ನೈರುತ್ಯ ರೈಲ್ವೆ ವಲಯ, ಹುಬ್ಬಳ್ಳಿ Online Desk
ವೃತ್ತಿ & ಉದ್ಯೋಗ ಅವಕಾಶಗಳು

ರೈಲ್ವೆ ಉದ್ಯೋಗಿಗಳಿಗೆ ಗುಡ್ ನ್ಯೂಸ್: ಹುಬ್ಬಳ್ಳಿಯಲ್ಲಿ 258 ಹುದ್ದೆಗಳ ಭರ್ತಿಗೆ ರೈಲ್ವೆ ಇಲಾಖೆ ಅಧಿಸೂಚನೆ; ಅರ್ಜಿ ಸಲ್ಲಿಕೆ ಹೇಗೆ?

ಹುಬ್ಬಳ್ಳಿಯ ನೈರುತ್ಯ ರೈಲ್ವೆ ವಲಯವು ಜನರಲ್ ಡಿಪಾರ್ಟ್‌ಮೆಂಟಲ್ ಕಾಂಪಿಟಿಟಿವ್ ಎಕ್ಸಾಮಿನೇಷನ್ ಕೋಟಾದಡಿ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಒಟ್ಟು 258 ಹುದ್ದೆಗಳ ಭರ್ತಿಗಾಗಿ ಅಧಿಕೃತ ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಿದೆ. ಆ ಕುರಿತ ವರದಿ ಇಲ್ಲಿದೆ:

Railway Recruitment: ರೈಲ್ವೆ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಉದ್ಯೋಗಿಗಳಿಗೆ ತಮ್ಮ ವೃತ್ತಿಜೀವನದಲ್ಲಿ ಮುಂಬಡ್ತಿ ಪಡೆದು ದೊಡ್ಡ ಹುದ್ದೆಗೇರಲು ಇಲ್ಲಿದೆ ಒಂದು ಸುವರ್ಣಾವಕಾಶ. ನೈರುತ್ಯ ರೈಲ್ವೆ ವಲಯವು ಬರೋಬ್ಬರಿ 258 ವಿವಿಧ ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಹೊರಡಿಸಿದ್ದು, ಉದ್ಯೋಗಿಗಳಲ್ಲಿ ಹೊಸ ಸಂಚಲನ ಮೂಡಿಸಿದೆ. ಪರೀಕ್ಷೆಯ ದಿನಾಂಕ, ಅರ್ಹತೆ ಹಾಗೂ ಅರ್ಜಿ ಸಲ್ಲಿಕೆಯ ಸಂಪೂರ್ಣ ವಿವರ ಇಲ್ಲಿದೆ:

ಹುದ್ದೆಗಳ ವಿವರ:

  • ನೇಮಕಾತಿ ಸಂಸ್ಥೆ: ದಕ್ಷಿಣ ಪಶ್ಚಿಮ ರೈಲ್ವೆ

  • ನೇಮಕಾತಿ ಮಾದರಿ: ಜನರಲ್ ಡಿಪಾರ್ಟ್‌ಮೆಂಟಲ್ ಕಾಂಪಿಟಿಟಿವ್ ಎಕ್ಸಾಮಿನೇಷನ್ (GDCE)

  • ಒಟ್ಟು ಹುದ್ದೆಗಳು: 258

    • ಗೂಡ್ಸ್ ಟ್ರೈನ್ ಮ್ಯಾನೇಜರ್: 247 ಹುದ್ದೆಗಳು

    • ಜೂನಿಯರ್ ಎಂಜಿನಿಯರ್: 11 ಹುದ್ದೆಗಳು (ವಿವಿಧ ತಾಂತ್ರಿಕ ವಿಭಾಗಗಳು)

ಪ್ರಮುಖ ದಿನಾಂಕಗಳು:

  • ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭ: ನವೆಂಬರ್ 9, 2026

  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಡಿಸೆಂಬರ್ 8, 2026 (ರಾತ್ರಿ 11:59 ರವರೆಗೆ)

ಅರ್ಹತೆ:

  • ಶೈಕ್ಷಣಿಕ ಅರ್ಹತೆ:

    • ಗೂಡ್ಸ್ ಟ್ರೈನ್ ಮ್ಯಾನೇಜರ್: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ ಹೊಂದಿರಬೇಕು.

