ದೀಪಿಕಾ ಪಡುಕೋಣೆ 
ಬಾಲಿವುಡ್

ದೀಪಿಕಾ ಪಡುಕೋಣೆ ಹೆಸರು ಚೇಂಜ್!

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಹೆಸರು ಬದಲಾಯಿಸಿದ್ದಾಳೆ! ಒಳ್ಳೆಯ ಹೆಸರು...

ನವದೆಹಲಿ: ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಹೆಸರು ಬದಲಾಯಿಸಿದ್ದಾಳೆ! ಒಳ್ಳೆಯ ಹೆಸರು ಗಳಿಸಿ ಸಿನಿಮಾರಂಗದಲ್ಲಿ ಮಿಂಚುತ್ತಿರುವ ದೀಪಿಕಾಳಿಗೆ ಇದೇನಾಯ್ತು? ಎಂದು ಹುಬ್ಬೇರಿಸಬೇಡಿ. ಈಕೆ ತನ್ನ ಹೆಸರು ಬದಲಾಯಿಸಿಕೊಂಡಿದ್ದು ಟ್ವೀಟರ್‌ನಲ್ಲಿ!

28ರ ಹರೆಯದ ದೀಪಿಕಾ ಪಡುಕೋಣೆ ಬಾಲಿವುಡ್‌ನಲ್ಲಿ ಹಿಟ್‌ಗಳ ಮೇಲೆ ಹಿಟ್‌ಗಳನ್ನು ನೀಡಿದ ನಟಿ. ಇತ್ತೀಚೆಗೆ ಬಿಡುಗಡೆಯಾದ 'ಹ್ಯಾಪಿ ನ್ಯೂ ಇಯರ್‌' ಸಿನಿಮಾದ ಯಶಸ್ಸಿನ ನಂತರ ಟ್ವೀಟರ್‌ನಲ್ಲಿ ತನ್ನ ಹೆಸರನ್ನು 'ಲೀಲಾ' ಎಂದು ಬದಲಿಸಿಕೊಂಡಿರುವುದಕ್ಕೆ 'ರಾಮ್‌ಲೀಲಾ' ಸಿನಿಮಾದ ಪ್ರಭಾವವೇ ಕಾರಣವಿರಬೇಕು ಎಂದು ಆಕೆಯ ಪ್ರೊಫೈಲ್ ಫೋಟೋ ನೋಡಿದರೆ ಗೊತ್ತಾಗುತ್ತದೆ.

ಸದ್ಯ, ಪೀಕೂ ಚಿತ್ರದಲ್ಲಿ ಬ್ಯುಸಿಯಾಗಿರುವ ದೀಪಿಕಾಳ ಕೈಯಲ್ಲಿ ಸಂಜಯ್ ಲೀಲಾ ಬನ್ಸಾಲಿಯವರ 'ಬಾಜಿರಾವ್ ಮಸ್ತಾನಿ' ಚಿತ್ರವೂ ಇದೆ.

ಇದೀಗ ಟ್ವೀಟರ್‌ನಲ್ಲಿ ಹೆಸರು ಬದಲಿಸುವ ಮೂಲಕ ದೀಪಿಕಾ ಸುದ್ದಿಗೆ ಗ್ರಾಸವಾಗಿದ್ದು, 'ಲೀಲಾ' ಹೆಸರನ್ನು ಆಕೆಯ ಅಭಿಮಾನಿಗಳು ಮತ್ತು ಫಾಲೋವರ್‌ಗಳು ಯಾವ ರೀತಿ ಸ್ವೀಕರಿಸುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.

ಟ್ವೀಟರ್‌ನಲ್ಲಿ ದೀಪಿಕಾ : https://twitter.com/deepikapadukone

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

17 ಭಾಷೆಗಳಲ್ಲಿ ಹಾಡಿದರೂ ಕನ್ನಡದ ನೆಲದಲ್ಲೇ ಮಣ್ಣಾದ ಗಾನಕೋಗಿಲೆ: ತೆಲುಗು ಬ್ರಾಹ್ಮಣ ಸಂಪ್ರದಾಯದಂತೆ ಎಸ್.ಜಾನಕಿ ಅಂತ್ಯಕ್ರಿಯೆ!

ನಿಮ್ಮ ತಲೆ ತೆಗಿತೀವಿ: ಟ್ರಂಪ್, ನೆತನ್ಯಾಹು, ಮೆಲೋನಿ ಹಾಗೂ ಯುರೋಪಿಯನ್ ನಾಯಕರು ನಮ್ಮ ಟಾರ್ಗೆಟ್; ಇರಾನ್ ಪತ್ರಿಕೆ

'96 ' ಚಿತ್ರದಲ್ಲಿ ಜಾನಕಿ ಹೆಸರಿನ ಪಾತ್ರ: ನೆನಪಿಸಿಕೊಂಡ ನಟಿ ತ್ರಿಶಾ ಕೃಷ್ಣನ್, Deleted scene ಹಂಚಿಕೊಂಡ ಅಭಿಮಾನಿಗಳು! ಅದ್ರಲ್ಲಿ ಏನಿದೆ..? Video..

ಮಾರುವೇಷ ಯಾಕೆ ಸ್ವಾಮಿ... ಇದು ಚಿಲ್ಲರೆ ಕಾಲವಲ್ಲ, ಕ್ಯೂಆರ್ ಕೋಡ್ ಕಾಲ: ಸಚಿವ ಸುರೇಶ್‌ಗೆ ಶಾಸಕ ಸುರೇಶ್ ಕುಮಾರ್ ಪಾಠ

'Health camp' ಚಿಕಿತ್ಸೆಯಿಂದ ಕಾಲು ಕಳೆದುಕೊಂಡ ಮಹಿಳೆ! ಪೊಲೀಸರಿಗೆ ದೂರು, ಅಭಿಷೇಕ್ ಬ್ಯಾನರ್ಜಿ ವಿರುದ್ಧ ಕೇಸ್ ದಾಖಲು