Railway Recruitment 2026: ಕೇಂದ್ರ ಸರ್ಕಾರಿ ಉದ್ಯೋಗದ ಕನಸು ಕಾಣುತ್ತಿರುವ ದೇಶದ ಪದವೀಧರ ಯುವಜನತೆಗೆ ರೈಲ್ವೆ ನೇಮಕಾತಿ ಮಂಡಳಿಯು ಬಂಪರ್ ಕೊಡುಗೆಯನ್ನು ನೀಡಿದೆ. ನಾನ್-ಟೆಕ್ನಿಕಲ್ ಪಾಪ್ಯುಲರ್ ಕ್ಯಾಟಗರಿ ಅಡಿಯಲ್ಲಿ ಒಟ್ಟು 3,548 ಹುದ್ದೆಗಳಿಗೆ ಹೆಚ್ಚಿಸಿ, ಅಧಿಕೃತ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಿದೆ. ರೈಲ್ವೆ ಇಲಾಖೆಯಲ್ಲಿ ಸರ್ಕಾರಿ ಕೆಲಸ ಪಡೆಯಲು ಬಯಸುವ ಪದವೀಧರ ಅಭ್ಯರ್ಥಿಗಳಿಗೆ ಇದು ಒಂದು ಸುವರ್ಣಾವಕಾಶವಾಗಿದ್ದು, ನೇಮಕಾತಿ ಕುರಿತ ವರದಿ ಇಲ್ಲಿದೆ:
ಹುದ್ದೆಗಳ ವಿವರ:
ಒಟ್ಟು 3,548 ಹುದ್ದೆಗಳು
ಚೀಫ್ ಕಮರ್ಷಿಯಲ್-ಕಮ್-ಟಿಕೆಟ್ ಸೂಪರ್‌ವೈಸರ್: 127 ಹುದ್ದೆಗಳು
ಗೂಡ್ಸ್ ಟ್ರೈನ್ ಮ್ಯಾನೇಜರ್: 2,750 ಹುದ್ದೆಗಳು
ಜೂನಿಯರ್ ಅಕೌಂಟ್ಸ್ ಅಸಿಸ್ಟೆಂಟ್ ಕಮ್ ಟೈಪಿಸ್ಟ್: ಒಟ್ಟು 300 ಹುದ್ದೆಗಳು
ಸೀನಿಯರ್ ಕ್ಲರ್ಕ್ ಕಮ್ ಟೈಪಿಸ್ಟ್: ಒಟ್ಟು 371 ಹುದ್ದೆಗಳು
ಬೆಂಗಳೂರು ಆರ್‌ಆರ್‌ಬಿ ವಲಯಕ್ಕೆ ಒಟ್ಟು 346 ಹುದ್ದೆಗಳು ಲಭ್ಯವಿವೆ (ಗೂಡ್ಸ್ ಟ್ರೈನ್ ಮ್ಯಾನೇಜರ್ 301, ಸೀನಿಯರ್ ಕ್ಲರ್ಕ್ 32, ಜೂನಿಯರ್ ಅಕೌಂಟ್ಸ್ ಅಸಿಸ್ಟೆಂಟ್ 10, ಚೀಫ್ ಕಮರ್ಷಿಯಲ್ ಸೂಪರ್‌ವೈಸರ್ 3)
ಅರ್ಹತೆ:
ವಿದ್ಯಾರ್ಹತೆ: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ ಪೂರ್ಣಗೊಳಿಸಿರಬೇಕು.
ವಯೋಮಿತಿ (01 ಜನವರಿ 2027 ಕ್ಕೆ ಅನ್ವಯಿಸುವಂತೆ): ಅಭ್ಯರ್ಥಿಗಳ ವಯಸ್ಸು 18 ರಿಂದ 33 ವರ್ಷಗಳ ಒಳಗಿರಬೇಕು. ನಿಯಮಾವಳಿಗಳ ಪ್ರಕಾರ ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷಗಳ ವಯೋಮಿತಿ ಸಡಿಲಿಕೆ ಇರಲಿದೆ.
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ: ಅಕ್ಟೋಬರ್ 8, 2026
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ನವೆಂಬರ್ 6, 2026 (ರಾತ್ರಿ 11:59 ರವರೆಗೆ)
ಅರ್ಜಿ ಸಲ್ಲಿಸುವುದು ಹೇಗೆ?
ಅರ್ಹ ಅಭ್ಯರ್ಥಿಗಳು ಯಾವುದೇ ಆಫ್‌ಲೈನ್/ಅಂಚೆ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ. ರೈಲ್ವೆ ನೇಮಕಾತಿಯ ಅಧಿಕೃತ ವೆಬ್‌ಸೈಟ್ ಆದ RRB Apply Portal ಗೆ ಭೇಟಿ ನೀಡಿ ಆನ್‌ಲೈನ್ ಮೂಲಕವೇ ನೋಂದಣಿ ಮಾಡಿಕೊಳ್ಳಬೇಕು.
ಅರ್ಜಿ ಶುಲ್ಕ
ಸಾಮಾನ್ಯ / OBC / EWS ಅಭ್ಯರ್ಥಿಗಳಿಗೆ: ₹500 (ಮೊದಲ ಹಂತದ CBT ಪರೀಕ್ಷೆಗೆ ಹಾಜರಾದ ನಂತರ ₹400 ರೀಫಂಡ್ ಆಗುತ್ತದೆ).
SC / ST / ಮಹಿಳೆಯರು / ಅಂಗವಿಕಲ ಅಭ್ಯರ್ಥಿಗಳಿಗೆ: ₹250 (ಮೊದಲ ಹಂತದ ಪರೀಕ್ಷೆಯ ನಂತರ ಪೂರ್ಣ ಹಣ ರೀಫಂಡ್ ಆಗುತ್ತದೆ).
ಆಯ್ಕೆ ವಿಧಾನ
ಈ ಬಾರಿಯ ನೇಮಕಾತಿಯಲ್ಲಿ ಪ್ರಮುಖ ಬದಲಾವಣೆ ಮಾಡಲಾಗಿದ್ದು, ಟೈಪಿಂಗ್ ಟೆಸ್ಟ್ ಅಥವಾ ಆಪ್ಟಿಟ್ಯೂಡ್ ಟೆಸ್ಟ್ ಹಂತವನ್ನು ತೆಗೆದುಹಾಕಲಾಗಿದೆ. ಆಯ್ಕೆಯು ಕೇವಲ ಇವುಗಳ ಮೇಲೆ ಆಧಾರಿತವಾಗಿರುತ್ತದೆ:
ಪರೀಕ್ಷಾ ಮಾದರಿ (ತಲಾ 1/3 ನೆಗೆಟಿವ್ ಅಂಕಗಳು, 90 ನಿಮಿಷಗಳ ಕಾಲಾವಕಾಶ)
ಮೊದಲ ಹಂತದ ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT 1 (ಒಟ್ಟು 100 ಪ್ರಶ್ನೆಗಳು, 100 ಅಂಕಗಳು): ಸಾಮಾನ್ಯ ಅರಿವು 40 ಪ್ರಶ್ನೆಗಳು, ಗಣಿತ 30 ಪ್ರಶ್ನೆಗಳು, ರೀಸನಿಂಗ್ 30 ಪ್ರಶ್ನೆಗಳು)
ದ್ವಿತೀಯ ಹಂತದ ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT 2 (ಒಟ್ಟು 120 ಪ್ರಶ್ನೆಗಳು, 120 ಅಂಕಗಳು): ಸಾಮಾನ್ಯ ಅರಿವು 50 ಪ್ರಶ್ನೆಗಳು, ಗಣಿತ 35 ಪ್ರಶ್ನೆಗಳು, ರೀಸನಿಂಗ್ 35 ಪ್ರಶ್ನೆಗಳು)
ದಾಖಲೆಗಳ ಪರಿಶೀಲನೆ ಮತ್ತು ವೈದ್ಯಕೀಯ ತಪಾಸಣೆ.