    • ಜೂನಿಯರ್ ಎಂಜಿನಿಯರ್: ಸಂಬಂಧಪಟ್ಟ ಎಂಜಿನಿಯರಿಂಗ್ ವಿಭಾಗದಲ್ಲಿ 3 ವರ್ಷಗಳ ಡಿಪ್ಲೊಮಾ ಅಥವಾ ಬಿ.ಇ / ಬಿ.ಟೆಕ್ ಪದವಿ ಪೂರ್ಣಗೊಳಿಸಿರಬೇಕು

  • ವಯೋಮಿತಿ:

    • ಜನವರಿ 1, 2027ಕ್ಕೆ ಅನ್ವಯಿಸುವಂತೆ ಕನಿಷ್ಠ 18 ವರ್ಷಗಳು ಹಾಗೂ ಗರಿಷ್ಠ 42 ವರ್ಷಗಳು. (ನಿಯಮಾನುಸಾರ ಎಸ್‌ಸಿ/ಎಸ್‌ಟಿ/ಒಬಿಸಿ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ)

  • ಇದು ಸಾರ್ವಜನಿಕರಿಗೆ ಮುಕ್ತವಾಗಿರುವ ಸಾಮಾನ್ಯ ಮುಕ್ತ ನೇಮಕಾತಿಯಲ್ಲ. ನೈರುತ್ಯ ರೈಲ್ವೆ ವಲಯದಲ್ಲಿ ಅಥವಾ ಯಲಹಂಕದ ರೈಲ್ ವೀಲ್ ಫ್ಯಾಕ್ಟರಿಯಲ್ಲಿ ಪ್ರಸ್ತುತ ಖಾಯಂ/ನಿಯಮಿತ ನೌಕರರಾಗಿ ಸೇವೆ ಸಲ್ಲಿಸುತ್ತಿರುವವರು ಮಾತ್ರ ಇಲಾಖೆಯ ಬಡ್ತಿ ಅಥವಾ ವೃತ್ತಿ ಪ್ರಗತಿಗಾಗಿ ಈ GDCE ಪರೀಕ್ಷೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ಆಯ್ಕೆ ಪ್ರಕ್ರಿಯೆ:

ಅಭ್ಯರ್ಥಿಗಳನ್ನು ಕಂಪ್ಯೂಟರ್ ಆಧಾರಿತ ಪರೀಕ್ಷೆ, ದಾಖಲೆಗಳ ಪರಿಶೀಲನೆ ಹಾಗೂ ವೈದ್ಯಕೀಯ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುತ್ತದೆ. ಹಾಗಾಗಿ, ಅರ್ಹ ರೈಲ್ವೆ ಸಿಬ್ಬಂದಿಗಳು ಹೆಚ್ಚಿನ ಮಾಹಿತಿ ಹಾಗೂ ಆನ್‌ಲೈನ್ ಅರ್ಜಿ ಸಲ್ಲಿಕೆಗಾಗಿ ಆರ್ಆರ್‌ಸಿ ಹುಬ್ಬಳ್ಳಿಯ ಅಧಿಕೃತ ವೆಬ್‌ಸೈಟ್ rrchubli.in ಗೆ ಭೇಟಿ ನೀಡಬಹುದು.

  • ಅರ್ಜಿ ಶುಲ್ಕ: ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಪ್ರಧಾನಿ ಮೋದಿ ಮನೆ ಸಮೀಪದ ಮಸೀದಿ ನಂತರ ಮತ್ತೊಂದು ಮಸೀದಿ ತೆರವಿಗೆ ಕೇಂದ್ರ ನಿರ್ಧಾರ; ಹೈಕೋರ್ಟ್‌ಗೆ ಮಾಹಿತಿ!

'ತುಂಡು ತುಂಡಾಗಿ ಕತ್ತರಿಸುತ್ತಾರೆ' ಹೇಳಿಕೆ: ಛಲವಾದಿ ನಾರಾಯಣಸ್ವಾಮಿ ಮನೆ ಮುಂದೆ ಕಾಂಗ್ರೆಸ್ ಪ್ರತಿಭಟನೆ; ಬಂಧನಕ್ಕೆ ಆಗ್ರಹ; Video

ಕೊಲೆಯಾದ ಬಳಿಕ ದೆವ್ವವಾಗಿ ಕಾಡಿದ ಸ್ನೇಹಿತ; ಕಾಟ ತಾಳದೇ ಪೊಲೀಸರಿಗೆ ಶರಣಾಗಿ ತಪ್ಪೊಪ್ಪಿಕೊಂಡ ಯುವಕ!

'ಕಾಂಗ್ರೆಸ್ ನಾಯಕರನ್ನು ತುಂಡು ತುಂಡಾಗಿ ಕತ್ತರಿಸಿ ಅರಬ್ಬಿ ಸಮುದ್ರಕ್ಕೆ ಎಸೆಯುತ್ತಾರೆ': ನಾಲಿಗೆ ಹರಿಬಿಟ್ಟ ನಾರಾಯಣಸ್ವಾಮಿ!

ಉಕ್ರೇನ್ ಮೇಲೆ ರಷ್ಯಾದ ದಾಳಿ ತೀವ್ರ; ಶಾಲೆ ಧ್ವಂಸ, 29 ಮಂದಿ ಸಾವು