ಕಂಗನಾ ಒಬ್ಬ ಅದ್ಭುತ ಕಲಾವಿದೆ: ಸೀನಿಯರ್ ಬಚ್ಚನ್
"ತನು ವೆಡ್ಸ್ ಮನು ರಿಟರ್ನ್ಸ್''ನ ಬಾಲಿವುಡ್ "ಕ್ವೀನ್'' ಕಂಗನಾ ರಾನತ್ ಒಬ್ಬ ಪ್ರತಿಭಾನ್ವಿತೆ ಹಾಗೂ ಅದ್ಭುತ ನಟಿ...
ಮುಂಬೈ: "ತನು ವೆಡ್ಸ್ ಮನು ರಿಟರ್ನ್ಸ್''ನ ಬಾಲಿವುಡ್ "ಕ್ವೀನ್'' ಕಂಗನಾ ರಾನತ್ ಒಬ್ಬ ಪ್ರತಿಭಾನ್ವಿತೆ ಹಾಗೂ ಅದ್ಭುತ ನಟಿ ಎಂದು ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಹಾಡಿ ಹೊಗಳಿದ್ದಾರೆ.
ಖ್ಯಾತ ನಿರ್ದೇಶಕ ರಾಜ್ ಕುಮಾರ್ ಹಿರಾನಿ ಅವರ ಮುಂದಿನ ಚಿತ್ರದಲ್ಲಿ ಈ ಇಬ್ಬರೂ ಕಲಾವಿದರು ಒಟ್ಟಿಗೆ ನಟಿಸಲಿದ್ದಾರೆ." ಹಿರಾನಿ ನಿರ್ದೇಶನದಲ್ಲಿ ಕಂಗನಾ ಜೊತೆಗೆ ನಟಿಸುತ್ತಿರುವುದಕ್ಕೆ ನಾನು ಬಹಳ ಪುಳಕಗೊಂಡಿದ್ದೇನೆ ಎಂದು ಸೀನಿಯರ್ ಬಚ್ಚನ್ ತಮ್ಮ ಟ್ವಿಟ್ಟರ್ ಪುಟದಲ್ಲಿ ಶೂಟಿಂಗ್ ದೃಶ್ಯದ ಫೋಟೋಗಳನ್ನು ಹಾಕಿ ಖುಷಿ ಹಂಚಿಕೊಂಡಿದ್ದಾರೆ.
ಜಾಹೀರಾತುವೊಂದಕ್ಕೆ ನಕಲಿ ಗಡ್ಡ ಬಿಟ್ಟಿರುವ ಬಚ್ಚನ್, ಗಡ್ಡ ಅಂಟಿಸಿಕೊಂಡು ಅಭಿನಯಿಸುವುದು ಆರಂಭದಲ್ಲಿ ದೊಡ್ಡ ಹಿಂಸೆ ಎನಿಸಿದರೂ ಎಲ್ಲಾ ಮುಗಿದ ಮೇಲೆ ತೆರೆಯ ಮೇಲೆ ನೋಡಿದಾಗ, ಪಟ್ಟ ಶ್ರಮ ಸಾರ್ಥಕ ಎನಿಸುತ್ತದೆ ಎಂದು 72 ವರ್ಷದ ಈ ಹಿರಿಯ ನಟ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.