ಸೋನಂ ಕಪೂರ್ - ಸಲ್ಮಾನ್ ಖಾನ್ 
ಬಾಲಿವುಡ್

ಸ್ಲಮ್‌ನಲ್ಲಿ ಸಲ್ಮಾನ್ ಖಾನ್ ದೀಪಾವಳಿ!

ದೇಶದಲ್ಲಿ ಸಹಿಷ್ಣುತೆ ಇರಲಿ, ಅಸಹಿಷ್ಣುತೆ ಇರಲಿ... ಬಾಲಿವುಡ್ ನಟ ಸಲ್ಮಾನ್ ಖಾನ್ ಸ್ಟಾರ್ ಆಗಿಯೇ ಕಾಣಿಸುತ್ತಾರೆ. ಈಗ ಸಲ್ಲು...

ದೇಶದಲ್ಲಿ ಸಹಿಷ್ಣುತೆ ಇರಲಿ, ಅಸಹಿಷ್ಣುತೆ ಇರಲಿ... ಬಾಲಿವುಡ್ ನಟ ಸಲ್ಮಾನ್ ಖಾನ್ ಸ್ಟಾರ್ ಆಗಿಯೇ ಕಾಣಿಸುತ್ತಾರೆ. ಈಗ ಸಲ್ಲು ಮುಂಬೈನ ಧಾರಾವಿ ಸ್ಲಮ್‌ನಲ್ಲಿ ದೀಪಾವಳಿ ಆಚರಿಸಲಿದ್ದಾರೆ. ಇದು ಎರಡು ರೀತಿಯ ಸಂಭ್ರಮ; ಒಂದು ನ.12ಕ್ಕೆ ತೆರೆ ಕಾಣಲಿರುವ 'ಪ್ರೇಮ್ ರತನ್ ಧನ್ ಪಾಯೋ' ಚಿತ್ರದ ಪ್ರಮೋಷನ್ ಮತ್ತು ಬೆಳಕಿನ ಹಬ್ಬದ ಸಡಗರ.

ಧಾರಾವಿ ಸ್ಲಮ್ಮಿನಲ್ಲೇ ಒಂದು ಮ್ಯೂಸಿಕ್ ಬ್ಯಾಂಡ್ ಇದೆ. ಧಾರಾವಿ ರಾಕ್ಸ್ ಎಂಬ ತಂಡವನ್ನು ಕಟ್ಟಿಕೊಂಡಿರುವ ಅಲ್ಲಿನ ಹುಡುಗರು ಅದ್ಧೂರಿಯ ಉಪಕರಣಗಳನ್ನೇನೂ ಇಟ್ಟುಕೊಂಡಿಲ್ಲ. ವೇಸ್ಟ್ ಬಕೆಟ್ ಹಳೇ ಪಾತ್ರೆ, ಸೌಟುಗಳಲ್ಲೇ ಈ ಬ್ಯಾಂಡ್‌ನ್ನು ರೂಪಿಸಿಕೊಂಡವರು. ಸಲ್ಮಾನ್ ಖಾನ್‌ನ ದೀಪಾವಳಿ ಸಂಭ್ರಮದಲ್ಲಿ 'ಧಾರಾವಿ ರಾಕ್ಸ್‌' ತಂಡವೂ ಪಾಲ್ಗೊಳ್ಳಲಿದೆ.

ಸಲ್ಲು ಪಟಾಕಿ ಸಿಡಿಸಿ, ಮಕ್ಕಳೊಂದಿಗೆ ಕುಣಿಯುವುದಿಲ್ಲವಂತೆ. ಸಲ್ಮಾನ್ ಖಾನ್ ಇವರೊಟ್ಟಿಗೆ ಉಪಹಾರ ಸೇವಿಸಲಿದ್ದಾರೆ. ಸಾಧ್ಯವಾದರೆ ಈ ಚಿತ್ರದ ನಾಯಕಿ ಸೋನಂ ಕಪೂರ್ ಸಹ ಸಲ್ಲುವಿನ ಸ್ಪೆಷೆಲ್ ದೀಪಾವಳಿಯಲ್ಲಿ ಪಾಲ್ಗೊಳ್ಳಲಿದ್ದಾರಂತೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಇಂದಿರಾ ಗಾಂಧಿ ಕೂಡ ಹೀಗೆ ಮಾಡಿರಲಿಲ್ಲ': ದೆಹಲಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯುವ ಮುನ್ನ ಅಭಿಜಿತ್ ದೀಪ್ಕೆ; ವಿಡಿಯೋ ಹಂಚಿಕೊಂಡ CJP

Delhi CJP Protest: ಅಭಿಜೀತ್ ದೀಪ್ಕೆ, ಸೌರವ್ ದಾಸ್, ಆಶುತೋಷ್ ರಂಕಾ,ಯೂಟ್ಯೂಬರ್ ಧ್ರುವ್ ರಾಠಿ ಸೇರಿ 200ಕ್ಕೂ ಹೆಚ್ಚು ಮಂದಿ ಪೊಲೀಸ್ ವಶಕ್ಕೆ; Video

CJP ಪ್ರತಿಭಟನೆ: ದೆಹಲಿ ಪೊಲೀಸರ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಕೆ!

ಸ್ಟಾರ್‌ಲಿಂಕ್ ವಿವಾದ: ಭಾರತ ವಸಾಹತಲ್ಲ- Elon Musk ಗೆ ಕಮಲ್ ಹಾಸನ್ ತಿರುಗೇಟು

'ರಾಹುಲ್ ಗಾಂಧಿ ಅವರೇ, ನಿಮ್ಮ ಉದ್ದೇಶಗಳು ಎಂದಿಗೂ ಈಡೇರಲ್ಲ': ವಿಪಕ್ಷದವರದ್ದು 'ನಗರ ನಕ್ಸಲ್' ಮನಸ್ಥಿತಿ; ನಿತಿನ್ ನಬಿನ್