ನಟ ರಣಬೀರ್ ಕಪೂರ್ ಮತ್ತು ನಟಿ ದೀಪಿಕಾ ಪಡುಕೋಣೆ 
ಬಾಲಿವುಡ್

ದೀಪಿಕಾ ನಟಿ ಭಯಂಕರ: ರಣಬೀರ್ ಕಪೂರ್

'ರಾಜನೀತಿ', 'ರಾಕ್ ಸ್ಟಾರ್', 'ಯೇ ಜವಾನಿ ಹೈ ದಿವಾನಿ', 'ಬರ್ಫಿ' ಇಂತಹ ವಿಭಿನ್ನ ಚಿತ್ರಗಳಲ್ಲಿ ವಿಭಿನ್ನ ಪಾತ್ರಗಳಲ್ಲಿ ಅಭಿನಯಿಸಿರುವ ದೀಪಿಕಾ ಪಡುಕೋಣೆ ಬಗ್ಗೆ ಅವರ ಸಹನಟ

ನವದೆಹಲಿ: 'ರಾಜನೀತಿ', 'ರಾಕ್ ಸ್ಟಾರ್', 'ಯೇ ಜವಾನಿ ಹೈ ದಿವಾನಿ', 'ಬರ್ಫಿ' ಇಂತಹ ವಿಭಿನ್ನ ಚಿತ್ರಗಳಲ್ಲಿ ವಿಭಿನ್ನ ಪಾತ್ರಗಳಲ್ಲಿ ಅಭಿನಯಿಸಿರುವ ದೀಪಿಕಾ ಪಡುಕೋಣೆ ಬಗ್ಗೆ ಅವರ ಸಹನಟ ಬಿಚ್ಚು ಮನಸ್ಸಿನಿಂದ ಪ್ರಶಂಸಿಸಿದ್ದಾರೆ. ಬಿಡುಗಡೆಯಾಗಬೇಕಿರುವ 'ತಮಾಶಾ' ಚಿತ್ರದ ಸಹನಟ ರಣಬೀರ್ ಕಪೂರ್, ತಮ್ಮ ಮಾಜಿ ಗರ್ಲ್ ಫ್ರೆಂಡ್ ದೀಪಿಕಾ ಪಡುಕೋಣೆ ನಟಿಯಾಗಿ ಭಯ ಹುಟ್ಟಿಸುತ್ತಾರೆ ಎಂದಿದ್ದಾರೆ.

"ನಟಿಯಾಗಿ ದೀಪಿಕಾ ಉನ್ನತಿ ಅದ್ಭುತ. ಅವರ ಜೊತೆಗೆ ಕೆಲಸ ಮಾಡಿದಾಗಲೆಲ್ಲಾ ಸಮಾಧಾನವಾಗುತ್ತದೆ. ಅವರನ್ನು ನಟಿಯಂತೆ ಕಾಣುತ್ತೇನೆ ಮತ್ತು ನಟಿಯಾಗಿ ಅವರು ನನಗೆ ಭಯ ಹುಟ್ಟಿಸುತ್ತಾರೆ" ಎಂದು ರಣಬೀರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಈ ಇಬ್ಬರೂ ನಟರು ಈ ಹಿಂದ 'ಬಚನ ಎ ಹಸೀನೋ' ಮತ್ತು 'ಯೇ ಜವಾನಿ ಹೈ ದಿವಾನಿ' ಸಿನೆಮಾಗಳಲ್ಲಿ ನಟಿಸಿದ್ದಾರೆ.

"ನಾನು ಅವರೊಂದಿಗೆ 'ಬಚನ ಎ ಹಸೀನೋ' ಚಿತ್ರದಲ್ಲಿ ನಟಿಸಿದಾಗ ಅವರು ಈಗಲಿಗಿಂತಲೂ ವಿಭಿನ್ನವಾಗಿದ್ದರು. ನಾಚಿಕೆ ಸ್ವಭಾವ ಮತ್ತು ತಮ್ಮೊಳಗೆ ಹುದುಗಿಕೊಂಡುಬಿಡುತ್ತಿದ್ದರು. ನಂತರ ಅವರೊಂದಿಗೆ 'ಯೇ ಜವಾನಿ ಹೈ ದಿವಾನಿ'ಯಲ್ಲಿ ಕೆಲಸ ಮಾಡಿದೆ. ಆಗ ಅವರಿಗೆ ಜೀವನ ಮತ್ತು ಸಿನೆಮಾದ ಮೇಲೆ ಹೆಚ್ಚಿನ ಹಿಡಿತ ಬಂದಿತ್ತು" ಎನ್ನುತ್ತಾರೆ ನಟ.

'ತಮಾಶಾ' ಸಿನೆಮಾ ನವೆಂಬರ್ ೨೭ರಂದು ಬಿಡುಗಡೆಯಾಗಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಎಸ್ ಜಾನಕಿ ಇನ್ನಿಲ್ಲ: ದಕ್ಷಿಣ ಭಾರತದ ಗಾನ ಕೋಗಿಲೆ ಮೈಸೂರಿನಲ್ಲಿ ನಿಧನ!

5th T20I: ಬಟ್ಲರ್, ಬ್ರೂಕ್ ಅರ್ಭಟ; ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಹೀನಾಯ ಸೋಲು, ಸರಣಿ ವೈಟ್‌ವಾಶ್

ಖಿನ್ನತೆಗೆ ಜಾರಿದ್ದೆ, ಗುಣಪಡಿಸಲು ಮಗು ಮಾಡಿಕೊಳ್ಳಿ ಎಂದು ವೈದ್ಯರು ಹೇಳಿದ್ರು; ಹುಡುಗನ ಎಲ್ಲಿ ಹುಡುಕಲಿ?: Endometriosis ಭಯಾನಕತೆ ಬಿಚ್ಚಿಟ್ಟ ಶಮಿತಾ ಶೆಟ್ಟಿ

17 ಭಾಷೆಗಳಲ್ಲಿ 48 ಸಾವಿರ ಹಾಡುಗಳಿಗೆ ಧ್ವನಿ: 2013ರಲ್ಲಿ ಪದ್ಮಭೂಷಣ ತಿರಸ್ಕರಿಸಿದ್ದ ದಿಟ್ಟ ಗಾಯಕಿ ಎಸ್ ಜಾನಕಿ!

ಪುಣೆಯಲ್ಲಿ ತ್ಯಾಜ್ಯದ ಗುಡ್ಡ ಬಿದ್ದು ಕಟ್ಟಡ ಕುಸಿತ: 8 ಮಂದಿ ಸಾವು; 14 ಜನರ ರಕ್ಷಣೆ, ಒಬ್ಬರು ಇನ್ನೂ ನಾಪತ್ತೆ!