ಬಾಲಕಿಗೆ ಬೆದರಿಕೆ: ಗಾಯಕ ರೆಮೋ ವಿರುದ್ಧ ಪ್ರಕರಣ ದಾಖಲು
ಪುತ್ರ ಜೊನಾಥ್ ಕಾರು ಅಪಘಾತದಲ್ಲಿ ಗಾಯಾಳುವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಪ್ರಾಪ್ತ ಬಾಲಕಿಗೆ ಬೆದರಿಕೆ ಹಾಕಿದ ಆರೋಪ ಗಾಯಕ ರೆಮೋ...
ಪಣಜಿ: ಪುತ್ರ ಜೊನಾಥ್ ಕಾರು ಅಪಘಾತದಲ್ಲಿ ಗಾಯಾಳುವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಪ್ರಾಪ್ತ ಬಾಲಕಿಗೆ ಬೆದರಿಕೆ ಹಾಕಿದ ಆರೋಪ ಗಾಯಕ ರೆಮೋ ಫರ್ನಾಂಡೀಸ್ ವಿರುದ್ಧ ದಾಖಲಾಗಿದೆ.
ಬಾಲಕಿ ಹೇಳಿಕೆಯನ್ನು ಆಧರಿಸಿ 62 ವರ್ಷ ವಯಸ್ಸಿನ ಗಾಯಕ ರೆಮೋ ವಿರುದ್ಧ ಗೋವಾದ ಅಗಸೈಮ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಡಿಸೆಂಬರ್ 3ರಂದು ಗೋವಾ ಮೆಡಿಕಲ್ ಕಾಲೇಜಿನ ಆಸ್ಪತ್ರೆ ಆವರಣದ ವಾರ್ಡ್ 105ರಲ್ಲಿ, ಮಧ್ಯಾಹ್ನ 3 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಇನ್ಸ್ಪೆಕ್ಟರ್ ಜಿವ್ಬಾ ದಾಲ್ವಿ ತಿಳಿಸಿದ್ದಾರೆ.
ಮಹಾರಾಷ್ಟ್ರದ ಮಲ್ವಾನ್ ಮೂಲದ ಬಾಲಕಿ ಡಿಸೆಂಬರ್ 2ರಂದು ಹಳೇ ಗೋವಾದ ಸೇಂಟ್ ಫ್ರಾನ್ಸಿಸ್ ಕ್ಸೇವಿಯರ್ ಚರ್ಚ್ ಕಡೆಗೆ ನಡೆದು ಹೋಗುವಾಗ ರೆಮೋ ಪುತ್ರ ಜೊನಾಥ್ ಚಲಿಸುತ್ತಿದ್ದ ಕಾರು ಡಿಕ್ಕಿ ಹೊಡೆದಿತ್ತು. ಜೊನಾಥ್ ತುಂಬಾ ವೇಗವಾಗಿ ಕಾರು ಚಲಿಸುತ್ತಿದ್ದರು. ಬಾಲಕಿಯ ಹೇಳಿಕೆಯನ್ನಾಧರಿಸಿ ಜೊನಾಥ್ಗೆ ಸಮನ್ಸ್ ನೀಡಲಾಗಿತ್ತು. ಅವರ ವಿರುದ್ಧ ಅತಿ ವೇಗ, ಬೇಜವಾಬ್ದಾರಿ ಚಾಲನೆ ಮಾಡಿದ್ದಕ್ಕಾಗಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.