ಸಿಲ್ಕ್ ಮಂಜು 
ಸಿನಿಮಾ

‘A’ ಸಿನಿಮಾ ನಿರ್ಮಾಪಕ ಸಿಲ್ಕ್ ಮಂಜು ನಿಧನ!

1998ರಲ್ಲಿ ತೆರೆಕಂಡ ಉಪೇಂದ್ರ ನಿರ್ದೇಶನದ ಎ ಚಿತ್ರಕ್ಕೆ ಬಂಡವಾಳ ಹೂಡುವ ಮೂಲಕ ಚಿತ್ರರಂಗ ಪ್ರವೇಶಿಸಿದ್ದರು. ಆ ಸಿನಿಮಾ ಅಭೂತಪೂರ್ವ ಯಶಸ್ಸು ಕಂಡು ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿತ್ತು.

'ಎ' ಸಿನಿಮಾ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆಯನ್ನು ಎಬ್ಬಿಸಿದ ಹಾಗೂ ಉಪೇಂದ್ರ ಅವರನ್ನು ಸ್ಟಾರ್ ಮಾಡುವಲ್ಲಿ ಪ್ರಮುಖ ಕಾರಣವಾಗಿದ್ದ ನಿರ್ಮಾಪಕ ಬಿ.ಜಿ ಮಂಜುನಾಥ್ (ಸಿಲ್ಕ್ ಮಂಜುನಾಥ್) ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಅವರಿಗೆ 69 ವರ್ಷ ವಯಸ್ಸಾಗಿತ್ತು. ಕಳೆದ ಕೆಲವು ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಇವರನ್ನ ಇಂಡಸ್ಟಿಯಲ್ಲಿ ಸಿಲ್ಕ್ ಮಂಜು ಎಂದೇ ಕರೆಯುತ್ತಿದ್ದರು.

1998ರಲ್ಲಿ ತೆರೆಕಂಡ ಉಪೇಂದ್ರ ನಿರ್ದೇಶನದ ಎ ಚಿತ್ರಕ್ಕೆ ಬಂಡವಾಳ ಹೂಡುವ ಮೂಲಕ ಚಿತ್ರರಂಗ ಪ್ರವೇಶಿಸಿದ್ದರು. ಆ ಸಿನಿಮಾ ಅಭೂತಪೂರ್ವ ಯಶಸ್ಸು ಕಂಡು ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿತ್ತು.

ಇತ್ತೀಚಿಗೆ ಟೆರರ್‌’ ಎಂಬ ಸಿನಿಮಾವನ್ನ 8 ಕೋಟಿ ಖರ್ಚು ಮಾಡಿ, ನಿರ್ಮಾಣ ಮಾಡಿದ್ದರು. ಇದರಲ್ಲಿ 2 ರಿಂದ 3 ಕೋಟಿ ರೂಪಾಯಿ ಸಾಲ ಮಾಡಿದ್ದರಂತೆ. ಆದರೆ, ಸಿನಿಮಾದ ಬಿಡುಗಡೆಯಿಂದ ಒಂದು ರೂಪಾಯಿ ಹಣ ಕೂಡ ಅವರ ಕೈಗೆ ದಕ್ಕಲಿಲ್ಲ, ಸಿನಿಮಾ ಫ್ಲಾಪ್ ಆಯ್ತು. ಈ ವಿಚಾರವನ್ನ ಬಹಳ ಮನಸ್ಸಿಗೆ ಹಚ್ಚಿಕೊಂಡಿದ್ದರು. ಅವರ ಆರೋಗ್ಯ ಕ್ಷೀಣಿಸಲು ಇದೇ ಮುಖ್ಯ ಕಾರಣ ಎಂದು ಅವರ ಕುಟುಂಬಸ್ಥರು ಹೇಳಿದ್ದಾರೆ.

ಸಿಲ್ಕ್‌ ಮಂಜು ನಿರ್ಮಾಣದ ಸಿನಿಮಾಗಳು

‘ಎʼ, ‘ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ’, ‘ಪ್ರತ್ಯರ್ಥ’, ‘ಸೂರ್ಯಕಾಂತಿ’, ‘ಹಗಲು ವೇಷ’, ‘ಸೈಕಿಕ್‌’, ‘ಟೆರರ್‌’ಸಿನಿಮಾಗಳನ್ನ ಸಿಲ್ಕ್‌ ಮಂಜು ಅವರು ನಿರ್ಮಾಣ ಮಾಡಿದ್ದರು.

ಸಿಲ್ಕ್ ಮಂಜುನಾಥ್ ಅವರ ನಿಧನಕ್ಕೆ ಚಿತ್ರರಂಗದ ಗಣ್ಯರು, ನಿರ್ಮಾಪಕರು ಹಾಗೂ ಆಪ್ತರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತರು ಪತ್ನಿ, ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನ ಅಗಲಿದ್ದಾರೆ.ಮಂಗಳವಾರ ದಿನಾಂಕ ಅಕ್ಟೋಬರ್‌ 27ರಂದು ಅಂತ್ಯಸಂಸ್ಕಾರ ನಡೆಯಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಬ್ಬು ಬೆಳೆಗಾರರ ಪ್ರತಿಭಟನೆ: 'ಸೌಹಾರ್ದಯುತ ಪರಿಹಾರ ಕಂಡುಕೊಳ್ಳೋಣ, ಶಾಂತಿ ಕಾಪಾಡುವುದು ನಮ್ಮ ಕರ್ತವ್ಯ': CM DK ಶಿವಕುಮಾರ್

ಸಿಎಂ ಜತೆಗಿನ ಸಭೆ ವಿಫಲ, ಕಬ್ಬು ಬೆಳೆಗಾರರ ಹೋರಾಟ ಮುಂದುವರಿಕೆ; ಗಲಾಟೆ ಏಕೆ ಮಾಡ್ಕೊಂಡ್ರಿ: ಡಿಕೆಶಿ ಗರಂ

ಕಬ್ಬು ತೂಕದಲ್ಲೂ ಅಕ್ರಮ, ಸಕ್ಕರೆ MSP ಹೆಚ್ಚಳಕ್ಕೆ ಆಗ್ರಹ; ಸಕ್ಕರೆ ಕಾರ್ಖಾನೆ ಮಾಲೀಕರ ಸಭೆಯಲ್ಲಿ ಚರ್ಚೆ

20 ವರ್ಷ ಬಿಟ್ಟು ನಾನು ಅಧಿಕಾರಕ್ಕೆ ಬರ್ತೀನಿ: SC,ST OBC ಎಲ್ಲರಿಗೂ 2BHK ಮನೆ ಗ್ಯಾರಂಟಿ: ಪ್ರದೀಪ್ ಈಶ್ವರ್ ಶಪಥ

CM ಸಭೆಗೂ ಮುನ್ನ ಬೆಳಗಾವಿಯ ಸುವರ್ಣ ಸೌಧದಲ್ಲಿ ಪರಸ್ಪರ ಹೊಡೆದಾಡಿಕೊಂಡ ರೈತ ಮುಖಂಡರು; ಇಬ್ಬರಿಗೆ ಗಾಯ: Video