ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ಜೋಡಿ (ಸಂಗ್ರಹ ಚಿತ್ರ) 
ಬಾಲಿವುಡ್

ಐಶ್-ಅಭಿ ಜಾಹಿರಾತು ಸಂಭಾವನೆ ಎಷ್ಟು ಗೊತ್ತೆ..?

ಬಾಲಿವುಡ್ ಮಂದಿ ಜಾಹಿರಾತುಗಳಲ್ಲಿ ನಟಿಸಲು ದುಬಾರಿ ಸಂಭಾವನೆ ಪಡೆಯುವುದು ಸಾಮಾನ್ಯವೇ ಆದರೂ, ಬಿಗ್ ಬಿ ಸೊಸೆ ಐಶ್ವರ್ಯ ರೈ ಮತ್ತು ಮಗ ಅಭಿಷೇಕ್...

ಮುಂಬೈ: ಬಾಲಿವುಡ್ ಮಂದಿ ಜಾಹಿರಾತುಗಳಲ್ಲಿ ನಟಿಸಲು ದುಬಾರಿ ಸಂಭಾವನೆ ಪಡೆಯುವುದು ಸಾಮಾನ್ಯವೇ ಆದರೂ, ಬಿಗ್ ಬಿ ಸೊಸೆ ಐಶ್ವರ್ಯ ರೈ ಮತ್ತು ಮಗ ಅಭಿಷೇಕ್ ಬಚ್ಚನ್ ಒಟ್ಟಿಗೆ ನಟಿಸಿರುವ ಜಾಹಿರಾತುವೊಂದಕ್ಕೆ ಅವರು ಪಡೆದಿರುವ ಸಂಭಾವನೆ ಎಂತಹವರನ್ನೂ ಚಕಿತಗೊಳಿಸುತ್ತದೆ.

ಬಾಲಿವುಡ್ ನ ಕೆಲ ಜೋಡಿಗಳು ಪರದೆ ಮೇಲೆ ಕಾಣಿಸಿಕೊಳ್ಳದಿದ್ದರೂ ಪರವಾಗಿಲ್ಲ, ಅಭಿಮಾನಿಗಳು ಅವರನ್ನು ಸಣ್ಣ ಪರದೆ ಮೇಲೆ ನೋಡಿ ಖುಷಿ ಪಡುತ್ತಾರೆ. ಇಂತಹ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಬಾಲಿವುಡ್ ದೊಡ್ಡಮನೆಯ ಜೋಡಿ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ಬಚ್ಚನ್ ಕೂಡ ಸೇರಿದ್ದಾರೆ. ಪ್ರಸ್ತುತ ಕೆಲ ಖಾಸಗಿ ಕಂಪೆನಿಗಳ ಜಾಹಿರಾತಿನಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿರುವ ಈ ಜೋಡಿ, ದುಬಾರಿ ಸಂಭಾವನೆ ಪಡೆಯುವ ಮೂಲಕ ಇದೀಗ ಭಾರಿ ಸುದ್ದಿಗೆ ಗ್ರಾಸವಾಗಿದ್ದಾರೆ.

ಪ್ರೆಸ್ಟೀಜ್ ಹಾಗೂ ಲಕ್ಸ್ ಜಾಹೀರಾತಿನಲ್ಲಿ ಇಬ್ಬರು ಒಟ್ಟಿಗೆ ಕಾಣಿಸಿಕೊಂಡಿದ್ದು, ಪ್ರೆಸ್ಟೀಜ್ ಸಂಸ್ಥೆಯ ಜಾಹೀರಾತುವೊಂದರಲ್ಲಿ ನಟಿಸಲು ಈ ಜೋಡಿ ಬರೋಬ್ಬರಿ 30 ಕೋಟಿ ರು.ಸಂಭಾವನೆ ಪಡೆದಿದ್ದಾರಂತೆ. ಆ ಮೂಲಕ ದುಬಾರಿ ಸಂಭಾವನೆ ಪಡೆಯುತ್ತಿದ್ದ ಇತರೆ ಬಾಲಿವುಡ್ ನಟರನ್ನು ಈ ಜೋಡಿ ಹಿಂದಿಕ್ಕಿದ್ದಾರೆ. ಈ ಹಿಂದೆ ನಟ ಅಮೀರ್ ಹಾಗೂ ಅವರ ಪತ್ನಿ ಕಿರಣ್ ಜಾಹಿರಾತುವೊಂದಕ್ಕೆ 2 ಕೋಟಿ ಪಡೆದಿದ್ದು ಸುದ್ದಿಗೆ ಗ್ರಾಸವಾಗಿತ್ತು.

ಆದರೆ ಐಶ್ ಮತ್ತು ಅಭಿ ಜೋಡಿ ಪಡೆಯುತ್ತಿರುವ ಸಂಭಾವನೆಯ ಎದುರು ಇವರ ಸಂಭಾವನೆ ದೊಡ್ಡ ಮೊತ್ತವೇನಲ್ಲ ಎಂದು ಬಾಲಿವುಡ್ ತಜ್ಞರು ಹೇಳುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮೋದಿ ಸಂಪುಟಕ್ಕೆ ಮೇಜರ್ ಸರ್ಜರಿ: ಮುಂಗಾರು ಅಧಿವೇಶನಕ್ಕೂ ಮುನ್ನ ಹಲವು ಸಚಿವರ ಖಾತೆ ಬದಲಾವಣೆ, BJP ಸಂಘಟನೆಯಲ್ಲೂ ಭಾರೀ ಬದಲಾವಣೆ..?

ಟ್ರಂಪ್ ಆದೇಶ ಬೆನ್ನಲ್ಲೇ ಇರಾನ್ ಮೇಲೆ ಅಮೆರಿಕಾ ಭಾರೀ ವೈಮಾನಿಕ ದಾಳಿ: 10 ಪ್ರಮುಖ ಸೇನಾ ನೆಲೆಗಳು ಧ್ವಂಸ, ಕದನ ವಿರಾಮ ಮತ್ತೆ ಪ್ರಶ್ನಾರ್ಥಕ..!

ಪ್ರವಾಸ ದುರಂತ: ರೆಸಾರ್ಟ್‌ನ ಈಜುಕೊಳದಲ್ಲಿ ಕೊಲ್ಹಾಪುರದ 25 ವರ್ಷದ ಯುವಕ ಮುಳುಗಿ ಸಾವು, Video

‘ಉಲ್ಟಾ ಪಲ್ಟಾ’ಖ್ಯಾತಿಯ ನಿರ್ದೇಶಕ, ಹಿರಿಯ ಪತ್ರಕರ್ತ ಎನ್.ಎಸ್. ಶಂಕರ್ ಇನ್ನಿಲ್ಲ!

ಅಹಿಂದ ಅಧಿಕಾರಿಗಳ ಜಾಗದಲ್ಲಿ ಒಕ್ಕಲಿಗರ ನೇಮಕ: ಕಾಂಗ್ರೆಸ್ ನಾಯಕರಲ್ಲಿ ಅಸಮಾಧಾನ ಭುಗಿಲು?