ಬಾಲಿವುಡ್

ಸೊಸೈಟಿ ಸೀರೆಯಲ್ಲಿ ಗೌರಿ ಖಾನ್

ಬಾಲಿವುಡ್ ಬಾದ್‍ಶಾ ಶಾರುಖ್ ಖಾನ್ ಪತ್ನಿ ಗೌರಿ ಖಾನ್ ಸಾಮಾನ್ಯವಾಗಿ ಎಲ್ಲೂ ಹೆಚ್ಚಾಗಿ ಕಾಣಿಸಿಕೊಳ್ಳುವುದಿಲ್ಲ. ಆದರೆ ಈ ಭಾರಿ ಅವರು ಏಕಾಏಕಿ ಪತ್ರಿಕೆಯೊಂದರ ಮುಖಪುಟ ಅಲಂಕರಿಸಿದ್ದಾರೆ.

ಸೀರೆಯಲ್ಲಿ ತಮ್ಮ ಹಾವಭಾವ, ಭಂಗಿಗಳನ್ನು ಆ ವಿಶೇಷ ಸಂಚಿಕೆಯಲ್ಲಿ ತೆರೆದಿಟ್ಟಿದ್ದಾರೆ. `ಸೊಸೈಟಿ' ಎಂಬ ನಿಯತಕಾಲಿಕೆಯ ಮಾರ್ಚ್ ಸಂಚಿಕೆಯಲ್ಲಿ ಗೌರಿ ಖಾನ್‍ರ ಸೀರೆ ದೃಶ್ಯಗಳನ್ನು ಕಣ್ತುಂಬಿಕೊಳ್ಳಬಹುದು. 40ರ ಹರೆಯದಲ್ಲೂ ಗೌರಿ ಖಾನ್ ಹಾಟ್ ಲುಕ್ ಮೂಲಕ ಎಲ್ಲರ ಗಮನಸೆಳೆದಿದ್ದಾರೆ.

ಇಷ್ಟು ದಿನ ಗೌರಿ ಖಾನ್ ಎಂದರೆ ಶಾರುಖ್ ಪತ್ನಿ ಎಂದೇ ಎಲ್ಲರೂ ಗುರುತಿಸುತ್ತಿದ್ದರು. ಆದರೆ ಗೌರಿ ಅವರ ಮನಸ್ಸಿನಲ್ಲೂ ಒಬ್ಬ ಕಲಾವಿದೆ ಇದ್ದಾರೆ, ತಾನೇನು ಎಂಬುದನ್ನು ತೋರಿಸಬೇಕು ಎಂಬ ತುಡಿತ ಬಹುಶಃ ಅವರಲ್ಲಿ ಕಾಡುತ್ತಿತ್ತು ಎನ್ನಿಸುತ್ತದೆ. ಅದೀಗ `ಸೊಸೈಟಿ' ಮೂಲಕ ನೆರವೇರಿದೆ. ಈ ಮೂಲಕ ಫ್ಯಾಷನ್ ಡಿಸೈನಿಂಗ್‍ನಲ್ಲೂ ತಮ್ಮ ಪ್ರತಿಭೆ ಪ್ರದರ್ಶಿಸಿದ್ದಾರೆ.

SCROLL FOR NEXT