ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಾಣಿಜ್ಯ

ಪ್ರತಿ ಮಗುವಿಗೂ ₹21,500 ಮೌಲ್ಯದ ಭರ್ಜರಿ ಗಿಫ್ಟ್ ಘೋಷಿಸಿದ Elon Musk: 7.2 ಕೋಟಿ ಮಕ್ಕಳಿಗೆ ಉಚಿತವಾಗಿ ಸಿಗಲಿದೆ ತಲಾ 2 SpaceX ಷೇರು!

ಅಮೆರಿಕದ ಪ್ರತಿ ಮಗುವಿಗೂ ತಲಾ 2 ಸ್ಪೇಸ್‌ಎಕ್ಸ್ ಷೇರುಗಳನ್ನು ಉಚಿತವಾಗಿ ನೀಡುವುದಾಗಿ ಎಲಾನ್ ಮಸ್ಕ್ ಮತ್ತು ಸ್ಪೇಸ್‌ಎಕ್ಸ್ ಸಂಸ್ಥೆ ಅಧಿಕೃತವಾಗಿ ಘೋಷಿಸಿವೆ. ಆ ಕುರಿತ ವರದಿ ಇಲ್ಲಿದೆ:

ಅಮೆರಿಕದ ಮಕ್ಕಳಿಗೆ ಎಲಾನ್ ಮಸ್ಕ್ ಬಂಪರ್ ಕೊಡುಗೆ! — Online Desk
Hruthin H P
Updated On : 27 Nov 2026, 1:04 pm

ಕ್ಯಾಲಿಫೋರ್ನಿಯಾ (ಅಮೆರಿಕ): ವಿಶ್ವದ ಅತ್ಯಂತ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ಅವರು ಅಮೆರಿಕದ ಪ್ರತಿಯೊಂದು ಮಗುವಿಗೂ ತಲಾ 2 ಸ್ಪೇಸ್‌ಎಕ್ಸ್ ಷೇರುಗಳನ್ನು ಉಚಿತವಾಗಿ ನೀಡುವುದಾಗಿ ಘೋಷಿಸಿದ್ದಾರೆ. ಈ ಬೃಹತ್ ಕೊಡುಗೆಯ ಒಟ್ಟು ಮೌಲ್ಯ ಸುಮಾರು $18 ಬಿಲಿಯನ್ (ಸುಮಾರು ₹1.5 ಲಕ್ಷ ಕೋಟಿಗೂ ಅಧಿಕ) ಎಂದು ಅಂದಾಜಿಸಲಾಗಿದೆ. ಆ ಕುರಿತ ವರದಿ ಇಲ್ಲಿದೆ:

ಟ್ರಂಪ್ ಖಾತೆಗಳಿಗೆ ಲಿಂಕ್

ಅಮೆರಿಕದ ಸುಮಾರು 7.2 ಕೋಟಿ ಮಕ್ಕಳಿಗೆ ತಲಾ 2 ಷೇರುಗಳು ಸಿಗಲಿವೆ. ಇದರಲ್ಲಿ ಒಂದು ಷೇರನ್ನು ಸ್ಪೇಸ್‌ಎಕ್ಸ್ ಕಂಪನಿಯು ಹೊಸದಾಗಿ ಬಿಡುಗಡೆ ಮಾಡಲಿದ್ದು, ಮತ್ತೊಂದು ಷೇರನ್ನು ಎಲಾನ್ ಮಸ್ಕ್ ತಮ್ಮ ವೈಯಕ್ತಿಕ ಪಾಲಿನಿಂದ ನೀಡಲಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಮಸ್ಕ್, ಸ್ಪೇಸ್‌ಎಕ್ಸ್ ಕಂಪನಿಯ ವತಿಯಿಂದ ನೀಡಲಾಗುವ ಮೊದಲ ಷೇರು ಮುಂದಿನ ತಿಂಗಳು (ಡಿಸೆಂಬರ್ 2026) ವರ್ಗಾವಣೆಯಾಗಲಿದೆ. ಜೊತೆಗೆ ತಮ್ಮ ವೈಯಕ್ತಿಕ ಪಾಲಿನ ಷೇರುಗಳ ಲಾಕಪ್ ಅವಧಿ ಮುಗಿದ ನಂತರ, ಅಂದರೆ ಜೂನ್ 2027ರಲ್ಲಿ ಮಕ್ಕಳಿಗೆ ತಲುಪಲಿದೆ ಎಂದು ತಿಳಿಸಿದ್ದಾರೆ. ಅದರಂತೆ, ಅಮೆರಿಕದ 18 ವರ್ಷದೊಳಗಿನ ಮಕ್ಕಳ ಭವಿಷ್ಯದ ಉಳಿತಾಯಕ್ಕಾಗಿ ಟ್ರಂಪ್ ಆಡಳಿತವು ಆರಂಭಿಸಿರುವ ಸಕ್ರಿಯ ಟ್ರಂಪ್ ಅಕೌಂಟ್ ಹೊಂದಿರುವ ಮಕ್ಕಳಿಗೆ ಸ್ಪೇಸ್‌ಎಕ್ಸ್ ತನ್ನ ಕ್ಲಾಸ್-ಎ ಸಾಮಾನ್ಯ ಷೇರುಗಳನ್ನು ಜಮೆ ಮಾಡಲಿದೆ. ಈಗಾಗಲೇ ಸುಮಾರು 7 ಕೋಟಿ ಮಕ್ಕಳ ಹೆಸರಿನಲ್ಲಿ ಈ ಖಾತೆಗಳನ್ನು ತೆರೆಯಲಾಗಿದೆ.

