ಅಮೀರ್ ಖಾನ್ ಸಾಮಾನ್ಯವಾಗಿ ಟಾಕೀಸಿಗೆ ಹೋಗಿ ಸಿನಿಮಾ ನೋಡುವುದೇ ಅಪರೂಪವಂತೆ. ಆದರೆ ಅಂದು ಟಾಕೀಸಿಗೆ ಬಂದು ಚಿತ್ರವನ್ನು ನೋಡಿದವರೇ ಅವರು ಭಾವೋದ್ವೇಗಕ್ಕೆ ಒಳಗಾದರು.
ಅಮೀರ್ ಖಾನ್‍ರನ್ನು ಅಳುವಂತೆ ಮಾಡಿದ ಚಿತ್ರ ಕಲ್ಕಿ ಕೊಚ್ಲಿನ್‍ರ `ಮಾರ್ಗರಿಟಾ'. ಮೊದಲು ಈ ಚಿತ್ರವನ್ನು ನೋಡಲು ಅವರಿಗೆ ಅಷ್ಟೇನೂ ಆಸಕ್ತಿ ಇರಲಿಲ್ಲ. ಅದು ಹೇಗೋ ಏನೋ ಅವರ ಪತ್ನಿ ಕಿರಣ್ ರಾವ್‍ರ ಒತ್ತಾಯದ ಮೇರೆಗೆ ಬಂದಿದ್ದರು. ಆದರೆ ಸಿನಿಮಾ ನೋಡಿದ ಮೇಲೆ ಅವರಿಂದ ಕಣ್ಣೀರನ್ನು ತಡೆದುಕೊಳ್ಳಲು ಸಾಧ್ಯ ವಾಗಲೇ ಇಲ್ಲ, ಬಿಕ್ಕಿಬಿಕ್ಕಿ ಅತ್ತುಬಿಟ್ಟರಂತೆ.
ಕಲ್ಕಿ ಕೊಚ್ಲಿನ್ ಅವರ ನಟನೆ ಅಷ್ಟೊಂದು ಅದ್ಭುತವಾಗಿತ್ತು ಎಂದು ಚಿತ್ರ ಪ್ರದರ್ಶನ ಮುಗಿದ ಮೇಲೆ ಅವರನ್ನು ಮುಕ್ತಕಂಠದಿಂದ ಪ್ರಶಂಸಿಸಿದರು. ಹಲವಾರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಎಲ್ಲರ ಮೆಚ್ಚುಗೆ ಪಾತ್ರವಾದ ಈ ಚಿತ್ರ ಭಾರತೀಯ ಚಿತ್ರಪ್ರೇಮಿಗಳ ಮೆಚ್ಚುಗೆಗಳಿಸುವಲ್ಲಿ ಯಶಸ್ವಿಯಾಗುತ್ತೋ? ಕಾದು ನೋಡಬೇಕು.