ರಾಯ್ ಲಕ್ಷ್ಮಿ 
ಬಾಲಿವುಡ್

ಬಾಲಿವುಡ್ ನ ಮೊದಲ ಮೆಟ್ಟಿಲೇರಲಿರುವ ರಾಯ್ ಲಕ್ಷ್ಮಿ

ದಕ್ಷಿಣದಲ್ಲೇ ಸುತ್ತು ಹೊಡೆಯುತ್ತಿದ್ದ ಬೆಳಗಾವಿ ಚೆಲುವೆ ಲಕ್ಷ್ಮಿ ರೈ ಇದೀಗ ಬಾಲಿವುಡ್‍ಗೆ ನೆಗೆದಿದ್ದಾರೆ. ತಮ್ಮ ಹೆಸರನ್ನು ರಾಯ್ ಲಕ್ಷ್ಮಿ ಅಂತ ಹಿಂದುಮುಂದು ಮಾಡಿಕೊಂಡಿದ್ದಾರೆ...

ದಕ್ಷಿಣದಲ್ಲೇ ಸುತ್ತು ಹೊಡೆಯುತ್ತಿದ್ದ ಬೆಳಗಾವಿ ಚೆಲುವೆ ಲಕ್ಷ್ಮಿ ರೈ ಇದೀಗ ಬಾಲಿವುಡ್‍ಗೆ ನೆಗೆದಿದ್ದಾರೆ. ತಮ್ಮ ಹೆಸರನ್ನು ರಾಯ್ ಲಕ್ಷ್ಮಿ ಅಂತ ಹಿಂದುಮುಂದು ಮಾಡಿಕೊಂಡಿದ್ದಾರೆ.

ತಮಿಳಿನ ಎ. ಆರ್. ಮುರುಗದಾಸ್ ಅವರ `ಅಕಿರಾ' ಚಿತ್ರದಲ್ಲಿ ರಾಯ್ ಲಕ್ಷ್ಮಿ ವಿಶೇಷ ಪಾತ್ರದಲ್ಲಿ ಕಾಣಿಸಲಿದ್ದಾರಂತೆ. ಪೂರ್ಣ ಪ್ರಮಾಣದ ನಾಯಕಿಯಾಗಿ ಸೋನಾಕ್ಷಿ ಸಿನ್ಹಾ ಇದ್ದು, ಲಕ್ಷ್ಮೀ ರಾಯ್ ಅತಿಥಿ ಪಾತ್ರಕ್ಕೆ ಸೀಮಿತವಾಗಿದ್ದಾರೆ. ಈ ಬಗ್ಗೆ ಲಕ್ಷ್ಮಿ ರೈ ಅವರಿಗೆ ಬೇಸರವೇನೂ ಇಲ್ಲವಂತೆ. ಈ ಚಿತ್ರದ ಅತಿಥಿ ಪಾತ್ರದ ಮೂಲಕ ತಾನು ಬಾಲಿವುಡ್‍ಗೆ ಅಡಿಯಿಡುತ್ತಿದ್ದೇನೆ. ಇದು ಬಹಳ ಗಮನಾರ್ಹ ಪಾತ್ರ. ಹಾಗಾಗಿಯೇ ಈ ಪಾತ್ರವನ್ನು ಅಂಗೀಕರಿಸಿದೆ ಎಂದಿದ್ದಾರೆ.

ಮುರುಗದಾಸ್ ಅವರ ಚಿತ್ರಗಳಲ್ಲಿ ಅಬಿsನಯಿಸಬೇಕು ಎಂಬುದು ಪ್ರತಿಯೊಬ್ಬರ ಕನಸು. ಪಾತ್ರದ ಬಗ್ಗೆ ಅವರು ಹೇಳಿದಾಗ ನಾನು ನೋ ಹೇಳಲು ಸಾಧ್ಯವಾಗಲೇ ಇಲ್ಲ ಎನ್ನುತ್ತಾರೆ ಲಕ್ಷ್ಮಿ. ರಾಯ್ ಲಕ್ಷ್ಮಿ ಅವರ ಪಾಲಿಗೆ `ಅಕಿರಾ' ಮೊದಲ ಮೆಟ್ಟಿಲು. ಮುಂದೆ ಈ ಚಿತ್ರ ಅವರಿಗೆ ಬಾಲಿವುಡ್‍ನಲ್ಲಿ ಒಳ್ಳೆಯ ಆಫರ್‍ಗಳನ್ನು ತಂದುಕೊಟ್ಟರೂ ಅಚ್ಚರಿಯಿಲ್ಲ. ಮೆಟ್ಟಿಲೇರುತ್ತಾ ಸಾಗಲಿ ಎಂಬುದೇ ನಮ್ಮ ಆಶಯ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel