ರಾಧಿಕಾ ಆಪ್ಟೆ 
ಬಾಲಿವುಡ್

ನಕಲಿ ಬೆತ್ತಲೆ ಫೋಟೋ: ಕಡೆಗಣಿಸುವುದು ಉತ್ತಮ ಎಂದ ನಟಿ ರಾಧಿಕಾ

ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ನಕಲಿ ಬೆತ್ತಲೆ ಫೋಟೋಗಳು ಹರಿದಾಡುತ್ತಿರುವ ಬಗ್ಗೆ ಅಚ್ಚರಿ ವ್ಯಕ್ತಪಡಿಸಿರುವ ಬಾಲಿವುಡ್ ನಟಿ ರಾಧಿಕಾ ಆಪ್ಟೆ ಅವರು, ಇಂತಹ ಘಟನೆಗಳನ್ನು ಕಡೆಗಣಿಸುವುದೇ ಉತ್ತಮ ಎಂದಿದ್ದಾರೆ.

ಕಳೆದ ಎರಡ್ಮೂರು ದಿನಗಳಿಂದ ರಾಧಿಕಾ ಅವರ ವಿವಾದಾತ್ಮಕ ಬೆತ್ತಲೆ ಸೆಲ್ಫಿ ಚಿತ್ರಗಳು ವಾಟ್ಸಪ್ ಹಾಗೂ ಯೂಟ್ಯೂಬ್‌ನಲ್ಲಿ ಹರಿದಾಡುತ್ತಿದ್ದವು. ಈ ಬಗ್ಗೆ ಪ್ರತಿಕ್ರಿಯಿಸಿರುವ ನಟಿ, 'ಈ ಚಿತ್ರಗಳನ್ನು ನೋಡಿದ ಪ್ರತಿಯೊಬ್ಬರಿಗೂ ಅದು ನಾನಲ್ಲ' ಎಂದು ಗೊತ್ತಾಗುತ್ತದೆ ಎಂದಿದ್ದಾರೆ.

ನನ್ನ ಮುಖವನ್ನು ಬೇರೊಬ್ಬ ಯುವತಿಯ ಬೆತ್ತಲೆ ಫೋಟೋ ಜೊತೆ ಸೇರಿಸಿ ಮಾರ್ಪಿಂಗ್ ಮಾಡಲಾಗಿದೆ ಎಂದಿರುವ ರಾಧಿಕಾ, ಯಾರೋ ತಲೆ ಇಲ್ಲದ ಜನಗಳು, ಪ್ರಚಾರಕ್ಕಾಗಿ ಇಂತಹ ಕೀಳು ಮಟ್ಟದ ಕೃತ್ಯ ಎಸಗಿದ್ದಾರೆ ಎಂದು ಕಿಡಿ ಕಾರಿದ್ದಾರೆ.

ಮರಾಠಿ ರಂಗಭೂಮಿಯಿಂದ ಬೆಳಕಿಗೆ ಬಂದ ರಾಧಿಕಾ ಆಪ್ಟೆಗೆ ಚಿತ್ರರಂಗಕ್ಕೆ ಬಂದ ಹತ್ತು ವರ್ಷಗಳ ನಂತರ ಬೇಡಿಕೆ ಕುದುರಲಾರಂಭಿಸಿತ್ತು. ಶ್ರೀರಾಮ ರಾಘವನ್ ನಿರ್ದೇಶನದ ಬದಲಾಪುರ್ ಇನ್ನೇನು ತೆರೆಗೆ ಬರುತ್ತಿರುವ ಸಂದರ್ಭದಲ್ಲೇ ನಕಲಿ ನಗ್ನ ಸೆಲ್ಫಿಯ ಮೂಲಕ ಸುದ್ದಿಗೆ ಗ್ರಾಸವಾಗಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

30 ನಿಮಿಷಗಳಲ್ಲಿ ಹಿಂದಕ್ಕೆ ಹೋಗಿ: ಶಾಂತಿ ಮಾತುಕತೆ ಮಧ್ಯೆ ಹಾರ್ಮುಜ್'ಗೆ ನುಗ್ಗಿದ ಅಮೆರಿಕದ Destroyer ಯುದ್ಧನೌಕೆಗೆ ಇರಾನ್ ಎಚ್ಚರಿಕೆ!

"ಇರಾನ್ ದೊಡ್ಡ ಮಟ್ಟದಲ್ಲಿ ಸೋಲುತ್ತಿದೆ": ಮಾತುಕತೆ ಮುಕ್ತಾಯಕ್ಕೂ ಮುನ್ನ ಟ್ರಂಪ್ ಘೋಷಣೆ

IPL 2026: ಸ್ಯಾಮ್ಸನ್ ಬ್ಯಾಟಿಂಗ್ ಅಬ್ಬರ; DC ವಿರುದ್ಧ CSK ಗೆ 23 ರನ್ ಗಳ ಭರ್ಜರಿ ಜಯ

ಖ್ಯಾತ ಗಾಯಕಿ ಆಶಾ ಭೋಸ್ಲೆಗೆ ಹೃದಯಾಘಾತ: ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲು

IPL 2026: ಚೆನ್ನೈ ಪರ ಸಂಜು ಸ್ಯಾಮ್ಸನ್ ಸ್ಫೋಟಕ ಬ್ಯಾಟಿಂಗ್; MS ಧೋನಿ ದಾಖಲೆ ಪುಡಿ; ದಿಗ್ಗಜರ ಗುಂಪಿಗೆ ಸೇರ್ಪಡೆ

SCROLL FOR NEXT