ನೀತೂಚಂದ್ರ (ಕೃಪೆ : ಟ್ವಿಟ್ಟರ್) 
ಬಾಲಿವುಡ್

ನೀತೂಚಂದ್ರ ಈಗ ಬಾಲ್‌ಚಂದ್ರ

ಬಾಲಿವುಡ್‌ನ ಗರಮ್ ಮಸಾಲೆ ನೀತೂಚಂದ್ರ ಈ ಕೊರೆಯುವ ಚಳಿಯಲ್ಲೂ ಗರಮ್ಮಾಗಿದ್ದಾಳೆ...

ಬಾಲಿವುಡ್‌ನ ಗರಮ್ ಮಸಾಲೆ ನೀತೂಚಂದ್ರ ಈ ಕೊರೆಯುವ ಚಳಿಯಲ್ಲೂ ಗರಮ್ಮಾಗಿದ್ದಾಳೆ. ಆಕೆ ಮೊದಲಿಂದಲೂ ಹಾಟ್ ಅಲ್ವೇ ಅಂತ ಕೇಳಬೇಡಿ. ಆಕೆಗೆ ಬರೀ ಮಸಾಲೆ ಸಿನಿಮಾ ಮಾಡಿ ಬೇಸರ ಬಂದಿದೆಯಂತೆ. ನಡುನಡುವೆ ಅಲ್ಲೊಂದು ಇಲ್ಲೊಂದು ಒಳ್ಳೆ ಸಿನಿಮಾ ಸಿಕ್ಕಿದ್ದರೂ ಈ ನಡುವೆ ಸವಾಲಿನ ಪಾತ್ರವೇ ಸಿಗುತ್ತಿಲ್ಲವೆಂಬ ಕೊರಗು ಆಕೆಗೆ, ಮಧುರ್ ಭಂಡಾರ್ ಕರ್, ವರ್ಮಾರಂಥ ನಿರ್ದೇಶಕರ ಕೈಲಿ ನಟಿಸಿಯೂ ಈಗ ಪರಭಾಷಾ ಸಿನಿಮಾಗಳಲ್ಲಿ ಐಟಂ ನಂಬರ್ ಮಾಡೋ ಹಾಗಿದೆ ಎಂಬುದು ಆಕೆಯ ಕೋಪಕ್ಕೆ ಕಾರಣ. ಪುನೀತ್‌ರ ಪವರ್ ಚಿತ್ರದಲ್ಲೂ ವಿಶೇಷ ಪಾತ್ರ ಎಂಬ ಹೆಸರಿನಲ್ಲಿ ಆಕೆ ಮಾಡಿದ್ದು ಐಟಂ ಸಾಂಗೇ!. ಟೇಕ್ವಾಂಡೋ ಕಲೆಯನ್ನು ಕರಗತ ಮಾಡಿಕೊಂಡು ರಾಷ್ಟ್ರೀಯ ತಂಡವನ್ನೂ ಪ್ರತಿನಿಧಿಸಿದ್ದ ನೀತೂಗೆ ಮೊದಲಿಂದಲೂ ಕ್ರೀಡಾಸಕ್ತಿ ಜಾಸ್ತಿ. ಆದರೆ ಆಕೆಗೆ ಬಾಲಿವುಡ್ಡಲ್ಲಿ ಬೇರೆ ಕ್ರೀಡೆಯ ಪಾತ್ರಗಳನ್ನು ನೀಡುವ ಕೀಡೇಗಳೇ ತುಂಬಿದೆಯಂತೆ. ಅಂಥವರನ್ನು ಛೀ ಥೂ ಎಂಜು ದೂರ ಇಟ್ಟಿರುವ ನೀತೂ ಇದೀಗ ಬಾಸ್ಕೆಟ್ ಬಾಲ್‌ಗೆ ಸಂಬಂಧಿಸಿದ ಚಿತ್ರವೊಂದನ್ನು ಮಾಡುವ ಆಸಕ್ತಿ ತೋರಿದ್ದಾಳೆ. ಸ್ವತಃ ಬಾಸ್ಕೆಟ್ ಬಾಲ್ ಸ್ಟೇಟ್‌ಲೆವೆಲ್ ಆಟಗಾರ್ತಿಯಾಗಿದ್ದ ನೀತೂಗೆ ಈ ಮೂಲಕ ಭಾರತದಲ್ಲಿ ಬಾಸ್ಕೆಟ್ ಬಾಲನ್ನು ಜನಪ್ರಿಯಗೊಳಿಸುವ ಇರಾದೆಯಂತೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: MI vs RCB; ಫಿಲ್ ಸಾಲ್ಟ್, ಕೊಹ್ಲಿ, ಪಾಟಿದಾರ್ ಭರ್ಜರಿ ಬ್ಯಾಟಿಂಗ್, ಮುಂಬೈಗೆ ಗೆಲ್ಲಲು 241 ರನ್ ಬೃಹತ್ ಗುರಿ!

ಅತ್ಯಂತ ಸುಂದರ 'ಮದುವೆ ಹೆಣ್ಣು', 1 ಬಿಲಿಯನ್ ಡಾಲರ್ ಹಣ ಕೊಡಿ: Uganda ಸೇನಾ ಮುಖ್ಯಸ್ಥನ ವಿಚಿತ್ರ ಬೇಡಿಕೆ; Turkey ಬೇಸ್ತು!

ನೀವೇನ್ ಮುಚ್ಚೋದು.. ನಾವೇ ಬಂದ್ ಮಾಡ್ತೀವಿ: Hormuz ಜಲಸಂಧಿ ದಾಟುವ ಹಡಗುಗಳಿಗೆ US ನೌಕಾಪಡೆ ತಡೆ; ಇರಾನ್ ಗೆ ಟ್ರಂಪ್ ಶಾಕ್!

ಪಕ್ಷ ವಿರೋಧಿ ಚಟುವಟಿಕೆ: ಜಬ್ಬಾರ್ ರಾಜೀನಾಮೆ ಬೆನ್ನಲ್ಲೇ ಮತ್ತೊಂದು ಶಾಕ್; KPCC ಅಲ್ಪಸಂಖ್ಯಾತ ಘಟಕವನ್ನೇ ವಿಸರ್ಜಿಸಿದ DK Shivakumar

SCROLL FOR NEXT