ಪೂಜಾ ಭಟ್ &ಮನೀಶ್ ಮಖೀಜಾ 
ಬಾಲಿವುಡ್

ಮನೀಶ್ ಜತೆಗಿನ ದಾಂಪತ್ಯಕ್ಕೆ ಪೂಜಾ ಭಟ್ ಗುಡ್ ಬೈ

ನಟಿ, ನಿರ್ದೇಶಕಿ ಪೂಜಾ ಭಟ್ ಮತ್ತು ಮನೀಶ್ ಮಖೀಜಾ ಇದೀಗ ದೂರವಾಗಲು ತೀರ್ಮಾನಿಸಿದ್ದಾರೆ...

ಮುಂಬೈ: ಬಾಲಿವುಡ್‌ ನಟಿ, ನಿರ್ದೇಶಕಿ ಪೂಜಾ ಭಟ್ ಮತ್ತು ಮನೀಶ್ ಮಖೀಜಾ ಇದೀಗ ದೂರವಾಗಲು ತೀರ್ಮಾನಿಸಿದ್ದಾರೆ. 11 ವರ್ಷಗಳ ದಾಂಪತ್ಯಕ್ಕೆ ಗುಡ್ ಬೈ ಹೇಳಿರುವ ಪೂಜಾ ತಮ್ಮ ವಿವಾಹ ವಿಚ್ಛೇದನದ ಬಗ್ಗೆ ಟ್ವೀಟರ್‌ನಲ್ಲಿ ವಿಷಯ ಬಹಿರಂಗ ಪಡಿಸಿದ್ದಾರೆ.

ಇತ್ತೀಚೆಗೆ ಬಾಲಿವುಡ್‌ನಲ್ಲಿ ಹೃತಿಕ್ ರೋಷನ್-ಸುಸೇನ್ ಖಾನ್ ಮತ್ತು ನಿರ್ದೇಶಕ ಅನುರಾಗ್ ಕಶ್ಯಪ್- ಕಲ್ಕಿ ಕೊಚೆಲಿನ್ ತಮ್ಮ ವಿಚ್ಛೇದನದ ವಿಷಯವನ್ನು ಪತ್ರಿಕಾ ಹೇಳಿಕೆ ನೀಡುವ ಮೂಲಕ ಬಹಿರಂಗ ಪಡಿಸಿದ್ದರು.

ಆದರೆ ಬಾಲಿವುಡ್‌ನ ಖ್ಯಾತ ನಿರ್ದೇಶಕರ ಮಹೇಶ್ ಭಟ್ ಪುತ್ರಿ  ಪೂಜಾ ಭಟ್ ತಮ್ಮ ದಾಂಪತ್ಯ ಜೀವನಕ್ಕೆ ತೆರೆ ಎಳೆದಿರುವ ವಿಷಯವನ್ನು ಟ್ವೀಟರ್‌ನಲ್ಲಿ ಹೇಳಿಕೊಳ್ಳುವ ಮೂಲಕ ಸುದ್ದಿಯಾಗಿದ್ದಾರೆ.

ಆದಾಗ್ಯೂ, ಮನೀಶ್‌ನಿಂದ ದೂರವಾಗುವ ಬಗ್ಗೆ ಟ್ವೀಟರ್‌ನಲ್ಲೇ ಹೇಳಿಕೊಂಡಿದ್ದು ಯಾಕೆ? ಎಂಬ ಪ್ರಶ್ನೆಗೂ ಪೂಜಾ ಉತ್ತರ ನೀಡಿದ್ದಾಳೆ.

ನಾವಿಬ್ಬರೂ ಸಾರ್ವಜನಿಕವಾಗಿ ಗೊತ್ತಿರುವವರು. ಆದ್ದರಿಂದ ನಮ್ಮ ಗೆಳೆಯರಿಗೆ, ಪ್ರೀತಿ ಪಾತ್ರರಿಗೆ ಈ ವಿಷಯ ಗೊತ್ತಿರಲಿ ಎಂಬ ಕಾರಣಕ್ಕೆ ನಾನು ಟ್ವೀಟರ್‌ನಲ್ಲಿ ಈ ವಿಷಯವನ್ನು ಬಹಿರಂಗಪಡಿಸಿದೆ ಎಂದಿದ್ದಾರೆ ಪೂಜಾ.

ನನ್ನ ಬಗ್ಗೆ ಕಾಳಜಿ ವಹಿಸುವವರು ಮತ್ತು ನನ್ನ ಪತಿ ಮುನ್ನಾ ಅವರನ್ನು ಗೊತ್ತಿಲ್ಲದೇ ಇರುವವರಿಗೆ ತಿಳಿಸುವ ಸಲುವಾಗಿಯೇ ನಾನು ಈ ಮಾಧ್ಯಮವನ್ನು ಆಯ್ಕೆ ಮಾಡಿಕೊಂಡೆ. ನಮ್ಮ 11 ವರ್ಷದ ದಾಂಪತ್ಯಕ್ಕೆ ಇಲ್ಲಿ  ತೆರೆಯೆಳೆಯುತ್ತಿದ್ದೇನೆ. ನಮ್ಮಿಬ್ಬರ ಬ್ರೇಕ್ ಅಪ್ ಕೂಡಾ ಸೌಹಾರ್ದಯುತವಾಗಿತ್ತು, ಮುಂದೆಯೂ ನಾವು ಪರಸ್ಪರ ಗೌರವಿಸುತ್ತೇವೆ ಎಂದು ಪೂಜಾ ಟ್ವೀಟಿಸಿದ್ದಾಳೆ.

ಮಹೇಶ್ ಭಟ್ ಚಿತ್ರ 'ಪಾಪ್‌' ನಲ್ಲಿ ಪೂಜಾ ಮತ್ತು ಮಖೀಜಾ ಭೇಟಿಯಾಗಿದ್ದರು.  ನಿರೂಪಕ, ನಟ, ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದ ಮಖೀಜಾ, ತೆಹೆಲ್ಕಾ ಡಾಟ್ ಕಾಂನಲ್ಲೂ ಕಾರ್ಯ ನಿರ್ವಹಿಸಿದ್ದರು.



Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Delhi excise policy case: ಅರವಿಂದ್ ಕೇಜ್ರಿವಾಲ್-ಮನೀಶ್ ಸಿಸೋಡಿಯಾ ವಿರುದ್ಧ ಕೇಸು ಖುಲಾಸೆ

ಕಾಂಗ್ರೆಸ್ ನಲ್ಲಿ ಕುರ್ಚಿ ಕದನ: ಹುಟ್ಟುಹಬ್ಬ ನೆಪದಲ್ಲಿ ಡಿಕೆಶಿ ಬೆಂಬಲಿಗ 40ಕ್ಕೂ ಹೆಚ್ಚು ಶಾಸಕರ ಸಭೆ

ತಮಿಳನಾಡು ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ: ಜಯಲಲಿತಾ ನೆಚ್ಚಿನ ಶಿಷ್ಯ- ಮಾಜಿ ಸಿಎಂ ಪನ್ನೀರ್‌ಸೆಲ್ವಂ DMK ಸೇರ್ಪಡೆ

T20 World Cup 2026: ಜಿಂಬಾಬ್ವೆ ವಿರುದ್ಧ ಗೆದ್ದ ಖುಷಿಯಲ್ಲಿದ್ದ ರಿಂಕು ಸಿಂಗ್‌ಗೆ ಆಘಾತ; ತಂದೆ ಖಾನ್ ಚಂದ್ ನಿಧನ!

NCERT Row: 'ತಪ್ಪು ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಿ': ಕೇಂದ್ರ ಶಿಕ್ಷಣ ಸಚಿವರಿಗೆ ಪ್ರಧಾನಿ ಮೋದಿ ಸೂಚನೆ

SCROLL FOR NEXT