ಎಟಿಎಂ Online Desk
ವಾಣಿಜ್ಯ

Debit Card ಕಳೆದುಹೋದ್ರೂ ಚಿಂತೆ ಬೇಡ; ಬಯೋಮೆಟ್ರಿಕ್ ಕೊಟ್ರೆ ಸಾಕು, 2 ನಿಮಿಷಕ್ಕೆ ATMನಿಂದಲೇ ಸಿಗುತ್ತೆ ಹೊಸ ಡೆಬಿಟ್ ಕಾರ್ಡ್!

ಕೇಂದ್ರ ಸರ್ಕಾರದ ಹಣಕಾಸು ಸೇವೆಗಳ ಇಲಾಖೆಯು 'ಆನ್-ದ-ಸ್ಪಾಟ್ ಎಟಿಎಂ ಡೆಬಿಟ್ ಕಾರ್ಡ್' ಎಂಬ ನೂತನ ತಂತ್ರಜ್ಞಾನ ಆಧಾರಿತ ಸೌಲಭ್ಯವನ್ನು ಅಧಿಕೃತವಾಗಿ ಪರಿಚಯಿಸಿದೆ. ಆ ಕುರಿತ ವರದಿ ಇಲ್ಲಿದೆ:

ಮುಂಬೈ: ಡೆಬಿಟ್ ಕಾರ್ಡ್ ಕಳೆದುಹೋಯ್ತು, ಇನ್ನು ಹೊಸ ಡೆಬಿಟ್ ಕಾರ್ಡ್ ಬೇಕು ಅಂದರೆ ಕಡಿಮೆ ಅಂದ್ರು ಒಂದು ಎರಡು ಮೂರು ದಿನ ಕಾಯಬೇಕು. ಜೊತೆಗೆ, ಕೆಲವು ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ಅವರ ಹೋಮ್ ಬ್ರಾಂಚ್‌ನಲ್ಲಿ ಕೆಲವೇ ನಿಮಿಷಗಳಲ್ಲಿ ಪಡೆಯಬಹುದು. ಆದರೆ, ಕೆಲಸದ ನಿಮಿತ್ತ ಬೇರೆ ಊರುಗಳಲ್ಲಿರುವ ಗ್ರಾಹಕರಿಗೆ ತಮ್ಮ ಹೋಮ್ ಬ್ರಾಂಚ್‌ಗೆಹೋಗೋದಕ್ಕೆ ಸಾಧ್ಯವಾಗುವುದಿಲ್ಲ! ಅದಕ್ಕೆ, ಇದೀಗ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೊಸ ಯೋಜನೆ ಜಾರಿಗೆ ಮುಂದಾಗಿದ್ದು, ಇದರ ಅನ್ವಯ  ಹೊಸ ಡೆಬಿಟ್ ಕಾರ್ಡ್ ಪಡೆಯಲು ನೇರವಾಗಿ ಎಟಿಎಂಗೆ ಹೋದರೆ ಸಾಕು. ಈ ಮೂಲಕ ಕೆಲವೇ ನಿಮಿಷಗಳಲ್ಲಿ ಯಾವುದೇ ಸ್ಥಳದಲ್ಲಿದ್ದರೂ ಯಂತ್ರದ ಮೂಲಕವೇ ಹೊಸ ಡೆಬಿಟ್ ಕಾರ್ಡ್ ಪಡೆಯಬಹುದು ಎನ್ನಲಾಗಿದೆ. ಆ ಕುರಿತ ವರದಿ ಇಲ್ಲಿದೆ:

ಏನಿದು ಹೊಸ ತಂತ್ರಜ್ಞಾನ?

ಕೇಂದ್ರ ಸರ್ಕಾರದ ಹಣಕಾಸು ಸೇವೆಗಳ ಇಲಾಖೆಯು 'ಆನ್-ದ-ಸ್ಪಾಟ್ ಎಟಿಎಂ ಡೆಬಿಟ್ ಕಾರ್ಡ್' (Instant Debit Card Dispensing at ATMs) ಎಂಬ ನೂತನ ತಂತ್ರಜ್ಞಾನ ಆಧಾರಿತ ಸೌಲಭ್ಯವನ್ನು ಅಧಿಕೃತವಾಗಿ ಪರಿಚಯಿಸಿದೆ. ಇದರಲ್ಲಿ, ಗ್ರಾಹಕರು ತಮ್ಮ ಹಳೇ ಕಾರ್ಡ್ ಅವಧಿ ಮುಗಿದಿದ್ದರೆ ಅಥವಾ ಕಳೆದುಹೋಗಿದ್ದರೆ, ನೀವು ನೇರವಾಗಿ ಈ ವಿಶೇಷ ಸೌಲಭ್ಯವಿರುವ ಎಟಿಎಂ ಕೇಂದ್ರಕ್ಕೆ ಭೇಟಿ ನೀಡಿಪಡೆಯಬಹುದಾಗಿದೆ.

ಈ ಆನ್-ದ-ಸ್ಪಾಟ್ ಎಟಿಎಂ ಡೆಬಿಟ್ ಕಾರ್ಡ್ ಪಡೆಯೋದು ಹೇಗೆ?

  • ಸುರಕ್ಷಿತ ಗುರುತು ಪರಿಶೀಲನೆ: ಎಟಿಎಂ ಸ್ಕ್ರೀನ್ ಮೇಲೆ ನಿಮ್ಮ ಬ್ಯಾಂಕ್ ಖಾತೆ ವಿವರಗಳನ್ನು ನಮೂದಿಸಿದ ನಂತರ ನಿಮ್ಮ ಮೊಬೈಲ್‌ಗೆ ಬರುವ OTP, ಅಥವಾ ನಿಮ್ಮ ಬಯೋಮೆಟ್ರಿಕ್ (ಫಿಂಗರ್‌ಪ್ರಿಂಟ್) ಹಾಗೂ ಫೇಸ್ ರೆಕಗ್ನಿಷನ್ ತಂತ್ರಜ್ಞಾನದ ಮೂಲಕ ಸುರಕ್ಷಿತವಾಗಿ ಗುರುತು ಪರಿಶೀಲನೆ ಮಾಡಲಾಗುತ್ತದೆ.

  • ತ್ವರಿತ ಪ್ರಿಂಟಿಂಗ್: ನಿಮ್ಮ ಗುರುತು ಖಾತರಿಯಾದ ತಕ್ಷಣವೇ, ಎಟಿಎಂ ಯಂತ್ರವು ಕೇವಲ 5 ನಿಮಿಷಗಳಲ್ಲಿ ನಿಮ್ಮ ಹೆಸರು ಮತ್ತು ಹೊಸ ಎಕ್ಸ್‌ಪೈರಿ ದಿನಾಂಕವನ್ನು ಒಳಗೊಂಡ ಹೊಸ ಡೆಬಿಟ್ ಕಾರ್ಡ್ ಅನ್ನು ಲೈವ್ ಆಗಿ ಪ್ರಿಂಟ್ ಮಾಡಿ ಹೊರಗೆ ನೀಡುತ್ತದೆ.

  • ತಕ್ಷಣವೇ ಸಕ್ರಿಯ ಕಾರ್ಡ್ ಕೈಗೆ ಸಿಕ್ಕ ತಕ್ಷಣವೇ ನೀವು ಅಲ್ಲೇ ಗ್ರೀನ್ ಪಿನ್ ಜನರೇಟ್ ಮಾಡಿ, ಕಾರ್ಡ್ ಅನ್ನು ಸಕ್ರಿಯಗೊಳಿಸಿಕೊಂಡು ಹಣ ಡ್ರಾ ಮಾಡಲು ಅಥವಾ ಆನ್‌ಲೈನ್ ಶಾಪಿಂಗ್‌ಗೆ ಬಳಸಬಹುದು.

ಯಾವ ಬ್ಯಾಂಕುಗಳಲ್ಲಿ ಲಭ್ಯ?

ಈ ಹೊಸ ವ್ಯವಸ್ಥೆಯು ಮೊದಲಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ನಲ್ಲಿ ಜಾರಿ ಮಾಡಲಾಗುತ್ತಿದೆ. ಇದಾದ ನಂತರ ಎಲ್ಲಾ ಬ್ಯಾಂಕುಗಳಲ್ಲಿಯೂ ಅನುಷ್ಟಾನ ಜಾರಿ ಮಾಡಲಾಗುತ್ತದೆ.

