ಬ್ಯಾಂಕ್ ಆಫ್ ಬರೋಡಾ Online Desk
ವೃತ್ತಿ & ಉದ್ಯೋಗ ಅವಕಾಶಗಳು

ಬ್ಯಾಂಕ್ ಉದ್ಯೋಗಾಂಕ್ಷಿಗಳಿಗೆ ಗುಡ್ ನ್ಯೂಸ್: ಬರೋಡಾ ಬ್ಯಾಂಕಿನಲ್ಲಿ 837 ಹುದ್ದೆಗಳಿಗೆ ಅರ್ಜಿ ಆಹ್ವಾನ

ಬ್ಯಾಂಕ್ ಆಫ್ ಬರೋಡಾ ತನ್ನ ವೆಲ್ತ್ ಮ್ಯಾನೇಜ್‌ಮೆಂಟ್ ಸರ್ವಿಸಸ್ ವಿಭಾಗದಲ್ಲಿ ಒಟ್ಟು 837 ಹುದ್ದೆಗಳ ಭರ್ಜರಿ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದೆ. ಆ ಕುರಿತ ವರದಿ ಇಲ್ಲಿದೆ:

Bank of Baroda Recruitment: ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉನ್ನತ ಹುದ್ದೆಯನ್ನು ಅಲಂಕರಿಸಲು ಕನಸು ಕಾಣುತ್ತಿರುವ ಯುವಕರಿಗೆ ಹಾಗೂ ನಿರುದ್ಯೋಗಿಗಳಿಗೆ ಸುವರ್ಣಾವಕಾಶವೊಂದು ಎದುರಾಗಿದೆ. ದೇಶದ ಪ್ರತಿಷ್ಠಿತ ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ ಒಂದಾದ ಬ್ಯಾಂಕ್ ಆಫ್ ಬರೋಡಾ, ತನ್ನ ವೆಲ್ತ್ ಮ್ಯಾನೇಜ್‌ಮೆಂಟ್ ಸರ್ವಿಸಸ್ ವಿಭಾಗದಲ್ಲಿ ಒಟ್ಟು 837 ಬೃಹತ್ ಹುದ್ದೆಗಳ ಭರ್ಜರಿ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದೆ. ಅತ್ಯಕರ್ಷಕ ವೇತನ ಹಾಗೂ ಉಜ್ವಲ ವೃತ್ತಿಜೀವನ ರೂಪಿಸಿಕೊಳ್ಳಲು ಬಯಸುವ ಅರ್ಹ ಅಭ್ಯರ್ಥಿಗಳಿಗೆ ಈ ನೇಮಕಾತಿ ಮಹತ್ವದ ಹೆಜ್ಜೆಯಾಗಲಿದೆ. ಆ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಹುದ್ದೆಗಳ ವಿವರ:

  • ಸಂಸ್ಥೆಯ ಹೆಸರು: ಬ್ಯಾಂಕ್ ಆಫ್ ಬರೋಡಾ

  • ಹುದ್ದೆಯ ಹೆಸರು: ವೆಲ್ತ್ ಮ್ಯಾನೇಜ್ಮೆಂಟ್ ಸರ್ವೀಸ್ (WMS) ವಿಭಾಗದ ಹುದ್ದೆಗಳು

  • ಒಟ್ಟು ಹುದ್ದೆಗಳು: 837

    • ಗ್ರೂಪ್ ಹೆಡ್: 8 ಹುದ್ದೆಗಳು

    • ಹೆಡ್ ಇನ್ವೆಸ್ಟ್ಮೆಂಟ್: 1 ಹುದ್ದೆ

    • ಟೆರಿಟರಿ ಹೆಡ್: 35 ಹುದ್ದೆಗಳು

    • ಇನ್ವೆಸ್ಟ್ಮೆಂಟ್ ಪ್ರೊಡಕ್ಟ್ ಮ್ಯಾನೇಜರ್: 2 ಹುದ್ದೆಗಳು

    • ಸೀನಿಯರ್ ರಿಲೇಶನ್‌ಶಿಪ್ ಮ್ಯಾನೇಜರ್: 791 ಹುದ್ದೆಗಳು

  • ನೇಮಕಾತಿ ಪ್ರಕಾರ: ಒಪ್ಪಂದದ ಆಧಾರದ ಮೇಲೆ

  • ಒಪ್ಪಂದದಾವಧಿ: ಆರಂಭದಲ್ಲಿ 5 ವರ್ಷಗಳು (ಮತ್ತೆ 5 ವರ್ಷಗಳವರೆಗೆ ವಿಸ್ತರಿಸಬಹುದು)

ಪ್ರಮುಖ ದಿನಾಂಕಗಳು:

  • ಆನ್‌ಲೈನ್ ನೋಂದಣಿ ಪ್ರಾರಂಭ: ನವೆಂಬರ್ 4, 2026

  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ನವೆಂಬರ್ 24, 2026

  • ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: ನವೆಂಬರ್ 24, 2026

  • ವಯೋಮಿತಿ ಮತ್ತು ಅರ್ಹತೆಗೆ ಕಟ್‌ಆಫ್ ದಿನಾಂಕ: ನವೆಂಬರ್ 1, 2026

ಅರ್ಹತೆ:

ಶೈಕ್ಷಣಿಕ ಅರ್ಹತೆ: ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಭಾಗದಲ್ಲಿ ಪದವಿ ಪಡೆದಿರಬೇಕು. ಹುದ್ದೆಗಳಿಗೆ ಅನುಗುಣವಾಗಿ ಪದವಿ/ಡಿಪ್ಲೊಮಾ/ಎಂಬಿಎ/ಸಿಎ ವಿದ್ಯಾರ್ಹತೆ ಮತ್ತು ಬ್ಯಾಂಕಿಂಗ್ ಕ್ಷೇತ್ರಗಳಲ್ಲಿ ಕಡ್ಡಾಯ ಕೆಲಸದ ಅನುಭವ ಹೊಂದಿರಬೇಕು.

ಕಡ್ಡಾಯ ಪ್ರಮಾಣಪತ್ರಗಳು:

  • ಗ್ರೂಪ್ ಹೆಡ್ ಹಾಗೂ ಟೆರಿಟರಿ ಹೆಡ್: NISM V-A, NISM V-D, IRDA IC38, NISM XIII, ಮತ್ತು NISM Series XXI-A.

  • ಹೆಡ್ ಇನ್ವೆಸ್ಟ್ಮೆಂಟ್ ಹಾಗೂ ಇನ್ವೆಸ್ಟ್ಮೆಂಟ್ ಪ್ರೊಡಕ್ಟ್ ಮ್ಯಾನೇಜರ್: NISM V-A, NISM V-D, NISM XIII ಅಥವಾ NISM Series XXI-A ಇವುಗಳಲ್ಲಿ ಯಾವುದಾದರೂ ಒಂದು.

  • ಸೀನಿಯರ್ ರಿಲೇಶನ್‌ಶಿಪ್ ಮ್ಯಾನೇಜರ್: NISM V-A / NISM V-D ಮತ್ತು/ಅಥವಾ IRDA IC38.

ವಯೋಮಿತಿ: ಅಭ್ಯರ್ಥಿಗಳ ವಯಸ್ಸು 1 ನವೆಂಬರ್ 2026 ಕ್ಕೆ ಅನ್ವಯಿಸುವಂತೆ ಕನಿಷ್ಠ 24 ರಿಂದ ಗರಿಷ್ಠ 50 ವರ್ಷಗಳ ಒಳಗಿರಬೇಕು (ಹುದ್ದೆಗಳಿಗೆ ಅನುಗುಣವಾಗಿ ವಯೋಮಿತಿ ಬದಲಾಗುತ್ತದೆ).

ಆಯ್ಕೆ ವಿಧಾನ:

ಬಂದ ಅರ್ಜಿಗಳ ಶಾರ್ಟ್‌ಲಿಸ್ಟಿಂಗ್, ಆನ್‌ಲೈನ್ ಪರೀಕ್ಷೆ, ಸೈಕೋಮೆಟ್ರಿಕ್ ಟೆಸ್ಟ್ ಮತ್ತು ವೈಯಕ್ತಿಕ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಸಲ್ಲಿಸುವ ವಿಧಾನ:

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್ ಆದ Bank of Baroda Careers ಗೆ ಭೇಟಿ ನೀಡಿ ಆನ್‌ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕಾಗುತ್ತದೆ.

  • ಅರ್ಜಿ ಶುಲ್ಕ:

    • ಸಾಮಾನ್ಯ / ಒಬಿಸಿ / ಇಡಬ್ಲ್ಯೂಎಸ್ (UR/OBC/EWS) ಅಭ್ಯರ್ಥಿಗಳಿಗೆ: 850 ರೂ.

    • ಎಸ್ಸಿ / ಎಸ್ಟಿ / ವಿಕಲಚೇತನರು / ಮಹಿಳಾ ಅಭ್ಯರ್ಥಿಗಳಿಗೆ: 175 ರೂ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

KPSC ಶುದ್ಧೀಕರಣವಾಗುವರೆಗೂ ಆಯೋಗದ ಎಲ್ಲ ನೇಮಕಾತಿ ಪರೀಕ್ಷೆಗಳನ್ನು ಮುಂದೂಡಿ: HD ಕುಮಾರಸ್ವಾಮಿ

ರಾಜಕೀಯ 'ಇಷ್ಟವಿರಲಿಲ್ಲ', ರಾಹುಲ್, ಪ್ರಿಯಾಂಕಾ ಸಹ ವಿರೋಧಿಸಿದ್ದರು, ಆದರೆ ಭಗವದ್ಗೀತೆ, ಶ್ರೀಕೃಷ್ಣನ ಸಂದೇಶ "ಮುಂದಿನ ದಾರಿ ತೋರಿಸಿತು": ಸೋನಿಯಾ

'E20 ಈಗ 420 ಆಗಿದೆ': ಪೆಟ್ರೋಲ್‌ನಲ್ಲಿ ಎಥೆನಾಲ್ ಪ್ರಮಾಣ ಹೆಚ್ಚಾಗಿದೆ, ಲಾಭ ಯಾರಿಗೆ?; ಪ್ರಧಾನಿ ಮೋದಿ ವಿರುದ್ಧ ರಾಹುಲ್ ಗಾಂಧಿ ಕಿಡಿ

'ತುಂಡು ತುಂಡಾಗಿ ಕತ್ತರಿಸುತ್ತಾರೆ' ಹೇಳಿಕೆ: ಛಲವಾದಿ ನಾರಾಯಣಸ್ವಾಮಿ ಮನೆಗೆ ಚಾಕು, ಚೂರಿ ಆರ್ಡರ್; ಡೆಲಿವರಿ ಬಾಯ್ಸ್ ಬಂದಾಗ ಹೈಡ್ರಾಮಾ!

ವಿಜಯಪುರ ಕೊಲೆ ಪ್ರಕರಣ: ಪ್ರಮುಖ ಆರೋಪಿ ಸಮೀರ್ ಮುಲ್ಲಾನ ಕಾಲಿಗೆ ಗುಂಡಿಕ್ಕಿ ಬಂಧನ, ಪೊಲೀಸ್ ಸಿಬ್ಬಂದಿಗೆ ಗಾಯ!