ಭರ್ಜರಿ ಉದ್ಯೋಗಾವಕಾಶ Online Desk
ವೃತ್ತಿ & ಉದ್ಯೋಗ ಅವಕಾಶಗಳು

ಯಾವುದೇ ಪರೀಕ್ಷೆಯಿಲ್ಲದೆ ಸರ್ಕಾರಿ ಕೆಲಸ: KSMCಯಲ್ಲಿ ಭರ್ಜರಿ ಉದ್ಯೋಗಾವಕಾಶ; ಸಂಬಳ 50,000 ರೂ

ಕರ್ನಾಟಕ ಸರ್ಕಾರದ ಉದ್ಯಮವಾಗಿರುವ KSMC ರಾಜ್ಯಾದ್ಯಂತ ಇರುವ ತನ್ನ ಗಣಿಗಳಲ್ಲಿ ಕಾರ್ಯನಿರ್ವಹಿಸಲು ಖಾಲಿಯಿರುವ 50 ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಆ ಕುರಿತ ವರದಿ ಇಲ್ಲಿದೆ.

ಬೆಂಗಳೂರು: ಕರ್ನಾಟಕ ಸರ್ಕಾರದ (Government of Karnataka) ಉದ್ಯಮವಾಗಿರುವ ರಾಜ್ಯ ಕರ್ನಾಟಕ ಸ್ಟೇಟ್ ಮಿನರಲ್ಸ್‌ ಕಾರ್ಪೋರೇಷನ್ ಲಿಮಿಟೆಡ್ (KSMC) ರಾಜ್ಯಾದ್ಯಂತ ಇರುವ ತನ್ನ ಗಣಿ ಮತ್ತು ಘಟಕಗಳಲ್ಲಿ ಕಾರ್ಯನಿರ್ವಹಿಸಲು ಖಾಲಿಯಿರುವ 50 ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಆ ಕುರಿತ ವರದಿ ಇಲ್ಲಿದೆ.

ಹುದ್ದೆಗಳ ವಿವರ:

  • ಸಹಾಯಕ ವ್ಯವಸ್ಥಾಪಕರು (ಉತ್ಪಾದನೆ) - 03

  • ಸಹಾಯಕ ವ್ಯವಸ್ಥಾಪಕರು (ಲೀಸ್ & ಎಕ್ಸ್‌ಪ್ಲೋರೇಷನ್) - 02

  • ಅಭಿಯಂತರರು (ಪರಿಸರ) - 01

  • ಸಹಾಯಕ ಇಂಜಿನಿಯರ್ (ಮೆಕ್ಯಾನಿಕಲ್) - 03

  • ಸಹಾಯಕ ಇಂಜಿನಿಯರ್ (ಎಲೆಕ್ಟ್ರಿಕಲ್) - 02

  • ಸಹಾಯಕ ಇಂಜಿನಿಯರ್ (ಸಿವಿಲ್) - 01

  • ಸಹಾಯಕ ವ್ಯವಸ್ಥಾಪಕರು (ಸರ್ವೇ) - 01

  • ಕಿರಿಯ ಇಂಜಿನಿಯರ್ (ಎಲೆಕ್ಟ್ರಿಕಲ್) - 01

  • ಗಣಿ ಮುಂದಾಳು (Mine Foreman) - 08

  • ಗಣಿ ಸಂಗಾತಿ (Mine Mate) - 12

  • ಬ್ಲಾಸ್ಟರ್ (Blaster) - 08

  • ಸರ್ವೇ ಅಸಿಸ್ಟೆಂಟ್ - 01

  • ಎಲೆಕ್ಟ್ರಿಷಿಯನ್ (ಐಟಿಐ) - ಟೆಕ್ನಿಷಿಯನ್ ಗ್ರೇಡ್-II - 02

  • ಬ್ಲಾಸ್ಟಿಂಗ್ ಹೆಲ್ಪರ್ - 05

ಸಂಬಳ:

ಹುದ್ದೆಗಳಿಗೆ ಅನುಗುಣವಾಗಿ ತಿಂಗಳಿಗೆ 18,350 ರಿಂದ ರೂ. 50,000 ರೂಪಾಯಿವರೆಗೆ ಸಂಭಾವನೆ ನಿಗದಿಪಡಿಸಲಾಗಿದೆ.

ವಯೋಮಿತಿ:

ಕನಿಷ್ಠ ವಯಸ್ಸು: 18 ವರ್ಷ ತುಂಬಿರಬೇಕು. ಗರಿಷ್ಠ ವಯಸ್ಸು: ಹುದ್ದೆಯ ಜವಾಬ್ದಾರಿ ಹಾಗೂ ಅನುಭವದ ಆಧಾರದ ಮೇಲೆ ಗರಿಷ್ಠ ವಯೋಮಿತಿಯನ್ನು 40 ವರ್ಷಕ್ಕೆ ನಿಗದಿಪಡಿಸಲಾಗಿದೆ.

