ಅಮಿತಾಬ್ ಬಚ್ಚನ್ 'ವಾಜಿರ್' ಸಿನೆಮಾ ಟ್ರೇಲರ್ ಬಿಡುಗಡೆ
ಅಮಿತಾಬ್ ಬಚ್ಚನ್, ಫರ್ಹಾನ್ ಅಕ್ತರ್ ಮತ್ತು ನೀಲ್ ನಿತಿನ್ ಮುಖರ್ಜಿ ನಟಿಸಿರುವ ಆಕ್ಷನ್ ಡ್ರಾಮ 'ವಾಜಿರ್' ಸಿನೆಮಾದ ಟ್ರೇಲರ್ ಬುಧವಾರ ಅನಾವರಣಗೊಂಡಿದೆ.
ಮುಂಬೈ: ಅಮಿತಾಬ್ ಬಚ್ಚನ್, ಫರ್ಹಾನ್ ಅಕ್ತರ್ ಮತ್ತು ನೀಲ್ ನಿತಿನ್ ಮುಖರ್ಜಿ ನಟಿಸಿರುವ ಆಕ್ಷನ್ ಡ್ರಾಮ 'ವಾಜಿರ್' ಸಿನೆಮಾದ ಟ್ರೇಲರ್ ಬುಧವಾರ ಅನಾವರಣಗೊಂಡಿದೆ.
ಶತ್ರು ಪಾತ್ರದಲ್ಲಿರುವ ನೀಲ್ ಮಣಿಸಲು ಫರ್ಹಾನ್, ಅಮಿತಾಬ್ ಅವರ ತಂಡಕ್ಕೆ ಸೇರುವುದನ್ನು ಟ್ರೇಲರ್ ಬಿಚ್ಚಿಟ್ಟಿದೆ.
'ವಾಜಿರ್' ನಲ್ಲಿ ಜಾನ್ ಅಬ್ರಹಾಂ ಮತ್ತು ಅದಿತಿ ರಾವ್ ಹೈದಾರಿ ಕೂಡ ಮುಖ್ಯ ಪಾತ್ರದಲ್ಲಿದ್ದಾರೆ.
ಬಿಜಾಯ್ ನಂಬಿಯಾರ್ ಈ ಸಿನೆಮಾವನ್ನು ನಿರ್ದೇಶಿಸಿದ್ದು ವಿಧು ವಿನೋದ್ ಚೋಪ್ರಾ ಸಿನೆಮಾದ ಸಹ ನಿರ್ಮಾಪಕರು. ಸಿನೆಮಾ ಮುಂದಿನ ವರ್ಷ ಜನವರಿ ೮ಕ್ಕೆ ತೆರೆ ಕಾಣಲಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.