ವಿಜಯ್ - ಸಂಜಯ್ Online Desk
ಸಿನಿಮಾ

ವಿಜಯ್ CM ಆದನಂತರ ಮಗ ಸಂಜಯ್ ಮೊದಲ ಪ್ರತಿಕ್ರಿಯೆ; ದಳಪತಿ ಬಗ್ಗೆ ಸಿಗ್ಮಾ ಡೈರೆಕ್ಟರ್ ಹೇಳಿದ್ದೇನು?

Jason Sanjay on CM Vijay: ಮುಖ್ಯಮಂತ್ರಿ ದಳಪತಿ ವಿಜಯ್ ತಮ್ಮ ಪತ್ನಿ ಸಂಗೀತಾಗೆ ವಿಚ್ಛೇದನ ನೀಡಲು ಮುಂದಾಗಿದ್ದಾರೆ. ಇದೇ ಕಾರಣದಿಂದ ವಿಜಯ್ ಮಗ ಜೇಸನ್ ಸಂಜಯ್ ಕೂಡ ತಮ್ಮ ತಂದೆಯಿಂದ ದೂರವಾಗಿದ್ದರೆ ಎನ್ನಲಾಗಿರುವುದರ ನಡುವೆಯೇ ಜೇಸನ್, ತಮ್ಮ ತಂದೆ ಹಾಗೂ ತಾಯಿ ಬಗ್ಗೆ ಮೊದಲ ಬಾರಿಗೆ ಮಾತನಾಡಿದ್ದಾರೆ.

ಚೆನ್ನೈ (ತಮಿಳುನಾಡು): ಮುಖ್ಯಮಂತ್ರಿ ಹಾಗೂ ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ದಳಪತಿ ವಿಜಯ್ ಅವರು ತಮ್ಮ ಪತ್ನಿ ಸಂಗೀತಾಗೆ ವಿಚ್ಛೇದನ ನೀಡಲು ಮುಂದಾಗಿದ್ದಾರೆ. ಇದೇ ಕಾರಣದಿಂದ ವಿಜಯ್ ಮಗ ಜೇಸನ್ ಸಂಜಯ್ ಕೂಡ ತಮ್ಮ ತಂದೆಯಿಂದ ದೂರವಾಗಿದ್ದರೆ ಎನ್ನಲಾಗಿರುವುದರ ನಡುವೆಯೇ ಜೇಸನ್, ತಮ್ಮ ತಂದೆ ಹಾಗೂ ತಾಯಿ ಬಗ್ಗೆ ಮೊದಲ ಬಾರಿಗೆ ಮಾತನಾಡಿದ್ದಾರೆ. ಆ ಕುರಿತ ವರದಿ ಇಲ್ಲಿದೆ.

ವಿಜಯ್ ಬಗ್ಗೆ ಜೇಸನ್ ಹೇಳಿದ್ದೇನು?

ದಳಪತಿ ವಿಜಯ್ ಮಗ ಜೇಸನ್ ಸಿಗ್ಮಾ ಚಿತ್ರದ ಮೂಲಕ ನಿರ್ದೇಶಕರಾಗಿ ತಮ್ಮ ಸಿನಿ ವೃತ್ತಿಜೀವನ ಪ್ರಾರಂಭಿಸಲು ಸಜ್ಜಾಗಿದ್ದಾರೆ. ಇನ್ನು ಚಿತ್ರದ ಪ್ರಚಾರದ ನಡುವೆ ಜೇಸನ್, "ನಾನು ಸಿನಿಮಾ ರಂಗಕ್ಕೆ ಬರಬೇಕೆಂಬ ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ಮನೆಯಲ್ಲಿ ನನ್ನ ತಂದೆ ವಿಜಯ್ ಬಳಿ ಕೇಳಿದೆ". ಅದ್ರಂತೆ, ತಂದೆ, ತಾಯಿ, ಸಹೋದರಿ ಹಾಗೂ ಸ್ನೇಹಿತರು ನನ್ನ ನಿರ್ಧಾರಕ್ಕೆ ಖುಷಿಯಿಂದ ಸ್ಪಂದಿಸಿ, ಬೆಂಬಲವಾದರು ಎಂದು ತಿಳಿಸಿದ್ದಾರೆ.

20 ನೇ ವಯಸ್ಸಿನಲ್ಲೆ ಮೊದಲ ಚಿತ್ರ ರಿಜೆಕ್ಟ್!

ತಮಿಳಿನ ಪ್ರೇಮಂ, ನೀರಂ ಮತ್ತು ಗೋಲ್ಡ್ ನಂತಹ ಚಿತ್ರಗಳನ್ನು ನಿರ್ದೇಶಿಸಿದ ಸ್ಟಾರ್ ನಿರ್ದೇಶಕ ಅಲ್ಫೋನ್ಸೊ ಪುತ್ರೇನ್, ಜೇಸನ್ ಅವರಿಗೆ 20 ವರ್ಷದವನಿದ್ದಾಗಲೇ ಆಕ್ಟ್ ಮಾಡಲು ಆಫರ್ ನೀಡಿದ್ದರು. ಆದರೆ, ಆ ವೇಳೆ ಇನ್ನೂ ಓದುತ್ತಿದ್ದ ಕಾರಣದಿಂದ ಚಲನಚಿತ್ರ ಜಗತ್ತಿಗೆ ಪ್ರವೇಶಿಸುವ ಬಗ್ಗೆ ಯೋಚನೆ ಮಾಡಲಿಲ್ಲ ಹಾಗಾಗಿಯೇ, ಅದನ್ನ ರಿಜೆಕ್ಟ್ ಮಾಡಿದೆ ಎಂದು ತಿಳಿಸಿದ್ದಾರೆ.

ಅಪ್ಪನಿಗಾಗಿ ಮಗ ಕಿಡ್ನಾಪ್!

ಮುಂದುವರೆದು ಮಾತನಾಡಿದ ಜೇಸನ್, "ಶಾಲೆಯ ದಿನಗಳಲ್ಲಿ ತಂದೆ ವಿಜಯ್ ಅವರನ್ನು ಭೇಟಿಯಾಗುವ ಏಕೈಕ ಉದ್ದೇಶದಿಂದ, ಅಭಿಮಾನಿಯೊಬ್ದರು ಶಾಲೆಯ ಬಳಿ ಕಿಡ್ನ್ಯಾಪ್ ಮಾಡಿದ್ದರು" ಎನ್ನುವ ರೋಚಕ ಸಂಗತಿಯನ್ನು ಕೂಡ ಹಂಚಿಕೊಂಡಿದ್ದಾರೆ.

ವಿಜಯ್ - ಸಂಜಯ್

ಸಿಗ್ಮಾ ಚಿತ್ರದ ಮುಂದೂಡಿಕೆ

ಜೇಸನ್ ನಿರ್ದೇಶನದ ಮೊದಲ ಚಿತ್ರ ಸಿಗ್ಮಾದಲ್ಲಿ ಸುಂದೀಪ್ ಕಿಶನ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಈ ಸಿನಿಮಾ ಮೊದಲು ಜುಲೈ 31 ರಂದು ಬಿಡುಗಡೆಯಾಗಬೇಕಿತ್ತು. ಆದರೆ ಸಿಎಂ ವಿಜಯ್ ಅವರ ಕೊನೆಯ ಚಿತ್ರ ಜನ ನಾಯಗನ್ ಜುಲೈ 24 ರಂದು ತೆರೆಕಾಣುತ್ತಿರುವುದರಿಂದ, ತಂದೆಯ ಚಿತ್ರದ ಜೊತೆ ಬಾಕ್ಸ್ ಆಫೀಸ್ ಸಂಘರ್ಷವನ್ನು ತಪ್ಪಿಸಲು ಸಿಗ್ಮಾ ಚಿತ್ರದ ಬಿಡುಗಡೆಯನ್ನು ಆಗಸ್ಟ್‌ಗೆ ಮುಂದೂಡಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Hormuz ಸಂಘರ್ಷ ತೀವ್ರ: Iran ಮೇಲೆ ಅಮೆರಿಕಾ ಭೀಕರ ವಾಯುದಾಳಿ; ಪ್ರತೀಕಾರವಾಗಿ ಕತಾರ್ ಮೇಲೆ Tehran ಕ್ಷಿಪಣಿ ದಾಳಿ

Delimitation ಪರಿಷ್ಕೃತ ಮಸೂದೆ ವಿವಾದ: ಸರ್ವಪಕ್ಷ ಸಭೆ ಕರೆಯುವಂತೆ ಪ್ರಧಾನಿ ಮೋದಿಗೆ ಮಲ್ಲಿಕಾರ್ಜುನ ಖರ್ಗೆ ಆಗ್ರಹ..!

ನೌಕಾ ದಿಗ್ಬಂಧನ ಉಲ್ಲಂಘನೆ: ಇರಾನ್‌ಗೆ ತೆರಳುತ್ತಿದ್ದ 3 ಹಡಗುಗಳಿಗೆ ಅಮೆರಿಕಾ ತಡೆ, 1 ಹಡಗು ವಶಕ್ಕೆ..!

'ಟೈ ಧರಿಸಿಲ್ಲ' ಎಂದು 'ಕಾಲು ಮುಟ್ಟಿ ಕ್ಷಮೆ ಕೇಳಿ ಅಂದ್ರು': ಕಂಪನಿ ಘನತೆಗೆ ಮಸಿ ಬಳಿಯುವ ಪ್ರಯತ್ನ; ಮಾಜಿ ಉದ್ಯೋಗಿ ಆರೋಪ ತಳ್ಳಿ ಹಾಕಿದ IndiGo

ಬೆಂಗಳೂರಿನ HMT ಭೂಮಿ ಲಪಟಾಯಿಸಿದವರು ಯಾರು? "ಧೈರ್ಯವಿದ್ದರೆ ಆ ಗಗನಚುಂಬಿ ಕಟ್ಟಡಗಳ ಮುಟ್ಟುಗೋಲು ಹಾಕಿ": ರಾಜ್ಯ ಸರ್ಕಾರಕ್ಕೆ HDK ಸವಾಲು..!