Limca) ಮತ್ತು 'ಮಾಝಾ' (Maaza) ಕೂಡ ಇದ್ದವು. ನಂತರದ ದಿನಗಳಲ್ಲಿ, ಈ ಬ್ರಾಂಡ್‌ಗಳನ್ನು 'ಕೋಕಾ-ಕೋಲಾ' (Coca-Cola) ಸಂಸ್ಥೆಯು ಖರೀದಿಸಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments