ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಾಲಿವುಡ್

ದೆಹಲಿ ಗ್ಯಾಂಗ್ ರೇಪ್ ಪ್ರಕರಣ ಅಕ್ಷಮ್ಯ: ಪ್ರಿಯಾಂಕ ಚೋಪ್ರಾ

'ಜೈ ಗಂಗಾಜಲ್' ಸಿನೆಮಾದಲ್ಲಿ ಪೊಲೀಸ್ ಅವತಾರದಲ್ಲಿ ಕಾಣಿಸಿಕೊಳ್ಳಲಿರುವ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಅವರು ದೆಹಲಿ ಗ್ಯಾಂಗ್ ರೇಪ್ ಪ್ರಕರಣ ಕ್ಷಮಾಪಣೆ

'ಜೈ ಗಂಗಾಜಲ್' ಸಿನೆಮಾದಲ್ಲಿ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ
Guruprasad Narayana
Updated On : 23 Dec 2015, 7:43 am

ನವದೆಹಲಿ: 'ಜೈ ಗಂಗಾಜಲ್' ಸಿನೆಮಾದಲ್ಲಿ ಪೊಲೀಸ್ ಅವತಾರದಲ್ಲಿ ಕಾಣಿಸಿಕೊಳ್ಳಲಿರುವ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಅವರು ದೆಹಲಿ ಗ್ಯಾಂಗ್ ರೇಪ್ ಪ್ರಕರಣ ಕ್ಷಮಾಪಣೆ ನೀಡಲಾಗದಷ್ಟು ದುಷ್ಟ ಎಂದಿದ್ದಾರೆ.

ಪ್ರಕಾಶ್ ಜಾ ನಿರ್ದೇಶನದ ಈ ಸಿನೆಮಾದ ಟ್ರೇಲರ್ ಬಿಡುಗಡೆಯ ವೇಳೆಯಲ್ಲಿ ೩೩ ವರ್ಷದ ನಟಿ "ಬಾಲಾಪರಾಧಿಯ ಬಿಡುಗಡೆಯನ್ನು ನನಗೆ ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ಪ್ರಕರಣ ಎಷ್ಟು ದುಷ್ಟತನದಿಂದ ಕೂಡಿತ್ತೆಂದರೆ ಕ್ಷಮಾಪಣೆಗೆ ಅವಕಾಶವಿಲ್ಲ" ಎಂದಿದ್ದಾರೆ.

"ನಾನು ಕಾನೂನು ಗೌರವಿಸುವ ನಾಗರಿಕ ವ್ಯಕ್ತಿ ಆದುದರಿಂದ ಕಾನೂನಿನ ಜೊತೆಗಿರುತ್ತೇನೆ ಆದರೆ ಈ ಪ್ರಕರಣದಲ್ಲಿ ಕ್ಷಮಾಪಣೆ ಒಪ್ಪಿಕೊಳ್ಳುವುದು ಕಷ್ಟ" ಎಂದಿದ್ದಾರೆ ಪ್ರಿಯಾಂಕ.

ಅಮೆರಿಕಾದ ಧಾರಾವಾಹಿ 'ಕ್ವಾಂಟಿಕೋ' ಚಿತ್ರೀಕರಣ ಮುಗಿಸಿ ನಟಿ ಮುಂಬೈಗೆ ಹಿಂದಿರುಗಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments