ಎ ಆರ್ ರಹಮಾನ್ 
ಬಾಲಿವುಡ್

ಸಿನೆಮಾಗೆ ಸ್ಕ್ರಿಪ್ಟ್ ಮಾಡುತ್ತಿದ್ದೇನೆ: ಎ ಆರ್ ರಹಮಾನ್

ಆಸ್ಕರ್ ವಿಜೇತ ಸಂಗೀತ ನಿರ್ದೇಶಕ...

ಮುಂಬೈ: ಆಸ್ಕರ್ ವಿಜೇತ ಸಂಗೀತ ನಿರ್ದೇಶಕ ಎ ಆರ್ ರಹಮಾನ್ ಸಹ ನಿರ್ಮಾಣ ಮಾಡಲಿರುವ ಒಂದು ನಿನೆಮಾಗೆ ಸ್ಕ್ರಿಪ್ಟ್ ಬರೆಯುವುದರಲ್ಲಿ ಕಾರ್ಯನಿರತರಾಗಿದ್ದಾರೆ. ಬಿಡುಗಡೆಗೆ ಸಿದ್ಧವಾಗಿರುವ ಶಂಕರ್ ನಿರ್ದೇಶನದ "ಐ" ಚಲನಚಿತ್ರಕ್ಕೂ ಎ ಆರ್ ರಹಮಾನ್ ಅವರ ಸಂಗೀತವಿದೆ.

ಭಾರತದ ಬಹು ಬೇಡಿಕೆಯುಳ್ಳ ಈ ಸಂಗೀತ ನಿರ್ದೇಶಕ ಸಿನೆಮಾವೊಂದನ್ನು ನಿರ್ದೇಶಿಸುತ್ತಿದ್ದಾರೆ ಎಂಬ ಸುದ್ದಿ ಇತ್ತು, ಆದರೆ ರಹಮಾನ್ ಹೇಳುವ ಕಥೆಯೇ ಬೇರೆ!

"ನಾನು ಸಿನೆಮಾವನ್ನು ನಿರ್ದೇಶಿಸುತ್ತಿಲ್ಲ. ಸ್ಕ್ರಿಪ್ಟ್ ಮಾಡುತ್ತಿದ್ದೇನೆ ಹಾಗು ಅದನ್ನು ಸಹ ನಿರ್ಮಾಣ ಮಾಡಲಿದ್ದೇನೆ. ಇದು ಪ್ರಗತಿಯಲ್ಲಿದೆ" ಎಂದಿದ್ದಾರೆ.

ಶಂಕರ್ ನಿರ್ದೇಶನದ "ಐ" ಮುಖ್ಯಭೂಮಿಕೆಯಲ್ಲಿ ತಮಿಳು ನಟ ವಿಕ್ರಮ್ ನಟಿಸಿದ್ದು ಜನವರಿ ೯ ಕ್ಕೆ ಬಿಡುಗಡೆಗೆ ಸಿದ್ಧವಾಗಿದೆ. ಅಮಿ ಜಾಕ್ಸನ್ ಮತ್ತು ಉಪೇನ್ ಪಟೇಲ್ ಕೂಡ ಮುಖ್ಯ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ.

ಈ ಚಲನಚಿತ್ರದ ಬಗ್ಗೆ ಮಾತಿಗಿಳಿದ ರಹಮಾನ್, "ಶಂಕರ್ ೧೫ ವರ್ಷಗಳ ಹಿಂದೆ ಈ ಕಥೆ ಹೇಳಿದ್ದರು, ಅವಾಗಿನಿಂದಲೋ ಕಥೆಯ ಮೇಲೆ ಅವರು ಕೆಲಸ ಮಾಡಿದ್ದಾರೆ. ಈ ಸಿನೆಮಾ ಬಗ್ಗೆ ಗೊತ್ತಿತ್ತು ಅದಕ್ಕೆ ಇದರಲ್ಲಿ ಕೆಲಸ ಮಾಡಿದೆ" ಎಂದಿದ್ದಾರೆ.

ಈ ವರ್ಷ ಮತ್ತೆ ಆಸ್ಕರ್ ರೇಸ್ ನಲ್ಲಿರುವ ಎ ಆರ್ ರಹಮಾನ್ ಆವರ ಸಂಗೀತ ನಿರ್ದೇಶನದ ಮೂರು ಟ್ರ್ಯಾಕ್ ಗಳು ಸ್ಪರ್ಧೆಯಲ್ಲಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?