ರಾಧಿಕಾ ಆಪ್ಟೆ 
ಬಾಲಿವುಡ್

ಹಂಟರ್ ಟ್ರೇಲರ್‌ನಲ್ಲಿ ರಾಧಿಕೆ ಸರಸ...!

ಮರಾಠಿ ರಂಗಭೂಮಿಯಿಂದ ಬೆಳಕಿಗೆ ಬಂದ ರಾಧಿಕಾ ಆಪ್ಟೆಗೆ ಚಿತ್ರರಂಗಕ್ಕೆ ಬಂದ ಹತ್ತು ವರ್ಷದ ನಂತರ...

ಮರಾಠಿ ರಂಗಭೂಮಿಯಿಂದ ಬೆಳಕಿಗೆ ಬಂದ ರಾಧಿಕಾ ಆಪ್ಟೆಗೆ ಚಿತ್ರರಂಗಕ್ಕೆ ಬಂದ ಹತ್ತು ವರ್ಷದ ನಂತರ ಬೇಡಿಕೆ ಕುದುರಲಾರಂಭಿಸಿದೆ. ಶ್ರೀರಾಮ್ ರಾಘವನ್ ನಿರ್ದೇಶನದ ಬದಲಾಪುರ್ ಇನ್ನೇನು ತೆರೆಗೆ ಬರಲು ಸಿದ್ಧವಾಗುತ್ತಿದ್ದರೆ, ಅನುರಾಗ್ ಕಶ್ಯಪ್ ನಿರ್ಮಾಣದ ಹಂಟರ್ ಚಿತ್ರದ ಬಗ್ಗೆ ಬಾಲಿವುಡ್ಡಿನಾದ್ಯಂತ ಚರ್ಚೆ ಶುರುವಾಗಿದೆ.

ಈ ಎರಡೂ ಚಿತ್ರಗಳಲ್ಲಿ ರಾಧಿಕಾ ಆಪ್ಟೆಗೆ ಮಿಂಚಲು ಭರಪೂರ ಅವಕಾಶವಿದೆಯಂತೆ. ಅಭಿನಯಕ್ಕೂ ಗ್ಲಾಮರ್‌ಗೂ ಸಮಾನ ಅವಕಾಶವಿರುವ ಈ ಚಿತ್ರಗಳ ಮೂಲಕ ಈ ವರ್ಷದ ಸಿನಿಮಾ ಅವಾರ್ಡುಗಳು ರಾಧಿಕಾಳನ್ನು ಹುಡುಕಿಕೊಂಡು ಬಂದರೂ ಅಚ್ಚರಿಯಿಲ್ಲ.

ಈ ನಡುವೆ ಆಕೆಯ ಅಭಿನಯದ ಶೋರ್ ಇನ್ ದ ಸಿಟಿ ಕೂಡ ಸದ್ದು ಮಾಡಲಾರಂಭಿಸಿದೆ. ಹಂಟರ್ ಚಿತ್ರದ ಟ್ರೇಲರ್‌ಗಳಲ್ಲಿ ಅಡಲ್ಟ್ ಕಾಮಿಡಿಯ ಜೊತೆಗೆ ಧಾರಾಳ ಎಕ್ಸ್‌ಪೋಸ್ ಕೂಡ ಇರೋದರ ಬಗ್ಗೆ ಮಾಧ್ಯಮದವರು ಪ್ರಶ್ನಿಸಿದರೆ ರಾಧಿಕಾ ಆಪ್ಟೆ ಸಿನಿಮಾ ನೋಡಿದಾಗ ಎಲ್ಲ ಪ್ರಶ್ನೆಗಳಿಗೂ ಉತ್ತರ ಸಿಗುತ್ತದೆ ಅಂತಾಳೆ. ಅನುರಾಗ್ ಕಶ್ಯಪ್ ಮತ್ತು ಫ್ಯಾಂಟಮ್ ಫಿಲಮ್ಸ್ ಬ್ಯಾನರ್‌ನಲ್ಲಿ ನಟಿಸೋ ಅವಕಾಶ ಸಿಕ್ಕಿದ್ದಕ್ಕೆ ಥ್ರಿಲ್ ಆಗಿರುವ ರಾಧಿಕಾ, ಪ್ರೇಕ್ಷಕರು ಈವರೆಗೆ ಇಂಥದೊಂದು ಚಿತ್ರ ನೋಡಿರಲು ಸಾಧ್ಯವೇ ಇಲ್ಲ ಎಂದು ಛಾಲೆಂಜ್ ಮಾಡುತ್ತಿದ್ದಾಳೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್: 56 ಸಾವಿರ ಹುದ್ದೆ ನೇಮಕಕ್ಕೆ ಸಚಿವ ಸಂಪುಟ ಅಸ್ತು

ದಲಿತ ಸಚಿವರ ನಿಯೋಗ ಭೇಟಿ ಬೆನ್ನಲ್ಲೇ SC ಒಳ ಮೀಸಲಾತಿ ಮಸೂದೆಗೆ ರಾಜ್ಯಪಾಲರ ಅಂಕಿತ

T20 World Cup 2026: ಅಭಿಷೇಕ್, ಹಾರ್ದಿಕ್ ಅಬ್ಬರ; ಜಿಂಬಾಬ್ವೆ ವಿರುದ್ಧ ಟೀಂ ಇಂಡಿಯಾ ಭರ್ಜರಿ ಗೆಲುವು

AI, ಕೃಷಿ, ಸೈಬರ್ ಭದ್ರತೆ, UPI ಸೇರಿದಂತೆ ಸರಣಿ ಒಪ್ಪಂದಗಳಿಗೆ ಭಾರತ ಮತ್ತು ಇಸ್ರೇಲ್ ಸಹಿ

'ಸಂಘರ್ಷಕ್ಕೆ ಮಾನವೀಯತೆ ಬಲಿಯಾಗಬಾರದು': ಗಾಜಾ ಶಾಂತಿ ಯೋಜನೆಗೆ ಪ್ರಧಾನಿ ಮೋದಿ ಬೆಂಬಲ

SCROLL FOR NEXT