ಸಂದರ್ಶನದ ದಿನಾಂಕ:

  • 29.07.2026 ರಂದು ಸಹಾಯಕ ವ್ಯವಸ್ಥಾಪಕರು (ಉತ್ಪಾದನೆ), ಸಹಾಯಕ ವ್ಯವಸ್ಥಾಪಕರು (ಲೀಸ್ & ಎಕ್ಸ್‌ಪ್ಲೋರೇಷನ್), ಅಭಿಯಂತರರು (ಪರಿಸರ), ಸಹಾಯಕ ಅಭಿಯಂತರು (ಮೆಕ್ಯಾನಿಕಲ್), ಸಹಾಯಕ ಅಭಿಯಂತರು (ಎಲೆಕ್ಟ್ರಿಕಲ್), ಸಹಾಯಕ ಅಭಿಯಂತರು (ಸಿವಿಲ್), ಸಹಾಯಕ ವ್ಯವಸ್ಥಾಪಕರು (ಸರ್ವೇ), ಕಿರಿಯ ಅಭಿಯಂತರರು (ಎಲೆಕ್ಟ್ರಿಕಲ್)

  • 30.07.2026 ರಂದು ಗಣಿ ಮುಂದಾಳು (Mine Foreman), ಗಣಿ ಸಂಗಾತಿ (Mine Mate)

  • 31.07.2026 ರಂದು ಬ್ಲಾಸ್ಟರ್ (Blaster), ಸರ್ವೇ ಅಸಿಸ್ಟೆಂಟ್, ಎಲೆಕ್ಟ್ರಿಷಿಯನ್ (ಐಟಿಐ) - ಟೆಕ್ನಿಷಿಯನ್ ಗ್ರೇಡ್ - II, ಬ್ಲಾಸ್ಟಿಂಗ್ ಹೆಲ್ಪ‌ರ್

ಎಲ್ಲಾ ದಿನಾಂಕಗಳಂದು ಸಂದರ್ಶನಗಳು ಬೆಳಿಗ್ಗೆ 10:30 ರಿಂದ ಪ್ರಾರಂಭವಾಗುತ್ತದೆ.

ಮುಂದುವರೆದು, ಅಭ್ಯರ್ಥಿಗಳು ವೆಬ್ಸೈಟ್ ನಿಂದ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿಕೊಂಡು, ಅದನ್ನು ಸ್ವಹಸ್ತಾಕ್ಷರದಲ್ಲಿ ಭರ್ತಿ ಮಾಡಬೇಕು. ಸಂದರ್ಶನದ ಸಮಯದಲ್ಲಿ ಭರ್ತಿ ಮಾಡಿದ ಅರ್ಜಿ, ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ ಹಾಗೂ ಎಲ್ಲಾ ಮೂಲ ಶೈಕ್ಷಣಿಕ ಮತ್ತು ಅನುಭವದ ಪ್ರಮಾಣಪತ್ರಗಳ ನಕಲು ಪ್ರತಿಗಳನ್ನು ತರಬೇಕು. ಅರ್ಹತೆ ಮತ್ತು ಸಂದರ್ಶನದ ಪ್ರದರ್ಶನದ ಆಧಾರದ ಮೇಲೆ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ.

ಸಂದರ್ಶನ ನಡೆಯುವ ಸ್ಥಳ:

ಪ್ರಧಾನ ಕಚೇರಿ, ಟಿ.ಟಿ.ಎಂ.ಸಿ 'ಎ' ಬ್ಲಾಕ್, 5ನೇ ಮಹಡಿ, ಬಿ.ಎಂ.ಟಿ.ಸಿ ಕಟ್ಟಡ, ಕೆ.ಹೆಚ್. ರಸ್ತೆ, ಶಾಂತಿನಗರ, ಬೆಂಗಳೂರು - 560 027.

ಅಧಿಸೂಚನೆ ಹಾಗೂ ಅರ್ಜಿ ನಮೂನೆ:

https://ksmc.karnataka.gov.in/uploads/FinalPDF_1784193011.pdf

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

"ನಾವು ಕೈ ಜೋಡಿಸೋಣ": ಗಲ್ವಾನ್ ಸಂಘರ್ಷದ ಬಳಿಕ ಮೊದಲ ಮಾತುಕತೆ ವೇಳೆ Narendra Modi ಗೆ Xi Jinping ಸಂದೇಶ; ಭಾರತದೆದುರು ಮಂಡಿಯೂರಿದ ಚೀನಾ?

ಪ್ರಶ್ನೆ ಪತ್ರಿಕೆ ಸೋರಿಕೆ ಸಹಿಸಲ್ಲ: KPSC ವಿರುದ್ಧ ಹೋರಾಟಕ್ಕೆ CJP ಎಂಟ್ರಿ: ನೊಂದ ಅಭ್ಯರ್ಥಿಗಳಿಗೆ ನ್ಯಾಯದ ಭರವಸೆ

ಮೈಸೂರಿನ 'ಪೇಟೆ ರೌಡಿ' ಪೊಲೀಸ್ ಠಾಣೆಗೆ ನುಗ್ಗಿದ್ರೆ ನಾನು ಸೀದಾ ಪರಪ್ಪನ ಅಗ್ರಹಾರಕ್ಕೆ ನುಗ್ಗಿಸುತ್ತೇನೆ: ಪ್ರತಾಪ್ ಸಿಂಹಗೆ ಪ್ರಿಯಾಂಕ್ ಖರ್ಗೆ ಖಡಕ್ ವಾರ್ನ್

ಚೀನಾ ಇದ್ದರೂ ಬ್ರಿಕ್ಸ್‌ ಸದಸ್ಯತ್ವಕ್ಕಾಗಿ 3 ವರ್ಷಗಳ ಹಿಂದೆಯೇ ಅರ್ಜಿ ಸಲ್ಲಿಸಿದ್ರೂ ಅವಕಾಶ ಸಿಕ್ಕಿಲ್ಲ: ಪಾಕ್ ಗೋಳಾಟ!

ಬಳ್ಳಾರಿ ನಂತರ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಮತ್ತೊಂದು ಪಾದಯಾತ್ರೆ; ಸೆಪ್ಟೆಂಬರ್ 15 ರಿಂದ ರಾಜ್ಯಾದ್ಯಂತ ಹೋರಾಟ