ಜಬ್ ವಿ ಮೆಟ್ ಚಿತ್ರದ ಸ್ಟಿಲ್ 
ಬಾಲಿವುಡ್

ಶಾಹಿದ್ ಗೆ ಮದುವೆ -ಕರೀನಾಗೆ ಖುಷಿ

ಶಾಹಿದ್ ಮದುವೆಗೆ ಹೋಗುವಿರಾ ಎಂದು ಪ್ರಶ್ನಿಸಿದಾಗ, ಮದುವೆಗೆ ಆಮಂತ್ರಣ ನೀಡಿದರೆ ಖಂಡಿತಾ ಹೋಗುತ್ತೇನೆ ಎಂದರು...

ಮುಂಬೈ:ಕಪೂರ್ ಎಂಬ 'ಸರ್ ನೇಮ್' ಇಟ್ಟುಕೊಂಡು   ಬಾಲಿವುಡ್ ನ ತೆರೆಯ ಮೇಲೆ ಮತ್ತು ತೆರೆಯ ಹೊರಗೆ ಒಂದಷ್ಟು ವರ್ಷ ಪ್ರಣಯ ಹಕ್ಕಿಗಳಂತೆ ಓಡಾಡಿದ್ದ ಈ ಜೋಡಿ ಅಭಿಮಾನಿಗಳಿಗೆ ಇಷ್ಟವಾಗಿದ್ದರು. ಮದುವೆಯೇ ಆಗಿಬಿಡುತ್ತಾರೆ ಎಂದು ಜನ ಮಾತಾಡಿಕೊಂಡಿದ್ದರು. ಯಾವಾಗ ಇವರಿಬ್ಬರ 'ಜಬ್ ವಿ ಮೆಟ್' ಸಿನಿಮಾ ಬಿಡುಗಡೆಯಾಗಿ ಸೂಪರ್ ಹಿಟ್ ಆದ್ಮೇಲೆ ಅದೇನಾಯ್ತೋ ಗೊತ್ತಿಲ್ಲ, ಈ ಜೋಡಿ ನಾನೊಂದು ತೀರ, ನೀನೊಂದು ತೀರ ಅಂತ ದೂರಾಯ್ತು. ಕರೀನಾ ಸೈಫ್ ಆಲಿಖಾನ್ ತೆಕ್ಕೆಗೆ ಸೇರಿಕೊಂಡರು.

ಇತ್ತ ಶಾಹಿದ್ ಕಪೂರ್ ಮಂಕಾದಂತೆ ಕಂಡರು. ಆದರೆ ಇತ್ತೀಚೆಗೆ ಕೆರಿಯರ್ ನಲ್ಲಿಯೂ ಉತ್ತುಂಗದಲ್ಲಿರುವ ಶಾಹಿದ್ ದೆಲ್ಲಿಯ ಯುವತಿ ಮೀರಾ ರಜಪೂತ್ ಎಂಬಾಕೆಯನ್ನು ಮುಂದಿನ ತಿಂಗಳು ಕೈ ಹಿಡಿಯಲಿದ್ದಾರೆ.

ಈ ಸಂತೋಷದ ಸಮಾಚಾರವನ್ನು ಸ್ವತಹ ಶಾಹಿದ್ ತನ್ನ ಮಾಜಿ ಪ್ರಿಯಕರೆ ಕರೀನಾ ಕಪೂರ್ ಗೆ ಫಸ್ಟ್ ತಿಳಿಸಿದ್ದಂತೆ. ಹಾಗಂತ ಕರೀನಾನೇ ಇತ್ತೀಚೆಗೆ ಮಾಧ್ಯಮದ ಮುಂದೆ ಹೇಳಿಕೊಂಡಳು. ಮಾಧ್ಯಮಕ್ಕೆ ಗೊತ್ತಾಗುವ ಮೊದಲೇ ನನಗೆ ಶಾಹಿದ್ ಮದುವೆ ಸುದ್ದಿ ಸಿಕ್ಕಿದೆ. ಆತ ನನಗೇ ಮೊದಲು ತಿಳಿಸಿದ್ದು. ಕೆಲ ತಿಂಗಳ ಹಿಂದೆ ಯಶ್ ರಾಜ್ ಫಿಲ್ಮ್ ಸ್ಟುಡಿಯೋ ಫೆಮಿನಾ ಕಾರ್ಯಕ್ರಮದ ವೇಳೆ ಸಿಕ್ಕಿದ ಶಾಹಿದ್ ನಾನು ಮದುವೆಯಾಗುತ್ತಿದ್ದೇನೆ ಎಂದ.ನನಗೆ ಅತೀವ ಸಂತೋಷವಾಯಿತು. ನಾನು ಅವನಿಗೆ ಧನ್ಯವಾದ ಹೇಳಿದೆ, ವೃತ್ತಿಯಲ್ಲಿಯೂ ಇತ್ತೀಚೆಗೆ ಯಶಸ್ಸು ಕಾಣುತ್ತಿರುವ  ಶಾಹಿದ್ ಮದುವೆ ಮಾಡಿಕೊಳ್ಳುವ ಮೂಲಕ ಜೀವನದಲ್ಲಿ ಉತ್ತಮ ನಿರ್ಧಾರ ತೆಗೆದುಕೊಳ್ಳುತ್ತಿದ್ದಾನೆ ಎಂದು ನನಗನ್ನಿಸುತ್ತದೆ. ಅವನಿಗೆ ಒಳ್ಳೆಯದಾಗಲಿ ಎಂದು ಆಶಿಸುತ್ತೇನೆ ಎಂದು ಹರಸಿದ್ದಾಳೆ ಕರೀನಾ.

ಶಾಹಿದ್ ಇತ್ತೀಚೆಗೆ 'ಹೈದರ್' ಚಿತ್ರದ ನಟನೆಗೆ ಪ್ರಶಸ್ತಿ ಪಡೆದುಕೊಂಡಿರುವುದಕ್ಕೆ ಕರೀನಾಗೆ ಖುಷಿಯಾಗಿದೆ. ಆತನೊಂದಿಗೆ ನಟಿಸಲು ಸಿದ್ದಳಿರುವುದಾಗಿ ಹೇಳಿದ್ದಾಳೆ.
ದೀರ್ಘ ವರ್ಷಗಳ ಬಳಿಕ ಮತ್ತೆ ಇವರಿಬ್ಬರೂ 'ಉಡ್ತಾ ಪಂಜಾಬಾ' ಸಿನಿಮಾದಲ್ಲಿ ಒಟ್ಟಾಗಿ ನಟಿಸುತ್ತಿದ್ದಾರೆ. ಆದರೆ ಒಬ್ಬರಿಗೊಬ್ಬರು ರೊಮ್ಯಾನ್ಸ್ ಮಾಡುವುದಿಲ್ಲ. ಅಲಿಯಾ ಭಟ್  ಮತ್ತು ಪಂಜಾಬಿ ನಟ ದಿಲ್ಜಿತ್ ದೊಸಂಕ್ ಕೂಡ ಇದರಲ್ಲಿ ನಟಿಸುತ್ತಿದ್ದಾರೆ. ಪಂಜಾಬ್ ನಲ್ಲಿ ಮಾದಕ ವಸ್ತುಗಳ ಸಮಸ್ಯೆ ಬಗ್ಗೆ ಚಿತ್ರ ಒಳಗೊಂಡಿದೆ.

ನಾನು ಮತ್ತು ಶಾಹಿದ್ ಈ ಚಿತ್ರದಲ್ಲಿ ಒಟ್ಟಾಗಿ ನಟಿಸುವುದಕ್ಕೆ ಅಷ್ಟು ಉತ್ತಮವಾದ ಕಥೆ ಕಾರಣವಾಗಿದೆ. ನನ್ನ ಪಾತ್ರವೂ ಉತ್ತಮವಾಗಿದ್ದು, ಅಭಿನಯಿಸುವಾಗ ಖುಷಿ ಎನಿಸುತ್ತದೆ. ಉಡ್ತಾ ಪಂಜಾಬಾ' ಚಿತ್ರ ಹಿಟ್ ಆಗುವ ವಿಶ್ವಾಸ ಕರೀನಾ ಮಾತುಗಳಲ್ಲಿದ್ದವು.
 ಶಾಹಿದ್ ಮದುವೆಗೆ ಹೋಗುವಿರಾ ಎಂದು ಪ್ರಶ್ನಿಸಿದಾಗ, ಮದುವೆಗೆ ಆಮಂತ್ರಣ ನೀಡಿದರೆ ಖಂಡಿತಾ ಹೋಗುತ್ತೇನೆ ಎಂದರು.

ಮೂರು ವರ್ಷಗಳ ಹಿಂದೆ ಸೈಫ್ ಆಲಿಖಾನ್ ಮದುವೆಯಾಗಿ ಪಠೌಡಿ ಮನೆತನದ ಸೊಸೆಯಾಗಿರುವ ಕರೀನಾಗೆ ಮದುವೆ ಎಂಬ ಸಾಮಾಜಿಕ ವ್ಯವಸ್ಥೆ ಬಗ್ಗೆ ಬಲವಾದ ನಂಬಿಕೆ ಇದೆಯಂತೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

ಇತಿಹಾಸ ಬರೆದ Sherry Singh, 48 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತಕ್ಕೆ 'ಮಿಸ್ ಯೂನಿವರ್ಸ್' ಕಿರೀಟ!

ಡಿಕೆ ಶಿವಕುಮಾರ್ ಇದ್ದ ವೇದಿಕೆಯಲ್ಲೇ ಹೈಡ್ರಾಮಾ: RSS ಸಮವಸ್ತ್ರದಲ್ಲಿ ಬಿಜೆಪಿ ಶಾಸಕ ಮುನಿರತ್ನ ಧರಣಿ! Video

ಪಶ್ಚಿಮ ಬಂಗಾಳ ವೈದ್ಯಕೀಯ ವಿದ್ಯಾರ್ಥಿನಿ ಗ್ಯಾಂಗ್ ರೇಪ್ ಕೇಸ್: ಮೂವರ ಬಂಧನ

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

SCROLL FOR NEXT