VAO ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ಸರ್ಕಾರ; 572 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ KEA ಅಧಿಸೂಚನೆ

Government Job: ರಾಜ್ಯದ ಸರ್ಕಾರಿ ಉದ್ಯೋಗದ ಕನಸು ಕಾಣುತ್ತಿರುವ ಸಾವಿರಾರು ಯುವಕ ಯುವತಿಯರಿಗೆ ಕರ್ನಾಟಕ ಸರ್ಕಾರ ಸಿಹಿ ಸುದ್ದಿ ನೀಡಿದೆ. ಕೆಇಎ ಭರ್ಜರಿ 572 ಗ್ರಾಮ ಆಡಳಿತ ಅಧಿಕಾರಿಗಳ (VAO) ಹುದ್ದೆಗಳಿಗೆ ಹೊಸ ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಿದೆ.
Government Job
ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಅಧಿಸೂಚನೆ Online Desk
Updated on

ಬೆಂಗಳೂರು: ರಾಜ್ಯದ ಸರ್ಕಾರಿ ಉದ್ಯೋಗದ (Government Job) ಕನಸು ಕಾಣುತ್ತಿರುವ ಸಾವಿರಾರು ಯುವಕ ಯುವತಿಯರಿಗೆ ಕರ್ನಾಟಕ ಸರ್ಕಾರ ಸಿಹಿ ಸುದ್ದಿ ನೀಡಿದೆ. ಅದರಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ (Karnataka Examinations Authority) ಭರ್ಜರಿ 572 ಗ್ರಾಮ ಆಡಳಿತ ಅಧಿಕಾರಿಗಳ (Village Administrative Officer - VAO) ಹುದ್ದೆಗಳಿಗೆ ಹೊಸ ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಿದ್ದು, ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆ ಕುರಿತ ವರದಿ ಇಲ್ಲಿದೆ.

ಹುದ್ದೆ ವಿವರ:

ಕರ್ನಾಟಕ ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ಗ್ರಾಮ ಆಡಳಿತ ಅಧಿಕಾರಿಗಳ (Village Administrative Officer - VAO) ಹುದ್ದೆಗಳ ಭರ್ತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅಧಿಸೂಚನೆ ಪ್ರಕಟಿಸಿದೆ. ಇದರಲ್ಲಿ ಸಾಮಾನ್ಯ ವಲಯಕ್ಕೆ 505 ಹಾಗು ಕಲ್ಯಾಣ ಕರ್ನಾಟಕಕ್ಕೆ 67 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.

ಅರ್ಹತೆ ಮತ್ತು ವಯೋಮಿತಿ:

18 ರಿಂದ 40-45 ವರ್ಷಗಳ ನಡುವಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದ್ದು, ಮಾನ್ಯತೆ ಪಡೆದ ಮಂಡಳಿಯಿಂದ ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು. ಇದರೊಂದಿಗೆ, ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 35 ವರ್ಷ ಗರಿಷ್ಠ ವಯಸ್ಸು ನಿಗದಿ ಮಾಡಲಾಗಿದೆ. ಒಬಿಸಿ ವರ್ಗದವರಿಗೆ ಮೂರು ವರ್ಷ ಮತ್ತು ಎಸ್ ಸಿ ಎಸ್ ಟಿ ವರ್ಗದವರಿಗೆ ಐದು ವರ್ಷ ವಯೋಮಿತಿ ಸಡಿಲಿಕೆ ಇರುತ್ತದೆ. ಮೀಸಲಾತಿ ಪ್ರಮಾಣ ಪತ್ರಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕು.

ಗಮನಿಸಿ: ಅಭ್ಯರ್ಥಿಗಳು ಯಾವುದಾದರೂ ಒಂದು ಜಿಲ್ಲೆಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.

Government Job
PUC ಪಾಸಾದವರಿಗೆ ಗುಡ್ ನ್ಯೂಸ್! ನಿಮ್ಮ ಊರಿನಲ್ಲೇ ಕೇಂದ್ರ ಸರ್ಕಾರಿ ಕೆಲಸ; ಭರ್ಜರಿ ಸಂಬಳ

ಅರ್ಜಿ ಶುಲ್ಕ:

  • ಸಾಮಾನ್ಯ ಮತ್ತು ಒಬಿಸಿ ವರ್ಗದ (ಪ್ರವರ್ಗ - 2ಎ 2ಬಿ 3ಎ 3ಬಿ) ಅಭ್ಯರ್ಥಿಗಳಿಗೆ 750 ರೂಪಾಯಿ ಶುಲ್ಕ

  • ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಹಾಗೂ ಒಬಿಸಿ ವರ್ಗದ (ಪ್ರವರ್ಗ 1) ಅಭ್ಯರ್ಥಿಗಳಿಗೆ 500 ರೂಪಾಯಿ ಶುಲ್ಕ

  • ಅಂಗವಿಕಲ ಅಭ್ಯರ್ಥಿಗಳಿಗೆ 250 ರೂಪಾಯಿ ಶುಲ್ಕ

ವೇತನ:

