ONGC ಸಂಸ್ಥೆಯಲ್ಲಿ 3,047 ಹುದ್ದೆಗಳ ನೇಮಕಾತಿ AI Image
ವೃತ್ತಿ & ಉದ್ಯೋಗ ಅವಕಾಶಗಳು

Exam ಇಲ್ಲದೆ ಸರ್ಕಾರಿ ಕೆಲಸ: ONGC ಸಂಸ್ಥೆಯಲ್ಲಿ 3,047 ಹುದ್ದೆಗಳ ನೇಮಕಾತಿ: 10ನೇ ತರಗತಿ, ITI, ಪದವೀಧರರಿಗೆ ಸುವರ್ಣಾವಕಾಶ

ಭಾರತ ಸರ್ಕಾರದ ಸಂಸ್ಥೆಯಾದ ಆಯಿಲ್ ಅಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೊರೇಷನ್ ಲಿಮಿಟೆಡ್ (ONGC) ದೇಶಾದ್ಯಂತ ತನ್ನ 24 ಕಾರ್ಯನಿರ್ವಹಣಾ ಕೇಂದ್ರಗಳಲ್ಲಿ ಖಾಲಿ ಇರುವ ಒಟ್ಟು 3,047 ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಹೊರಡಿಸಿದೆ. ಆ ಕುರಿತ ವರದಿ ಇಲ್ಲಿದೆ:

ONGC Recruitment: ಕೇಂದ್ರ ಸರ್ಕಾರದ ಸಂಸ್ಥೆಯಲ್ಲಿ ವೃತ್ತಿಜೀವನ ಆರಂಭಿಸಲು ಕಾಯುತ್ತಿದ್ದೀರಾ? ಹಾಗಿದ್ದರೆ ನಿಮಗೊಂದು ಸುವರ್ಣಾವಕಾಶ ಇಲ್ಲಿದೆ. ಯಾವುದೇ ಲಿಖಿತ ಪರೀಕ್ಷೆಯಿಲ್ಲದೆ, ನೇರ ಮೆರಿಟ್ ಆಧಾರದ ಮೇಲೆ ಬರೋಬ್ಬರಿ 3,047 ಹುದ್ದೆಗಳ ಭರ್ತಿಗೆ ಆಯಿಲ್ ಅಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೊರೇಷನ್ ಲಿಮಿಟೆಡ್ ಅಧಿಸೂಚನೆ ಹೊರಡಿಸಿದೆ. 10ನೇ ತರಗತಿ ಪಾಸಾದವರಿಂದ ಹಿಡಿದು ಐಟಿಐ, ಡಿಪ್ಲೊಮಾ ಮತ್ತು ಯಾವುದೇ ಪದವೀಧರರು ಈ ಅವಕಾಶವನ್ನು ಬಳಸಿಕೊಳ್ಳಬಹುದಾಗಿದ್ದು, ಅರ್ಜಿ ಸಲ್ಲಿಕೆ ಹೇಗೆ ಮತ್ತು ವಯೋಮಿತಿಯ ಮಾನದಂಡಗಳೇನು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ. 

ಹುದ್ದೆಗಳ ವಿವರ:

  • ಸಂಸ್ಥೆಯ ಹೆಸರು: ಆಯಿಲ್ ಅಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೊರೇಷನ್ ಲಿಮಿಟೆಡ್ (ONGC)

  • ಒಟ್ಟು ಹುದ್ದೆಗಳ ಸಂಖ್ಯೆ: 3,047 ಅಪ್ರೆಂಟಿಸ್ ಹುದ್ದೆಗಳು

    ದೇಶದ ಪ್ರಮುಖ 6 ವಲಯಗಳಲ್ಲಿ ಈ ಹುದ್ದೆಗಳನ್ನು ಹಂಚಿಕೆ ಮಾಡಲಾಗಿದೆ:

    • ಪಶ್ಚಿಮ ವಲಯ: 1,166 ಹುದ್ದೆಗಳು (ಅತಿ ಹೆಚ್ಚು)

    • ಪೂರ್ವ ವಲಯ: 674 ಹುದ್ದೆಗಳು

    • ಮುಂಬೈ ವಲಯ: 482 ಹುದ್ದೆಗಳು

    • ದಕ್ಷಿಣ ವಲಯ: 269 ಹುದ್ದೆಗಳು

    • ಕೇಂದ್ರ ವಲಯ: 267 ಹುದ್ದೆಗಳು

    • ಉತ್ತರ ವಲಯ: 191 ಹುದ್ದೆಗಳು

ಪ್ರಮುಖ ದಿನಾಂಕಗಳು:

  • ಅರ್ಜಿ ಸಲ್ಲಿಕೆ ಆರಂಭ: ಅಕ್ಟೋಬರ್ 29, 2026

  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ನವೆಂಬರ್ 20, 2026

ಅರ್ಹತೆ:

  • ಶೈಕ್ಷಣಿಕ ಅರ್ಹತೆ:

    • ಲೈಬ್ರರಿ ಅಸಿಸ್ಟೆಂಟ್: 10ನೇ ತರಗತಿ ಉತ್ತೀರ್ಣ

    • ಕೋಪಾ (COPA), ಡ್ರಾಫ್ಟ್ಸ್‌ಮನ್, ಎಲೆಕ್ಟ್ರಿಷಿಯನ್, ಫಿಟ್ಟರ್, ಮೆಕ್ಯಾನಿಸ್ಟ್, ವೆಲ್ಡರ್, ಡೀಸೆಲ್ ಮೆಕ್ಯಾನಿಕ್, ಇನ್‌ಸ್ಟ್ರುಮೆಂಟ್ ಮೆಕ್ಯಾನಿಕ್, ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್ ಇತ್ಯಾದಿ: ಸಂಬಂಧಿತ ಟ್ರೇಡ್‌ನಲ್ಲಿ ITI

    • ಎಕ್ಸಿಕ್ಯೂಟಿವ್ ಫೈನಾನ್ಸ್ / ಅಕೌಂಟ್ಸ್ ಎಕ್ಸಿಕ್ಯೂಟಿವ್: B.Com

    • ಲ್ಯಾಬ್ ಕೆಮಿಸ್ಟ್ / ಅನಲಿಸ್ಟ್: B.Sc (ಕೆಮಿಸ್ಟ್ರಿ)

    • ಎಕ್ಸಿಕ್ಯೂಟಿವ್ ಹೆಚ್‌ಆರ್: BBA ಪದವಿ

    • ಸೆಕ್ರೆಟೇರಿಯಲ್ ಆಫೀಸ್ ಅಸಿಸ್ಟೆಂಟ್ / ಸ್ಟೋರ್ ಕೀಪರ್: ಯಾವುದೇ ಪದವಿ

    • ಪೆಟ್ರೋಲಿಯಂ ಎಕ್ಸಿಕ್ಯೂಟಿವ್: ಜಿಯಾಲಜಿ ವಿಷಯ ಹೊಂದಿರುವ ಪದವಿ

    • ಟೆಕ್ನಿಕಲ್ ಎಕ್ಸಿಕ್ಯೂಟಿವ್ ಹುದ್ದೆಗಳು: ಸಂಬಂಧಿತ ವಿಭಾಗದಲ್ಲಿ 3 ವರ್ಷಗಳ ಇಂಜಿನಿಯರಿಂಗ್ ಡಿಪ್ಲೊಮಾ ಅಥವಾ ಬಿಇ/ಬಿ.ಟೆಕ್ ಇಂಜಿನಿಯರಿಂಗ್ ಪದವಿ

  • ವಯೋಮಿತಿ (ನವೆಂಬರ್ 29, 2026 ಕ್ಕೆ ಅನ್ವಯಿಸುವಂತೆ):

    • ಕನಿಷ್ಠ ವಯಸ್ಸು: 18 ವರ್ಷಗಳು

    • ಗರಿಷ್ಠ ವಯಸ್ಸು: 24 ವರ್ಷಗಳು

    • (ಸರ್ಕಾರದ ನಿಯಮಾವಳಿಗಳ ಪ್ರಕಾರ ಎಸ್‌ಸಿ-ಎಸ್‌ಟಿಗೆ 5 ವರ್ಷ, ಒಬಿಸಿಗೆ 3 ವರ್ಷ ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆ ಇರಲಿದೆ)

ತರಬೇತಿ ಅವಧಿ:

  • 12 ತಿಂಗಳು (1 ವರ್ಷ)

ಮಾಸಿಕ ಸ್ಟೈಫಂಡ್:

  • ಅಭ್ಯರ್ಥಿಗಳ ವಿದ್ಯಾರ್ಹತೆಯ ಆಧಾರದ ಮೇಲೆ ಪ್ರತಿ ತಿಂಗಳು ₹8,200 ರಿಂದ ₹12,300 ವರೆಗೆ ಸ್ಟೈಫಂಡ್ ನೀಡಲಾಗುತ್ತದೆ.

ಅರ್ಜಿ ಸಲ್ಲಿಸುವುದು ಹೇಗೆ?

  • ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.

  • ಅಭ್ಯರ್ಥಿಗಳು ತಮ್ಮ ಹುದ್ದೆಯ ವಿಭಾಗಕ್ಕೆ ಅನುಗುಣವಾಗಿ ಕೇಂದ್ರ ಸರ್ಕಾರದ ಅಧಿಕೃತ ಅಪ್ರೆಂಟಿಸ್‌ಶಿಪ್ ಪೋರ್ಟಲ್‌ಗಳಾದ NAPS Portal ಅಥವಾ NATS Portal ಮೂಲಕ ಮೊದಲು ನೋಂದಾಯಿಸಿಕೊಂಡು, ಬಳಿಕ ONGC ಅಧಿಕೃತ ವೆಬ್‌ಸೈಟ್‌ ಮೂಲಕ ಆನ್‌ಲೈನ್ ಅರ್ಜಿ ಸಲ್ಲಿಸಬೇಕು.

ಆಯ್ಕೆ ವಿಧಾನ:

  • ಮೆರಿಟ್ ಪಟ್ಟಿ (ಅರ್ಹತಾ ಪರೀಕ್ಷೆಯ ಅಂಕಗಳ ಆಧಾರದ ಮೇಲೆ)

  • ಮೂಲ ದಾಖಲೆಗಳ ಪರಿಶೀಲನೆ

  • ವೈದ್ಯಕೀಯ ಫಿಟ್‌ನೆಸ್

    (ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ)

ಪರಿಶೀಲನೆಗೆ ಅಗತ್ಯವಿರುವ ದಾಖಲೆಗಳು:

  • 10ನೇ ತರಗತಿ ಪ್ರಮಾಣಪತ್ರ ಅಥವಾ ಜನ್ಮ ದಿನಾಂಕದ ಪುರಾವೆ

  • ಅರ್ಹತಾ ಪರೀಕ್ಷೆಯ ಅಂಕಪಟ್ಟಿಗಳು

  • ಐಟಿಐ / ಡಿಪ್ಲೊಮಾ / ಪದವಿ ಪ್ರಮಾಣಪತ್ರ

  • ಜಾತಿ ಪ್ರಮಾಣಪತ್ರ (SC/ST/OBC-NCL, ಅನ್ವಯಿಸಿದಲ್ಲಿ)

  • ಅಂಗವೈಕಲ್ಯ ಪ್ರಮಾಣಪತ್ರ (PwBD, ಅನ್ವಯಿಸಿದಲ್ಲಿ)

  • ಮಾನ್ಯತೆ ಪಡೆದ ಗುರುತಿನ ಚೀಟಿ

  • NAPS / NATS ನೋಂದಣಿ ಹಾಗೂ ಅರ್ಜಿ ವಿವರಗಳು

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಜಾತಿ ಬಲದಿಂದಲೇ HDK ಸಿಎಂ ಆಗಿದ್ದು, ನಾನೂ ಎಲ್ಲವನ್ನು ಬಿಟ್ಟು ನಿಂತರೆ ಕಷ್ಟವಾಗುತ್ತೆ: ಪ್ರಿಯಾಂಕ್ ಖರ್ಗೆ ಎಚ್ಚರಿಕೆ

ನವೆಂಬರ್ 7, ದೀಪಾವಳಿ ಹಬ್ಬದಂದು ದೆಹಲಿ-ಎನ್‌ಸಿಆರ್‌ನಲ್ಲಿ ಹಸಿರು ಪಟಾಕಿ ಸಿಡಿಸಲು 'ಸುಪ್ರೀಂ' ಅನುಮತಿ

ರಸ್ತೆ ಕಾಮಗಾರಿ ವೇಳೆ ಘೋರ ದುರಂತ: ವಿದ್ಯುತ್ ತಗುಲಿ 8 ಕಾರ್ಮಿಕರು ಸಾವು, ಐವರಿಗೆ ಗಾಯ!

Reliance ಎಫೆಕ್ಟ್, ಪುಟಿದೆದ್ದ ಷೇರುಮಾರುಕಟ್ಟೆ; Sensex 1,233 ಅಂಕ ಏರಿಕೆ, ಒಂದೇ ದಿನ ₹7 ಲಕ್ಷ ಕೋಟಿ ಲಾಭ!

ಡಾ. ಶ್ರೀನಿಧಿ ಜೊತೆ ಶಾಸಕ ದರ್ಶನ್ ಧ್ರುವನಾರಾಯಣ್‌ ಎಂಗೇಜ್‌ಮೆಂಟ್; 4 ವರ್ಷ ಪ್ರೀತಿಸಿ ಮದುವೆಗೆ ಸಜ್ಜಾದ ಜೋಡಿ!