ನೇಪಾಳದಲ್ಲಿ ಕುನಾಲ್ ಕಪೂರ್ 
ಬಾಲಿವುಡ್

ನೇಪಾಳಕ್ಕೆ ತೆರಳಿದ ಕುನಾಲ್ ಕಪೂರ್ : ಭೂಕಂಪ ಸಂತ್ರಸ್ತರಿಗೆ ನೆರವು

ರಂಗ್ ದೇ ಬಸಂತಿ ಸಿನಿಮಾದಲ್ಲಿ ಸಾಮಾಜಿಕ ಕಳಕಳಿ ಹೊಂದಿದ್ದ ಯುವನಕ ಪಾತ್ರದಲ್ಲಿ ನಟಿಸಿದ್ದ ಬಾಲಿವುಡ್ ನಟ ಕುನಾಲ್ ಕಪೂರ್ ತಮ್ಮ ನಿಜ ಜೀವನದಲ್ಲೂ ಸಂಕಷ್ಟದಲ್ಲಿರುವವರಿಗೆ ಸ್ಪಂದಿಸಿದ್ದಾರೆ.

ಮುಂಬೈ: ರಂಗ್ ದೇ ಬಸಂತಿ ಸಿನಿಮಾದಲ್ಲಿ ಸಾಮಾಜಿಕ ಕಳಕಳಿ ಹೊಂದಿದ್ದ ಯುವನಕ ಪಾತ್ರದಲ್ಲಿ ನಟಿಸಿದ್ದ ಬಾಲಿವುಡ್ ನಟ ಕುನಾಲ್ ಕಪೂರ್ ತಮ್ಮ ನಿಜ ಜೀವನದಲ್ಲೂ ಸಂಕಷ್ಟದಲ್ಲಿರುವವರಿಗೆ ಸ್ಪಂದಿಸಿದ್ದಾರೆ.

ಸಮುದಾಯ ಹೂಡಿಕೆ(ಕ್ರೌಡ್ ಫಂಡಿಂಗ್) ಗೆ ವೇದಿಕೆಯಾಗಿರುವ ಕೆಟ್ಟೋ ಸಂಸ್ಥೆಗೆ ದೇಣಿಗೆ ನೀಡಿದ್ದು ಭೂಕಂಪದ ಸಂತ್ರಸ್ತ ರಾಷ್ಟ್ರ ನೇಪಾಳದಲ್ಲಿರುವವರ ಪುನರ್ವಸತಿಗೆ ನೆರವಾಗಿದ್ದಾರೆ. ಕುನಾಲ್ ಕಪೂರ್ ದೇಣಿಗೆ ನೀಡಿರುವ ಸಂಸ್ಥೆ ಈ ವರೆಗೆ ನೇಪಾಳಕ್ಕಾಗಿ ಸುಮಾರು 7 ಕೋಟಿ ಸಂಗ್ರಹಿಸಿದೆ. ನೇಪಾಳದ ಭೂಕಂಪದ ಸಂತ್ರಸ್ತರಿಗೆ ನೆರವು ನೀಡಲು ಕುನಾಲ್ ಕಪೂರ್ 1 .2 ಕೋಟಿ ದೇಣಿಗೆ ನೀಡಿದ್ದಾರೆ.
ಎನ್.ಜಿ.ಒ ನಡೆಸುತ್ತಿರುವ ಕಾಮಗಾರಿಯನ್ನು ಸ್ವತಃ ವೀಕ್ಷಿಸಲು ಕುನಾಲ್ ಕಪೂರ್ ನೇಪಾಳಕ್ಕೆ ತೆರಳಿದ್ದಾರೆ. ನೇಪಾಳಕ್ಕೆ ಸಹಾಯ ಮಾಡುತ್ತಿರುವ  ಕೆಟ್ಟೋ ಎನ್ ಜಿಒ ಸಂಸ್ಥೆ ಮನಸ್ಸಿಗೆ ತಿಂಬಾ ಹತ್ತಿರವಾಗಿದೆ. ಕ್ರೌಡ್ ಫಂಡಿಂಗ್ ನಿಂದ ಎಲ್ಲರೂ ಸಂತ್ರಸ್ತರಿಗೆ ನೆರವಾಗಬಹುದಾಗಿದೆ ಎಂಬುದನ್ನು ನೇಪಾಳದ ಘಟನೆಯಿಂದ ಸಾಬೀತಾಗಿದೆ ಎಂದು ಕುನಾಲ್ ಕಪೂರ್ ತಿಳಿಸಿದ್ದಾರೆ.   
ನೇಪಾಳಕ್ಕೆ ಸಹಾಯ ಮಾಡುವ ಅಭಿಯಾನಕ್ಕೆ ನಿರೀಕ್ಷೆಗೂ ಮೀರಿದ ಬೆಂಬಲ ವ್ಯಕ್ತವಾಗುತ್ತಿದೆ. ಇಲ್ಲಿ ನಡೆಯುತ್ತಿರುವ ಕೆಲಸಗಳನ್ನು ನೋಡಲು ನೇಪಾಳಕ್ಕೆ ಬಂದಿದ್ದೇನೆ ಎಂದು ಕುನಾಲ್ ಕಪೂರ್ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Nepal Floods: ನೇಪಾಳ ಭೀಕರ ಪ್ರವಾಹಕ್ಕೆ ಚೀನಾದ ನಿರ್ಮಾಣ ಕಾರ್ಯವೇ ಕಾರಣ?

Nepal floods|ನೇಪಾಳ-ಟಿಬೆಟ್ ಗಡಿಯಲ್ಲಿ ಭೀಕರ ಪ್ರವಾಹ: ಸಾವಿನ ಸಂಖ್ಯೆ 165ಕ್ಕೆ ಏರಿಕೆ; 300ಕ್ಕೂ ಹೆಚ್ಚು ಭಾರತೀಯರು ನಾಪತ್ತೆ

Toxic Box Office Collection: ಟಾಕ್ಸಿಕ್ ಮೊದಲ ದಿನದ ಕಲೆಕ್ಷನ್ ಎಷ್ಟು ಗೊತ್ತಾ? ಕನ್ನಡಕ್ಕಿಂತ ಹಿಂದಿಯಲ್ಲಿ ಡಬಲ್ ಗಳಿಕೆ!

Nepal: 80 ಸೇತುವೆಗಳು ಹಾನಿ, 40 ಕಿ.ಮೀ ರಸ್ತೆಗಳು ನಾಶ

ನೇಪಾಳ ಭೀಕರ ಪ್ರವಾಹದಲ್ಲಿ ಕೊಚ್ಚಿ ಹೋದವು ಒಂಬತ್ತು ಜಲವಿದ್ಯುತ್ ಕೇಂದ್ರಗಳು!