ಬಾಲಿವುಡ್

ಮಸ್ತಾನಿಯ ಉಡುಪು ಆಯ್ಕೆಗೆ ಆರು ತಿಂಗಳು ತೆಗೆದುಕೊಂಡ ಬನ್ಸಾಲಿ

Sumana Upadhyaya

ಹಿಂದಿಯಲ್ಲಿ ಸಂಜಯ್ ಲೀಲಾ ಬನ್ಸಾಲಿ ಸಿನಿಮಾಗಳೆಂದರೆ ಅಲ್ಲಿ ಕಣ್ಣಿಗೆ ಹಬ್ಬ. ಮಾಧುರ್ಯದ ಹಾಡುಗಳು, ಕಣ್ಣು ಕೋರೈಸುವ ಸೆಟ್, ಮನಮೋಹಕ ದೃಶ್ಯಗಳು, ನವನವೀನ ಉಡುಗೆ ತೊಡುಗೆಗಳು ಇತ್ಯಾದಿಗಳು ಅಲ್ಲಿ ಇರುತ್ತವೆ.

ಇದೀಗ ಬಿಡುಗಡೆಗೆ ಸಿದ್ಧವಾಗಿರುವ ಬನ್ಸಾಲಿಯವರ ಬಾಜಿರಾವ್ ಮಸ್ತಾನಿ ಚಿತ್ರದಲ್ಲಿ ದೀವಾನಿ ಮಸ್ತಾನಿ ಎಂಬ ಹಾಡು ಬರುತ್ತದೆ. ಇದು ಚಿತ್ರದ ಮುಖ್ಯ ದೃಶ್ಯ. ಇದರಲ್ಲಿ ಮೂರು ಮುಖ್ಯ ನಟರಾದ ರಣವೀರ್ ಸಿಂಗ್, ದೀಪಿಕಾ ಪಡುಕೋಣೆ ಮತ್ತು ಪ್ರಿಯಾಂಕ ಚೋಪ್ರಾ ಮೂವರೂ ಬರುವ ದೃಶ್ಯವನ್ನು ಪರಿಣಾಮಕಾರಿಯಾಗಿ ಸೆರೆ ಹಿಡಿಯುವುದು ಬನ್ಸಾಲಿ ಅವರಿಗೆ ಸವಾಲಾಗಿತ್ತು.

ಈ ಹಾಡಿನ ಕೇಂದ್ರಬಿಂದು ದೀಪಿಕಾ. ಹಾಡಿನಲ್ಲಿ ಎಷ್ಟು ಸಾಧ್ಯವೋ ಅಷ್ಟು ಸುಂದರವಾಗಿ ಆಕೆಯನ್ನು ತೋರಿಸಬೇಕಾಗಿತ್ತು. ಹಾಗಾಗಿ ದೀಪಿಕಾ ತೊಡುವ ಉಡುಗೆಯನ್ನು ಆಯ್ಕೆ ಮಾಡಲು ಆರು ತಿಂಗಳು ಬೇಕಾಯಿತಂತೆ. ಹಾಡನ್ನು ಶೂಟ್ ಮಾಡಿದ್ದು ಬನ್ಸಾಲಿಯವರ ಹಿಂದಿನ ಚಿತ್ರ ಶೂಟ್ ಮಾಡಿದ್ದ ಅಯ್ಯಾನ್ ಮಹಲ್ ನಲ್ಲಿ. ದೀಪಿಕಾ ಅವರ ಉಡುಗೆ ಸೆಟ್ ನ ಬಣ್ಣಕ್ಕಿಂತ ಮೀರುವುದು ಬನ್ಸಾಲಿಯವರಿಗೆ ಬೇಕಾಗಿರಲಿಲ್ಲ. ಹಲವು ನೆರಿಗೆಗಳನ್ನು ಹೊಂದಿದ ಕೆಂಪು, ಗುಲಾಬಿ ಮತ್ತು ಚಿನ್ನದ ಬಣ್ಣದ ಬಟ್ಟೆಗಳಲ್ಲಿ ಕೊನೆಗೆ ಹಸಿರು ಬಣ್ಣದ ಶೇಡ್ ನ್ನು ಹೊಂದಿದ ಚಿನ್ನದ ಬಣ್ಣದ ಬಟ್ಟೆಯನ್ನು ಆರಿಸಲಾಯಿತು.

SCROLL FOR NEXT