ಮುಂಬೈ ಷೇರುಪೇಟೆ ಕಚೇರಿ  
ವಾಣಿಜ್ಯ

ತೈಲಾಘಾತಕ್ಕೆ ಷೇರುಪೇಟೆ ತತ್ತರ; ಒಂದೇ ತಿಂಗಳಲ್ಲಿ ಸೆನ್ಸೆಕ್ಸ್-ನಿಫ್ಟಿ ಶೇ.5ಕ್ಕೂ ಹೆಚ್ಚು ಕುಸಿತ, 17 ಲಕ್ಷ ಕೋಟಿ ರೂ ನಷ್ಟ

ಕಚ್ಚಾ ತೈಲ ಬೆಲೆ ಏರಿಕೆ, ಭೌಗೋಳಿಕ ಉದ್ವಿಗ್ನತೆ ಹಾಗೂ ಬಾಂಡ್ ಇಳುವರಿ ಹೆಚ್ಚಳವು ಮಾರುಕಟ್ಟೆಯ ಭಾವನೆಗೆ ಹೊಡೆತ ನೀಡಿದೆ. ಅಮೆರಿಕದ ಫೆಡರಲ್ ರಿಸರ್ವ್ ಮತ್ತಷ್ಟು ಹಣಕಾಸು ಬಿಗಿಗೊಳಿಸಬಹುದು..

ಮುಂಬೈ: ಕಚ್ಚಾ ತೈಲ ಬೆಲೆ ಏರಿಕೆ, ಪಶ್ಚಿಮ ಏಷ್ಯಾದಲ್ಲಿನ ಭೌಗೋಳಿಕ ಉದ್ವಿಗ್ನತೆ ಹಾಗೂ ಅಮೆರಿಕದ ಬಾಂಡ್‌ಗಳ ಇಳುವರಿ ಹೆಚ್ಚಳದ ಪರಿಣಾಮ ಭಾರತೀಯ ಷೇರುಪೇಟೆಯಲ್ಲಿ ಭಾರೀ ಪ್ರಮಾಣದ ಕುಸಿತ ಕಂಡುಬಂದಿದೆ.

ಸೋಮವಾರದ ವಹಿವಾಟಿನಲ್ಲಿ ಸೆನ್ಸೆಕ್ಸ್ 1,124.02 ಅಂಕ ಅಥವಾ ಶೇ.1.52ರಷ್ಟು ಕುಸಿದು 72,771.72 ಅಂಕಗಳಿಗೆ ಇಳಿಕೆಯಾಗಿ ದಿನದ ವಹಿವಾಟು ಅಂತ್ಯಗೊಳಿಸಿದೆ. ಇದು 2026ರ ಮಾರ್ಚ್ 30ರ ಬಳಿಕದ ಅತ್ಯಂತ ಕಡಿಮೆ ಮುಕ್ತಾಯ ಮಟ್ಟವಾಗಿದೆ ಎಂದು ಹೇಳಲಾಗಿದೆ.

ಇದೇ ವೇಳೆ ನಿಫ್ಟಿ ಕೂಡ 360.25 ಅಂಕ ಅಥವಾ ಶೇ.1.56ರಷ್ಟು ಕುಸಿದು 22,780.25ಕ್ಕೆ ವಹಿವಾಟು ಮುಗಿಸಿದೆ. ಇದು ಸುಮಾರು ಆರು ತಿಂಗಳ ಕನಿಷ್ಠ ಮಟ್ಟವಾಗಿದ್ದು, ಸೋಮವಾರದ ಒಂದೇ ದಿನದ ಭಾರೀ ಕುಸಿತದಿಂದ ಹೂಡಿಕೆದಾರರ ಸಂಪತ್ತಿನಲ್ಲಿ 7.52 ಲಕ್ಷ ಕೋಟಿ ನಷ್ಟವಾಗಿದೆ.

ಒಂದೇ ತಿಂಗಳಲ್ಲಿ 17.17 ಲಕ್ಷ ಕೋಟಿ ರೂ ಬಂಡವಾಳ ನಷ್ಟ

ಇಂದಿನ ಕುಸಿತದೊಂದಿಗೆ ಕಳೆದ ಒಂದು ತಿಂಗಳಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ ಶೇ.5ಕ್ಕೂ ಹೆಚ್ಚು ಕುಸಿದಿವೆ. ಆಗಸ್ಟ್ 27ರಿಂದ ಸೆನ್ಸೆಕ್ಸ್ 4,161.87 ಅಂಕ ಅಥವಾ ಶೇ.5.40ರಷ್ಟು ಕುಸಿದಿದೆ. ಇದೇ ಅವಧಿಯಲ್ಲಿ ನಿಫ್ಟಿ 1,310.60 ಅಂಕ ಅಥವಾ ಶೇ.5.44ರಷ್ಟು ಇಳಿಕೆಯಾಗಿದೆ.

ಇದರ ಪರಿಣಾಮ ಹೂಡಿಕೆದಾರರ ಒಟ್ಟು ಸಂಪತ್ತು ₹17,17,487.02 ಕೋಟಿ ಕುಸಿದು ₹4,74,36,620.19 ಕೋಟಿಗೆ ತಲುಪಿದೆ. ಇದು ಸುಮಾರು 4.94 ಟ್ರಿಲಿಯನ್ ಅಮೆರಿಕನ್ ಡಾಲರ್ ಮೌಲ್ಯವಾಗಿದೆ.

ಕಚ್ಚಾ ತೈಲ ಬೆಲೆ ಏರಿಕೆ, ಭೌಗೋಳಿಕ ಉದ್ವಿಗ್ನತೆ ಹಾಗೂ ಬಾಂಡ್ ಇಳುವರಿ ಹೆಚ್ಚಳವು ಮಾರುಕಟ್ಟೆಯ ಭಾವನೆಗೆ ಹೊಡೆತ ನೀಡಿದೆ. ಅಮೆರಿಕದ ಫೆಡರಲ್ ರಿಸರ್ವ್ ಮತ್ತಷ್ಟು ಹಣಕಾಸು ಬಿಗಿಗೊಳಿಸಬಹುದು ಎಂಬ ನಿರೀಕ್ಷೆಯೂ ಮಾರುಕಟ್ಟೆಯ ಮೇಲಿನ ಒತ್ತಡವನ್ನು ಹೆಚ್ಚಿಸಿದೆ.

ತೈಲ ಬೆಲೆ ಏರಿಕೆಯ ಹೊಡೆತ

ಜಾಗತಿಕ ತೈಲ ಮಾನದಂಡವಾದ ಬ್ರೆಂಟ್ ಕಚ್ಚಾ ತೈಲದ ಬೆಲೆ ಸುಮಾರು ಶೇ.4ರಷ್ಟು ಏರಿಕೆ ಕಂಡು ಬ್ಯಾರೆಲ್‌ಗೆ 108.3 ಡಾಲರ್‌ಗೆ ತಲುಪಿದೆ. Geojit Investments Limitedನ ಸಂಶೋಧನಾ ಮುಖ್ಯಸ್ಥ ವಿನೋದ್ ನಾಯರ್ ಅವರ ಪ್ರಕಾರ, ಜಾಗತಿಕ ಆರ್ಥಿಕ ಪರಿಸ್ಥಿತಿಗಳಲ್ಲಿನ ಹದಗೆಟ್ಟ ಬೆಳವಣಿಗೆಗಳಿಂದ ಹೂಡಿಕೆದಾರರಲ್ಲಿ ಎಚ್ಚರಿಕೆ ಹೆಚ್ಚಿದ್ದು, ಮಾರುಕಟ್ಟೆಯಲ್ಲಿ ಕರಡಿ ಹಿಡಿತ ಮುಂದುವರಿದಿದೆ.

ಅಮೆರಿಕದ ಕದನ ವಿರಾಮ ಪ್ರಸ್ತಾವ ತಿರಸ್ಕಾರಗೊಂಡಿರುವುದು ಪಶ್ಚಿಮ ಏಷ್ಯಾದ ಉದ್ವಿಗ್ನತೆ ಇನ್ನಷ್ಟು ಕಾಲ ಮುಂದುವರಿಯುವ ಆತಂಕವನ್ನು ಹೆಚ್ಚಿಸಿದೆ. ಇದರಿಂದ ಪೂರೈಕೆ ವ್ಯತ್ಯಯ ಹಾಗೂ ಸರಕುಗಳ ಬೆಲೆ ಏರಿಕೆಯ ಅಪಾಯವೂ ಹೆಚ್ಚಿದೆ ಎಂದು ಅವರು ಹೇಳಿದ್ದಾರೆ.

ಅಮೆರಿಕದ ಬಾಂಡ್ ಇಳುವರಿಯ ಒತ್ತಡ

ತಜ್ಞರ ಪ್ರಕಾರ, ಬ್ರೆಂಟ್ ಕಚ್ಚಾ ತೈಲ ಬೆಲೆ 108 ಡಾಲರ್ ಹಾಗೂ ಅಮೆರಿಕದ 10 ವರ್ಷದ ಬಾಂಡ್ ಇಳುವರಿ ಶೇ.5.2ರ ಮಟ್ಟಕ್ಕೆ ಏರಿರುವುದು ಭಾರತೀಯ ಮಾರುಕಟ್ಟೆಗೆ ಪ್ರಮುಖ ಒತ್ತಡದ ಅಂಶಗಳಾಗಿವೆ.