Advertisement

Advertisement

ಏತನ್ಮಧ್ಯೆ, ಕಳೆದ ಅಕ್ಟೋಬರ್‌ನಲ್ಲಿ ಮಸ್ಕ್ ತಲಾ ಒಂದು ಷೇರು ನೀಡುವುದಾಗಿ ಹೇಳಿದ್ದರು, ಈಗ ಅದನ್ನು ಎರಡಕ್ಕೆ ಏರಿಸಿದ್ದಾರೆ. ಅಲ್ಲದೆ, ಮುಂದಿನ ದಿನಗಳಲ್ಲಿ ಪ್ರತಿ ವರ್ಷವೂ ಅಮೆರಿಕದ ಮಕ್ಕಳಿಗೆ ಹೆಚ್ಚುವರಿಯಾಗಿ ತಲಾ ಒಂದು ಷೇರು ನೀಡುವ ಬಗ್ಗೆಯೂ ಮಸ್ಕ್ ಸುಳಿವು ನೀಡಿದ್ದಾರೆ. ಮತ್ತೊಂದೆಡೆ, ಸ್ಪೇಸ್‌ಎಕ್ಸ್ ಅಧ್ಯಕ್ಷೆ ಗ್ವಿನ್ನೆ ಶಾಟ್‌ವೆಲ್ ಕೂಡ ಕಡಿಮೆ ಆದಾಯದ ಕುಟುಂಬಗಳ 20 ಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ತಮ್ಮ ಪಾಲಿನ ಷೇರುಗಳನ್ನು ದೇಣಿಗೆಯಾಗಿ ನೀಡುವುದಾಗಿ ತಿಳಿಸಿದ್ದಾರೆ.

Also Read

ಮಧ್ಯಂತರ ಚುನಾವಣೆ ಸೋಲಿನ ಬೆನ್ನಲ್ಲೇ ಉಲ್ಟಾ ಹೊಡೆದ ಎಲಾನ್ ಮಸ್ಕ್: ನಾನು MAGA ಅಲ್ಲ, ರಿಪಬ್ಲಿಕನ್ ಪರ ಹಣ ಸುರಿದಿದ್ದು ಮೂರ್ಖತನ ಎಂದ ಸಿರಿವಂತ!

ಸ್ಪೇಸ್‌ಎಕ್ಸ್ ಪ್ರತಿ ಷೇರಿನ ಬೆಲೆ ₹10,750!

ಮುಂದುವರೆದು, ಪ್ರಸ್ತುತ ನಾಸ್ಡಾಕ್ ಷೇರು ಮಾರುಕಟ್ಟೆಯಲ್ಲಿ ಸ್ಪೇಸ್‌ಎಕ್ಸ್ ಪ್ರತಿ ಷೇರಿನ ಬೆಲೆ ಸುಮಾರು $127.44 (ಅಂದಾಜು ₹10,750) ಇದ್ದು, ಕಂಪನಿಯ ಒಟ್ಟು ಮಾರುಕಟ್ಟೆ ಬಂಡವಾಳ ಸುಮಾರು $1.71 ರಿಂದ $1.73 ಟ್ರಿಲಿಯನ್ (ಸುಮಾರು ₹159.6 ಲಕ್ಷ ಕೋಟಿ) ಆಗಿದೆ. ಅದರಂತೆ, ಮಕ್ಕಳಿಗೆ ಉಚಿತವಾಗಿ ನೀಡಲಾಗುತ್ತಿರುವ 2 ಷೇರುಗಳ ಪ್ರಸ್ತುತ ಮೌಲ್ಯ ಸುಮಾರು $254.88 (ಅಂದಾಜು ₹21,500) ಆಗುತ್ತದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement