ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಾಣಿಜ್ಯ

ವ್ಯಾಪಾರಿಗಳಿಗೆ ಹಬ್ಬದ ಗುಡ್‌ನ್ಯೂಸ್‌: ₹2,000 ಮೇಲಿನ MDR ಶುಲ್ಕ ಜಾರಿ ಮುಂದೂಡಿದ ಸರ್ಕಾರ

ದಸರಾ ಹಾಗೂ ದೀಪಾವಳಿ ಹಬ್ಬವನ್ನು ಗಮನದಲ್ಲಿಟ್ಟುಕೊಂಡು, ಅಕ್ಟೋಬರ್ 15ರಿಂದ ಜಾರಿಗೆ ಬರಬೇಕಿದ್ದ ₹2,000 ಕ್ಕಿಂತ ಹೆಚ್ಚಿನ ಯುಪಿಐ ಮರ್ಚೆಂಟ್ ವಹಿವಾಟುಗಳ ಮೇಲಿನ ಎಂಡಿಆರ್ ವ್ಯಾಪಾರಿ ಶುಲ್ಕವನ್ನು NPCI ದೀಪಾವಳಿಯ ನಂತರಕ್ಕೆ ಮುಂದೂಡಿದೆ. ಆ ಕುರಿತ ವರದಿ ಇಲ್ಲಿದೆ:

ವ್ಯಾಪಾರಿಗಳಿಗೆ ಹಬ್ಬದ ಗುಡ್‌ನ್ಯೂಸ್‌ — AI Image
Hruthin H P
Updated On : 13 Oct 2026, 1:54 pm

ಮುಂಬೈ (ಮಹಾರಾಷ್ಟ್ರ): ದಸರಾ ಹಾಗೂ ದೀಪಾವಳಿ ಹಬ್ಬವನ್ನು ಗಮನದಲ್ಲಿಟ್ಟುಕೊಂಡು, ಅಕ್ಟೋಬರ್ 15ರಿಂದ ಜಾರಿಗೆ ಬರಬೇಕಿದ್ದ ₹2,000 ಕ್ಕಿಂತ ಹೆಚ್ಚಿನ ಯುಪಿಐ ಮರ್ಚೆಂಟ್ ವಹಿವಾಟುಗಳ ಮೇಲಿನ 0.4% ಎಂಡಿಆರ್ ವ್ಯಾಪಾರಿ ಶುಲ್ಕವನ್ನು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾವು ದೀಪಾವಳಿಯ ನಂತರಕ್ಕೆ ಮುಂದೂಡಿದೆ. ಆ ಕುರಿತ ವರದಿ ಇಲ್ಲಿದೆ:

ಈ ಹಿಂದೆ ಅಕ್ಟೋಬರ್ 15, 2026 ರಿಂದ ಜಾರಿಗೆ ಬರಬೇಕಿದ್ದ ಶೇಕಡಾ 0.4ರಷ್ಟು ಎಂಡಿಆರ್ (MDR - ಮರ್ಚೆಂಟ್ ಡಿಸ್ಕೌಂಟ್ ರೇಟ್) ಶುಲ್ಕದ ನಿಯಮವನ್ನು, ಹಬ್ಬದ ಸೀಸನ್‌ನಲ್ಲಿ ವರ್ತಕರು ಮತ್ತು ಗ್ರಾಹಕರಿಗೆ ತೊಂದರೆಯಾಗದಂತೆ ತಡೆಯಲು ದೀಪಾವಳಿ ಮುಗಿದ ತಕ್ಷಣ ಜಾರಿಗೊಳಿಸಲು NPCI ಅಧಿಕೃತ ಪ್ರಕಟಣೆ ಹೊರಡಿಸಿದೆ. ಇದರ ನಿಖರವಾದ ಜಾರಿ ದಿನಾಂಕವನ್ನು ಶೀಘ್ರದಲ್ಲೇ ಪ್ರತ್ಯೇಕವಾಗಿ ಪ್ರಕಟಿಸಲಾಗುವುದು ಎಂದು ತಿಳಿಸಲಾಗಿದೆ.

 ಹಾಗಾದ್ರೆ, ಮುಂದೂಡಿಕೆಗೆ ಪ್ರಮುಖ ಕಾರಣಗಳೇನು?

Advertisement

Advertisement

ಸಾಮಾನ್ಯ ಗ್ರಾಹಕರಿಗೆ ಯಾವುದೇ ಶುಲ್ಕವಿಲ್ಲ

ಈ ಎಂಡಿಆರ್ ಶುಲ್ಕವು ಕೇವಲ ವ್ಯಾಪಾರಿಗಳಿಗೆ ಮಾತ್ರ ಅನ್ವಯಿಸುತ್ತದೆಯೇ ಹೊರತು ಸಾಮಾನ್ಯ ಗ್ರಾಹಕರಿಗಲ್ಲ. ಅದರಂತೆ, ಗ್ರಾಹಕರು ಎಂದಿನಂತೆ ಉಚಿತವಾಗಿಯೇ ಯುಪಿಐ ಪಾವತಿ ಮಾಡಬಹುದು. ವ್ಯಾಪಾರಿಗಳು ಈ ಶುಲ್ಕವನ್ನು ಗ್ರಾಹಕರಿಂದ ವಸೂಲಿ ಮಾಡುವಂತಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಜೊತೆಗೆ, ಸ್ನೇಹಿತರು ಅಥವಾ ಕುಟುಂಬದವರಿಗೆ ಹಣ ಕಳುಹಿಸುವ ಪೀರ್-ಟು-ಪೀರ್ (P2P) ವಹಿವಾಟುಗಳಿಗೆ ಯಾವುದೇ ಮಿತಿಯಿಲ್ಲದೆ ಸಂಪೂರ್ಣ ಉಚಿತವಾಗಿರಲಿದೆ.

ಮುಂದುವರೆದು, ಸಣ್ಣ ವ್ಯಾಪಾರಿಗಳು ಮತ್ತು ₹2,000 ವರೆಗಿನ ಸಣ್ಣ ಮೌಲ್ಯದ ವ್ಯಾಪಾರಿ ವಹಿವಾಟುಗಳು (P2M) ಈ ನಿಯಮದಿಂದ ಹೊರಗುಳಿಯಲಿವೆ. ದೇಶದ ಒಟ್ಟು ಯುಪಿಐ ಮರ್ಚೆಂಟ್ ವಹಿವಾಟುಗಳಲ್ಲಿ ಶೇ. 95 ಕ್ಕೂ ಹೆಚ್ಚು ಭಾಗ ₹2,000 ಕ್ಕಿಂತ ಕಡಿಮೆ ಇರುವುದರಿಂದ ಸಣ್ಣ ವ್ಯಾಪಾರಿಗಳಿಗೆ ಯಾವುದೇ ತೊಂದರೆಯಾಗುವುದಿಲ್ಲ.

ಹಾಗಾದ್ರೆ, ಯಾವ ವಹಿವಾಟಿಗೆ ಎಷ್ಟು ಶುಲ್ಕ?

Also Read

2,000 ಅಲ್ಲ 1 ಲಕ್ಷ ಪೇ ಮಾಡಿದರು ಫ್ರೀ ಫ್ರೀ ಫ್ರೀ! ಹಾಗಾದ್ರೆ, ಅಕ್ಟೋಬರ್ 15 ರಿಂದ ಜಾರಿಯಾಗ್ತಿರೋ ಹೊಸ ನಿಯಮದಲ್ಲಿ ಯಾರಿಗೆ ಶುಲ್ಕ? ಯಾರಿಗೆಲ್ಲಾ ವಿನಾಯಿತಿ?

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement