ಸೋನಾಕ್ಷಿ ಸಿನ್ಹಾ,ರಾಮ್ ಚರಣ್ 
ಬಾಲಿವುಡ್

ಸೋನಾಕ್ಷಿಗೆ ರಾಮ್‌ಚರಣ್ ಬೌಲ್ಡ್!

ಬಾಲಿವುಡ್‌ಗೆ ಕಾಲಿಟ್ಟ ಸೋನಾಕ್ಷಿ ಸಿನ್ಹಾಗೆ ಅವಕಾಶಗಳ ಮಹಾಪೂರವೇ ಹರಿದು...

ಬಾಲಿವುಡ್‌ಗೆ ಕಾಲಿಟ್ಟ ಸೋನಾಕ್ಷಿ ಸಿನ್ಹಾಗೆ ಅವಕಾಶಗಳ ಮಹಾಪೂರವೇ ಹರಿದು ಬರುತ್ತಿದೆ. ಈಗ ರಜನಿಕಾಂತ್‌ನ 'ಲಿಂಗಾ' ಚಿತ್ರದ ಮೂಲಕ ಟಾಲಿವುಡ್ ಅಂಗಳಕ್ಕೂ ಪಾದರ್ಪಣೆ ಮಾಡಿದ ಸೋನಾಕ್ಷಿಗೆ ತಮಿಳಿನಲ್ಲಿ ಬರುತ್ತಿರುವ ಆಫರ್‌ಗಳು ಒಂದೆರಡಲ್ಲ.

ಸ್ಲಿಮ್ ಆಗಿರುವ ಸೋನಾಕ್ಷಿಯ ವನುಪು ವೈಯ್ಯಾರ ನೋಡಿ ಟಾಲಿವುಡ್‌ನ ನಿರ್ದೇಶಕರು ಕ್ಲೀನ್ ಬೌಲ್ಡ್ ಆಗಿದ್ದಷ್ಟೇ ಅಲ್ಲ ಚಿರಂಜೀವಿ ಪುತ್ರ ರಾಮ್ ಚರಣ್ ಕೂಡ ಕ್ಲೀನ್ ಬೌಲ್ಡ್ ಆಗಿದ್ದಾರಂತೆ. ಭಾಷೆ ಬಾರದಿದ್ದರೂ ಸೋನಾಕ್ಷಿಯೂ ಹಾವ ಭಾವ ನೋಡಿ ಮೆಚ್ಚಿಕೊಂಡಿರುವ ನಿರ್ದೇಶಕರೊಬ್ಬರು ರಾಮ್‌ಚರಣ್ ತೇಜಾ ಅಭಿನಯದ ಚಿತ್ರಕ್ಕೆ ಸೋನಾಕ್ಷಿಯನ್ನೇ ನಾಯಕಿಯನ್ನಾಗಿ ಮಾಡುವ ಮನಸ್ಸು ಮಾಡಿದ್ದಾರಂತೆ.

ಈ ಬಗ್ಗೆ ಆಗಲೇ ಚೆರ್ರಿ ಜತೆ ಮಾತುಕತೆ ಕೂಡ ನಡೆದಿದೆಯಂತೆ. ಸೋನಾಕ್ಷಿಯ ಎಲ್ಲಾ ಸಿನಿಮಾಗಳನ್ನೂ ಬಿಡದೆ ನೋಡಿರುವ ರಾಮ್ ಚರಣ್, ಆಕೆಯೊಂದಿಗೆ ರೋಮ್ಯಾನ್ಸ್ ಮಾಡುವುದಕ್ಕೆ ಒಪ್ಪಿಕೊಂಡಿದ್ದಾರಂತೆ. ಬಾಲಿವುಡ್ ಮೂಲಗಳ ಪ್ರಕಾರ ಸೋನಾಕ್ಷಿಗೆ ಅಧಿಕೃತವಾಗಿ ಆಫರ್ ಕೂಡ ಕೊಟ್ಟಾಗಿದೆ. ಆದರೆ ಸೋನಾಕ್ಷಿ ಕಡೆಯಿಂದ ಇನ್ನೂ ಒಪ್ಪಿಗೆ ಸಿಕ್ಕಿಲ್ಲವಂತೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಜ್ಞಾನೇಶ್ ಕುಮಾರ್ ನೆರವಿನಿಂದ ದೇಶವನ್ನು 'ಹೈಜಾಕ್' ಮಾಡಿದ ಮೋದಿ, ಶಾ, ಭಾಗವತ್‌ರನ್ನು ಸುಮ್ಮನೆ ಬಿಡಲ್ಲ; ರಾಹುಲ್ ಗಾಂಧಿ ಗುಡುಗು!

'ನಾವು ಒಂದೂವರೆ ವರ್ಷ ಪ್ರೀತಿಸುತ್ತಿದ್ದೆವು': ಲಂಡನ್ ಲವ್​ ಕಹಾನಿ ನೆನೆದು ಭಾವುಕರಾದ CM ವಿಜಯ್​ ಪುತ್ರ ಜೇಸನ್!

SIR ವಿವಾದ: 'ಶಾಸಕ ಯತ್ನಾಳ್ ಬಣ್ಣ ಬಯಲು'; ವಿಜಯಪುರದಲ್ಲಿ ಬದುಕಿರುವ 8 ಮುಸ್ಲಿಂ ಮತದಾರರು 'ಸತ್ತಿದ್ದಾರೆ' ಎಂದು ಅರ್ಜಿ!

ಹೆದ್ದಾರಿಗಳಲ್ಲಿ ನಿಲ್ಲಿಸಿರುವ ವಾಹನಗಳ ಎಲೆಕ್ಟ್ರಾನಿಕ್ ಟ್ರ್ಯಾಕಿಂಗ್ ಸಾಧ್ಯವಾಗುತ್ತಿಲ್ಲವೇಕೆ- NHAI ಗೆ ಸುಪ್ರೀಂ ಕೋರ್ಟ್

ಗಣೇಶ ವಿಸರ್ಜನೆ ವಿಚಾರವಾಗಿ ಜಿಲ್ಲಾಧಿಕಾರಿ - SP ನಡುವೆ ಜಟಾಪಟಿ; 'ಹೇಗೆ ರಿಪೇರಿ ಮಾಡಬೇಕೆಂದು ಗೊತ್ತಿದೆ' ಎಂದ ಎಚ್‌ಡಿ ರೇವಣ್ಣ