ಹಾಲಿವುಡ್ಗೆ ನರ್ಗಿಸ್
ಪಾಕಿಸ್ತಾನಿ ಸುಂದರಿ ನರ್ಗಿಸ್ ಫಖ್ರಿ, ಹಾಲಿವುಡ್ ಶೋಕಿಗಾಗಿ ಬಾಲಿವುಡ್ನ ಶೌಕಿನ್ ಚಿತ್ರದಿಂದ ಹೊರಬಂದು ಶಾಕಿಂಗ್ ನ್ಯೂಸ್ ಕೊಟ್ಟಿದ್ದಾಳೆ....
ಪಾಕಿಸ್ತಾನಿ ಸುಂದರಿ ನರ್ಗಿಸ್ ಫಖ್ರಿ, ಹಾಲಿವುಡ್ ಶೋಕಿಗಾಗಿ ಬಾಲಿವುಡ್ನ ಶೌಕಿನ್ ಚಿತ್ರದಿಂದ ಹೊರಬಂದು ಶಾಕಿಂಗ್ ನ್ಯೂಸ್ ಕೊಟ್ಟಿದ್ದಾಳೆ. ಆದರೆ, ಶೌಕಿನ್ ಚಿತ್ರತಂಡ, ತಮಗಿದು ನಿರೀಕ್ಷಿತವಾಗಿದ್ದು ಶಾಕೇನಾಗಿಲ್ಲ ಅನ್ನುತ್ತಿದ್ದಾರೆ. ಏಪ್ರಿಲ್ ಇಪ್ಪತ್ತರಿಂದ ಶೂಟ್ ಪ್ಲಾನ್ ಮಾಡಿರುವ ಶೌಕಿನ್ ತಂಡ, ಅಕ್ಷಯ್ಕುಮಾರ್ ಸೇರಿದಂತೆ ಎಲ್ಲ ನಟರ ಡೇಟ್ ಹೊಂದಿಸಿಕೊಂಡು ಮಾರಿಷಸ್ಗೆ ಹಾರಲು ರೆಡಿಯಾಗಿ ನರ್ಗಿಸ್ಗೆ ಕಾಯ್ತಿದ್ದರೆ, ಆಕೆ ಮಾತ್ರ ಆಗ ಈಗ ಅಂತ ಮೂರು ತಿಂಗಳು ಕಾಯಿಸಿದಳಂತೆ. ಬೇಸತ್ತ ತಂಡ ಹೊಸ ನಾಯಕಿಯನ್ನು ಹುಡುಕಿ ನರ್ಗಿಸ್ಗೆ ಕೊಕ್ ಕೊಟ್ಟಿದ್ದಾರೆ. ಈಗ ನರ್ಗಿಸ್, 'ಹಾಲಿವುಡ್ಡೇ ನನ್ನ ಪ್ರಥಮ ಆದ್ಯತೆ' ಎಂದು ಇಲ್ಲದ ಮೀಸೆಯ ಮೇಲಿನ ಮಣ್ಣು ಒರೆಸಿಕೊಳ್ತಿದ್ದಾಳೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.