PUC ಪಾಸಾದವರಿಗೆ ಗುಡ್ ನ್ಯೂಸ್! ನಿಮ್ಮ ಊರಿನಲ್ಲೇ ಕೇಂದ್ರ ಸರ್ಕಾರಿ ಕೆಲಸ; ಭರ್ಜರಿ ಸಂಬಳ

Govt Job: ನಿಮ್ಮ ಊರಿನಲ್ಲೇ ಕೇಂದ್ರ ಸರ್ಕಾರಿ ಕೆಲಸ ಬೇಕಾ? ಸರ್ಕಾರಿ ಉದ್ಯೋಗದ ಕನಸು ಕಾಣುತ್ತಿರುವ ಕರ್ನಾಟಕದ ಲಕ್ಷಾಂತರ ಯುವಜನತೆಗೆ ಇಲ್ಲಿದೆ ಸಿಹಿ ಸುದ್ದಿ. ಆಧಾರ್ ಸೇವಾ ಕೇಂದ್ರಗಳಲ್ಲಿ ಹೊಸ ನೇಮಕಾತಿ ಆರಂಭ; PUC ಪಾಸ್ ಆಗಿದ್ರೆ ಸಾಕು!
Govenment Job
PUC ಪಾಸಾದವರಿಗೆ ಗುಡ್ ನ್ಯೂಸ್! Online Desk
Updated on

Govt Job: ಸರ್ಕಾರಿ ಉದ್ಯೋಗದ (Government Job) ಕನಸು ಕಾಣುತ್ತಿರುವ ಕರ್ನಾಟಕದ ಲಕ್ಷಾಂತರ ಯುವಜನತೆಗೆ ಇಲ್ಲಿದೆ ಸಿಹಿ ಸುದ್ದಿ. ನಿಮ್ಮ ಊರಿನಲ್ಲೇ, ನಿಮ್ಮ ಜಿಲ್ಲೆಯಲ್ಲೇ ಕೇಂದ್ರ ಸರ್ಕಾರಿ ಕೆಲಸ (Central Government Job) ಮಾಡುವ ಅವಕಾಶ, ಅದುವೇ ಕೇವಲ PUC ಪಾಸ್ ಆಗಿದ್ರೆ ಸಾಕು!

ಹೌದು, ಕೇಂದ್ರದ CSC e-Governance ವತಿಯಿಂದ ರಾಜ್ಯದ ಆಧಾರ್ ಸೇವಾ ಕೇಂದ್ರಗಳಲ್ಲಿ (Aadhaar Service Center) ಆಧಾರ್ ಆಪರೇಟರ್ ಮತ್ತು ಸೂಪರ್ವೈಸರ್ ಹುದ್ದೆಗಳಿಗೆ ಬೃಹತ್ ನೇಮಕಾತಿ ಆರಂಭವಾಗಿದೆ. ಕೇವಲ 12ನೇ ತರಗತಿ, ITI ಅಥವಾ ಡಿಪ್ಲೊಮಾ ಓದಿದವರೂ ಅರ್ಜಿ ಹಾಕಬಹುದು. ಆ ಕುರಿತ ವರದಿ ಇಲ್ಲಿದೆ:

ಹುದ್ದೆಯ ವಿವರ:
UIDAI ಅನುಮೋದಿತ ಆಧಾರ್ ಸೇವಾ ಕೇಂದ್ರಗಳಲ್ಲಿ ಜಿಲ್ಲಾ ಮಟ್ಟದ ಆಧಾರ್ ಸೂಪರ್ವೈಸರ್ ಆಪರೇಟರ್ ಹುದ್ದೆಗೆ ನೇಮಕಾತಿ ನಡೆಯುತ್ತಿದೆ. ಆಯ್ಕೆಯಾದವರು ತಮ್ಮ ಜಿಲ್ಲಾ ಕೇಂದ್ರದಲ್ಲಿ ಆಧಾರ್ ನೋಂದಣಿ, ಅಪ್ಡೇಟ್ ಮತ್ತು ಬಯೋಮೆಟ್ರಿಕ್ ಪರಿಶೀಲನೆ ಕೆಲಸ ನಿರ್ವಹಿಸಬೇಕಾಗುತ್ತದೆ.

ಜಿಲ್ಲಾವಾರು ಹುದ್ದೆಗಳ ಸಂಖ್ಯೆ:
ರಾಜ್ಯದ ಒಟ್ಟು 31 ಜಿಲ್ಲೆಗಳಲ್ಲಿ ಸುಮಾರು 157 ಹುದ್ದೆಗಳು ಖಾಲಿ ಇವೆ.
ಬಳ್ಳಾರಿ: 12, ಮೈಸೂರು: 8, ದಕ್ಷಿಣ ಕನ್ನಡ: 7, ತುಮಕೂರು: 7, ಬಾಗಲಕೋಟೆ: 6, ಬೆಂಗಳೂರು ಗ್ರಾಮಾಂತರ: 6, ಚಿಕ್ಕಬಳ್ಳಾಪುರ: 6, ಚಿಕ್ಕಮಗಳೂರು: 6, ದಾವಣಗೆರೆ: 6, ಕಲಬುರಗಿ: 6, ವಿಜಯನಗರ: 6, ಬೆಂಗಳೂರು ನಗರ: 5, ಬೆಳಗಾವಿ: 5, ಬೀದರ್: 5, ಹಾವೇರಿ: 5, ಕೊಪ್ಪಳ: 5, ಮಂಡ್ಯ: 5, ರಾಯಚೂರು: 5, ವಿಜಯಪುರ: 5, ಹಾಸನ: 4, ಕೋಲಾರ: 4, ಯಾದಗಿರಿ: 4, ಶಿವಮೊಗ್ಗ:4, ಚಿತ್ರದುರ್ಗ: 4, ಚಾಮರಾಜನಗರ: 4, ಧಾರವಾಡ: 3, ರಾಮನಗರ: 3, ಗದಗ: 3, ಕೊಡಗು: 3, ಉಡುಪಿ: 3, ಉತ್ತರ ಕನ್ನಡ: 2 ಹುದ್ದೆಗಳು

ಅರ್ಹತೆ:

ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ವಯಸ್ಸು ಪೂರ್ಣಗೊಂಡಿರಬೇಕು. ಶೈಕ್ಷಣಿಕ ಅರ್ಹತೆ ಮೂರು ರೀತಿಯಲ್ಲಿ ಪರಿಗಣಿಸಲಾಗುತ್ತದೆ.

  • PUC ಪಾಸಾದವರು ನೇರವಾಗಿ ಅರ್ಜಿ ಹಾಕಬಹುದು.

  • SSLC ಜೊತೆಗೆ 2 ವರ್ಷದ ITI ಕೋರ್ಸ್ ಮಾಡಿದವರು ಅರ್ಹರು.

  • SSLC ಜೊತೆಗೆ 3 ವರ್ಷದ ಪಾಲಿಟೆಕ್ನಿಕ್ ಡಿಪ್ಲೊಮಾ ಹೊಂದಿರುವವರಿಗೂ ಅವಕಾಶವಿದೆ.

ಇದರ ಜೊತೆಗೆ ಕಡ್ಡಾಯವಾಗಿ UIDAI ಅಧಿಕೃತ ಪರೀಕ್ಷಾ ಸಂಸ್ಥೆಯಿಂದ ನೀಡಲಾದ ಆಧಾರ್ ಆಪರೇಟರ್ ಅಥವಾ ಸೂಪರ್ವೈಸರ್ ಪ್ರಮಾಣಪತ್ರ ಹೊಂದಿರಬೇಕು.

ವೇತನ:
ಈ ಹುದ್ದೆಗಳಿಗೆ ರಾಜ್ಯ ಸರ್ಕಾರ ನಿಗದಿಪಡಿಸಿದ ಅರೆ ಕೌಶಲ್ಯ ಕಾರ್ಮಿಕರ ಕನಿಷ್ಠ ವೇತನದಂತೆ ₹23,376 ಸಂಬಳ ನೀಡಲಾಗುತ್ತದೆ. ನೇಮಕಾತಿ ಒಂದು ವರ್ಷದ ಗುತ್ತಿಗೆ ಆಧಾರದ ಮೇಲೆ ಇರಲಿದ್ದು, ಕಾರ್ಯಕ್ಷಮತೆ ಆಧರಿಸಿ ವಿಸ್ತರಣೆ ಸಾಧ್ಯತೆ ಇರುತ್ತದೆ

ಅರ್ಜಿ ಸಲ್ಲಿಸುವುದು ಹೇಗೆ?

ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಸಿಎಸ್‌ಸಿಯ ಅಧಿಕೃತ ಉದ್ಯೋಗ ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು.

  • ಮೊದಲಿಗೆ CSC Job Portal ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.

  • ಅಲ್ಲಿ ಲಭ್ಯವಿರುವ 'Aadhaar Supervisor/Operator' ಹುದ್ದೆಯ ಲಿಂಕ್ ಕ್ಲಿಕ್ ಮಾಡಿ.

  • ನಿಮ್ಮ ಶೈಕ್ಷಣಿಕ ದಾಖಲೆಗಳು ಮತ್ತು UIDAI ಪ್ರಮಾಣಪತ್ರದ ವಿವರಗಳನ್ನು ಭರ್ತಿ ಮಾಡಿ ಅರ್ಜಿ ಸಲ್ಲಿಸಿ.

ಅರ್ಜಿ ಸಲ್ಲಿಕೆ ಲಿಂಕ್: https://uidai.dexitglobalexams.com/UIDAI/LoginAction.action

ಕೊನೆಯ ದಿನಾಂಕ: 20/8/2026

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com