Equirus Wealthನ ವ್ಯವಸ್ಥಾಪಕ ನಿರ್ದೇಶಕ ಅಂಕುರ್ ಪುಂಜ್, ಅಮೆರಿಕ-ಇರಾನ್ ಸಂಘರ್ಷ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಭೌಗೋಳಿಕ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ಇದರ ಪರಿಣಾಮ ಜಾಗತಿಕ ಕಚ್ಚಾ ತೈಲ ಬೆಲೆಗಳು ಏರಿಕೆಯಾಗಿದ್ದು, ದೇಶೀಯ ಷೇರುಪೇಟೆಯಲ್ಲೂ ವ್ಯಾಪಕ ಮಾರಾಟ ಕಂಡುಬಂದಿದೆ ಎಂದು ಹೇಳಿದ್ದಾರೆ.

ಅಮೆರಿಕದ ಬಾಂಡ್ ಇಳುವರಿ ಈಗಾಗಲೇ ಶೇ.5ಕ್ಕಿಂತ ಮೇಲಿರುವುದು ಮತ್ತು ವಿದೇಶಿ ಹೂಡಿಕೆ ನಿಧಿಗಳ ಹೊರಹರಿವಿನಿಂದ ಮಾರುಕಟ್ಟೆಗೆ ಹೆಚ್ಚಿನ ನೆಮ್ಮದಿ ಸಿಗದಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲೂ ಮಾರುಕಟ್ಟೆ ಎಚ್ಚರಿಕೆಯ ಹಾಗೂ ನಕಾರಾತ್ಮಕ ಧೋರಣೆಯಲ್ಲೇ ಇರಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

Enrich Money ಸಂಸ್ಥೆಯ ಸಿಇಒ ಪೊನ್ಮುಡಿ ಆರ್. ಅವರ ಪ್ರಕಾರ, ಜಾಗತಿಕ ಬಾಂಡ್ ಇಳುವರಿ ಏರಿಕೆ ಮತ್ತು ಬಲಿಷ್ಠ ಅಮೆರಿಕನ್ ಡಾಲರ್ ಕೂಡ ಉದಯೋನ್ಮುಖ ಮಾರುಕಟ್ಟೆಗಳಿಗೆ ಪ್ರಮುಖ ಸವಾಲುಗಳಾಗಿವೆ. ಬಿಗಿಯಾದ ಹಣಕಾಸು ಪರಿಸ್ಥಿತಿಯಿಂದ ವಿದೇಶಿ ಹೂಡಿಕೆ ಹರಿವು ಹಾಗೂ ಹೂಡಿಕೆದಾರರ ಅಪಾಯ ಸ್ವೀಕಾರದ ಮನೋಭಾವದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕರ್ನಾಟಕದ ಬರ ಪರಿಸ್ಥಿತಿ ಪರಿಶೀಲನೆಗೆ ಕೇಂದ್ರದ 3 ತಂಡ: ಜಿ ಪರಮೇಶ್ವರ್

ಕನಕಪುರ ರಸ್ತೆಯಲ್ಲಿ ಭೀಕರ ಅಪಘಾತ; ಬೈಕ್ ಗೆ ಟಿಪ್ಪರ್ ಢಿಕ್ಕಿ, ಪತಿ ಜೊತೆ ಹೋಗುತ್ತಿದ್ದ ಪತ್ನಿ ಸಾವು!

'Rise and Fall' Season 2: BJP ಮಾಜಿ ವಕ್ತಾರ ಶಹಜಾದ್ ಮೇಲೆ ಹಲ್ಲೆ, ಶೋಯಿಂದ ಶಿವೇತ್ ತೋಮರ್ ಕಿಕ್ ಔಟ್?, Video

ಮದುವೆಗೂ ಮುನ್ನವೇ ತಾಯಿಯಾಗಲು ಬಯಸಿದ್ದೆ, ಅದಕ್ಕೆ ಪೋಷಕರನ್ನೂ ಒಪ್ಪಿಸಿದ್ದೆ, ಆದ್ರೆ...: ನಟಿ ಸ್ವರಾ ಭಾಸ್ಕರ್

'ಅಮ್ಮ ಮನೆಯಲ್ಲಿ ಇರಲಿಲ್ಲ': ತಡವಾಗಿ ಬಂದಿದ್ದಕ್ಕೆ ಸಚಿವ ಯತೀಂದ್ರ ಸ್ಪಷ್ಟನೆ!