ಗ್ರಾಹಕರಿಗೆ ಪ್ರಯೋಜನಗಳೇನು?

  • ಸಮಯದ ಉಳಿತಾಯ: ಈ ಹಿಂದೆ ಆನ್‌ಲೈನ್‌ನಲ್ಲಿ ಅಥವಾ ಬ್ಯಾಂಕ್ ಮೂಲಕ ಅರ್ಜಿ ಸಲ್ಲಿಸಿದರೆ ಕೊರಿಯರ್‌ನಲ್ಲಿ ಕಾರ್ಡ್ ಮನೆಗೆ ಬರಲು ಕನಿಷ್ಠ 4 ರಿಂದ 7 ದಿನಗಳು ಬೇಕಾಗುತ್ತಿತ್ತು. ಈಗ ಆ ಸಮಯ ಉಳಿಯುತ್ತದೆ.

  • ತುರ್ತು ಸಂದರ್ಭದಲ್ಲಿ ನೆರವು: ನೀವು ಎಲ್ಲಾದರೂ ಪ್ರವಾಸದಲ್ಲಿರುವಾಗ ಕಾರ್ಡ್ ಕಳೆದುಹೋದರೆ, ಹಳೇ ಕಾರ್ಡ್ ಬ್ಲಾಕ್ ಮಾಡಿ ಸಮೀಪದ ಎಟಿಎಂನಿಂದ ತಕ್ಷಣವೇ ಹೊಸ ಕಾರ್ಡ್ ಪಡೆಯಬಹುದು.

  • ಬ್ಯಾಂಕ್ ಅಲೆದಾಟ ಮುಕ್ತಿ: ಸಣ್ಣ ಕೆಲಸಗಳಿಗೂ ಬ್ಯಾಂಕ್‌ನಲ್ಲಿ ಕ್ಯೂ ನಿಲ್ಲುವುದು ತಪ್ಪಲಿದ್ದು, ಬ್ಯಾಂಕ್ ಉದ್ಯೋಗಿಗಳ ಮೇಲಿನ ಕೆಲಸದ ಒತ್ತಡವೂ ಕಡಿಮೆಯಾಗಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜತಾಂತ್ರಿಕತೆ: ಮೂರು ದಿನಗಳಲ್ಲಿ 15 ದ್ವಿಪಕ್ಷೀಯ ಸಭೆಗಳು; ಕ್ಸಿ ಜಿನ್ ಪಿಂಗ್, ವ್ಲಾಡಿಮಿರ್ ಪುಟಿನ್, ಪೆಜೆಶ್ಕಿಯಾನ್ ಮಾತುಕತೆ

ದೇವಸ್ಥಾನದಲ್ಲಿ ಮೀನು ತಿಂದ ಸುವೇಂದು ಅಧಿಕಾರಿ: ಬಾಗೇಶ್ವರ್ ಬಾಬಾಗೆ ತಿರುಗೇಟು; CM ಮಾಂಸಾಹಾರ ಸೇವನೆ ಬಗ್ಗೆ ಬಿಜೆಪಿ ಹೇಳಿದ್ದೇನು? Video

ನಮ್ಮದು ವರ್ಷಕ್ಕೆ 2 ಸಾವಿರ ಕೋಟಿ ವಹಿವಾಟು ಇದೆ, 2 ಕೋಟಿ ನಗದು ದೊಡ್ಡ ಮೊತ್ತವೇ ಅಲ್ಲ: ಸತೀಶ್‌ ಜಾರಕಿಹೊಳಿ

'ವಂದೇ ಮಾತರಂ' ವಿವಾದದ ನಡುವೆ BJP, RSS ಹಾದಿಯಲ್ಲಿ NC: ಸ್ವಪಕ್ಷದ ವಿರುದ್ಧವೇ ಸಂಸದ ರುಹುಲ್ಲಾ ಗಂಭೀರ ಆರೋಪ

ಮಹಾ ದುರಂತ: ಟ್ರಕ್‌ಗೆ ಪಿಕಪ್ ವ್ಯಾನ್ ಡಿಕ್ಕಿ; ಭೀಕರ ಅಪಘಾತದಲ್ಲಿ 3 ಮಕ್ಕಳು ಸೇರಿದಂತೆ 9 ಮಂದಿ ಸಾವು