ಅಧಿಸೂಚನೆಯ ಪ್ರಕಾರ, ಆಯ್ಕೆಯಾಗುವ ಅಭ್ಯರ್ಥಿಗಳಿಗೆ 34,100 ರೂಪಾಯಿಯಿಂದ 67,600 ರೂಪಾಯಿವರೆಗೆ ವೇತನ ಶ್ರೇಣಿ ದೊರೆಯಲಿದೆ. ಇದರಲ್ಲಿ ಮೂಲ ವೇತನದ ಜೊತೆಗೆ ಸರ್ಕಾರಿ ನಿಯಮಗಳ ಪ್ರಕಾರ ತುಟ್ಟಿ ಭತ್ಯೆ, ಮನೆ ಬಾಡಿಗೆ ಭತ್ಯೆ ಮತ್ತು ಇತರ ಸೌಲಭ್ಯಗಳು ದೊರೆಯುತ್ತವೆ. ಅದರಲ್ಲೂ, ಇದು ರಾಜ್ಯ ಸರ್ಕಾರದ ಗ್ರೂಪ್ ಸಿ ವೃಂದದ ಖಾಯಂ ಹುದ್ದೆಯಾಗಿರುವುದರಿಂದ ಉದ್ಯೋಗ ಭದ್ರತೆ ಇದೆ.

ಪ್ರಮುಖ ದಿನಾಂಕ:

  • ಆನ್ ಲೈನ್ ಅರ್ಜಿ ಸಲ್ಲಿಕೆ ಪ್ರಾರಂಭ: ಜುಲೈ 11 2026 (ಈಗಾಗಲೇ ಪ್ರಾರಂಭವಾಗಿದೆ)

  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಜುಲೈ 30 2026

  • ಶುಲ್ಕ ಪಾವತಿಸಲು ಕೊನೆಯ ದಿನಾಂಕ: ಜುಲೈ 31 2026

ಲಿಖಿತ ಪರೀಕ್ಷೆ ನಡೆಯುವ ದಿನಾಂಕ:

  • ಸಾಮಾನ್ಯ ವಲಯದ ಅಭ್ಯರ್ಥಿಗಳಿಗೆ: 04 ಅಕ್ಟೋಬರ್ 2026

  • ಕಲ್ಯಾಣ ಕರ್ನಾಟಕ ವಲಯದ ಅಭ್ಯರ್ಥಿಗಳಿಗೆ: 25 ಅಕ್ಟೋಬರ್ 2026

  • ಕಡ್ಡಾಯ ಕನ್ನಡ ಪರೀಕ್ಷೆಗೆ ಶೀಘ್ರದಲ್ಲೇ ದಿನಾಂಕ ಘೋಷಣೆ

Government Job
ಪದವೀಧರರಿಗೆ ಗುಡ್ ನ್ಯೂಸ್: ಯಾವುದೇ ಪರೀಕ್ಷೆಯಿಲ್ಲದೆ ಬೆಳಗಾವಿಯಲ್ಲಿ ಭರ್ಜರಿ ಸರ್ಕಾರಿ ಉದ್ಯೋಗವಕಾಶ; ಸಂಬಳ ಇಷ್ಟೊಂದು ಸಾವಿರ!

ಪರೀಕ್ಷಾ ಮಾದರಿ ಮತ್ತು ಆಯ್ಕೆ ಪ್ರಕ್ರಿಯೆ:

ಆಯ್ಕೆ ಪ್ರಕ್ರಿಯೆಯು ಲಿಖಿತ ಪರೀಕ್ಷೆ ಮೂಲಕ ನಡೆಯಲಿದೆ. ಅದರಂತೆ, ಪರೀಕ್ಷೆಯಲ್ಲಿ ಎರಡು ಪತ್ರಿಕೆಗಳಿರುತ್ತವೆ. ಬೆಳಗ್ಗೆ 10.30 ರಿಂದ 12.30 ರವರೆಗೆ ಮೊದಲ ಪತ್ರಿಕೆ ಮತ್ತು ಮಧ್ಯಾಹ್ನ 2.30 ರಿಂದ 4.30 ರವರೆಗೆ ಎರಡನೇ ಪತ್ರಿಕೆ ನಡೆಯಲಿದೆ. ಇನ್ನೂ, ಪ್ರತಿ ಪತ್ರಿಕೆಗೆ 100 ಅಂಕಗಳು ಮತ್ತು 100 ಪ್ರಶ್ನೆಗಳಿರುತ್ತವೆ. ತಪ್ಪು ಉತ್ತರಕ್ಕೆ 0.25 ನೆಗೆಟಿವ್ ಅಂಕ ಕಡಿತ ಮಾಡಲಾಗುತ್ತದೆ. ಅದ್ರಲ್ಲೂ, ಪರೀಕ್ಷೆಯು ಆಫ್ ಲೈನ್ ಓಎಂಆರ್ ಮಾದರಿಯಲ್ಲಿ ನಡೆಯಲಿದ್ದು, ಮೆರಿಟ್ ಆಧಾರದಲ್ಲಿ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಲಾಗುತ್ತದೆ.

ನೇಮಕಾತಿ ಅಧಿಸೂಚನೆ:

ಅರ್ಜಿ ಸಲ್ಲಿಕೆ ಲಿಂಕ್:

https://cetonline.karnataka.gov.in/login

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com