ಬಜರಂಗಿ ಭಾಯಿಜಾನ್ ಚಿತ್ರದ ಸ್ಟಿಲ್ 
ಬಾಲಿವುಡ್

'ಶೇ.2ರಷ್ಟು ಭಾರತೀಯರು ಮಾತ್ರ 'ಬಜರಂಗಿ ಭಾಯಿಜಾನ್' ನೋಡಿದ್ದಾರೆ'

ಹಣ ಗಳಿಕೆಯಲ್ಲಿ ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದಿದ್ದ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರ 'ಬಜರಂಗಿ ಭಾಯಿಜಾನ್' ಸಿನಿಮಾವನ್ನು ಶೇ.2ರಷ್ಟು...

ಕೊಚ್ಚಿ: ಹಣ ಗಳಿಕೆಯಲ್ಲಿ ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದಿದ್ದ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರ 'ಬಜರಂಗಿ ಭಾಯಿಜಾನ್' ಸಿನಿಮಾವನ್ನು ಶೇ.2ರಷ್ಟು ಭಾರತೀಯರು ಮಾತ್ರ ಚಿತ್ರಮಂದಿರದಲ್ಲಿ ನೋಡಿದ್ದಾರೆ ಎಂದು ಸಿನಿಮಾ ಚೈನ್ ಅಧಿಕಾರಿಗಳು ತಿಳಿಸಿದ್ದಾರೆ.

ಸುಮಾರು 130 ಕೋಟಿ ಭಾರತೀಯರ ಪೈಕಿ ಕೇವಲ ಮೂರು ಕೋಟಿ 21 ಲಕ್ಷ ಭಾರತೀಯರು ಮಾತ್ರ 'ಬಜರಂಗಿ ಭಾಯಿಜಾನ್' ಚಿತ್ರವನ್ನು ಚಿತ್ರಮಂದಿರದಲ್ಲಿ ನೋಡಿದ್ದಾರೆ. ಆದರೆ ವರದಿಗಳ ಪ್ರಕಾರ, ಕಳೆದ ತಿಂಗಳು ಭಾರತದಾದ್ಯಂತ 74.5 ಮಿಲಿಯನ್ ಜನ ಟಿವಿಯಲ್ಲಿ ಈ ಸಿನಿಮಾವನ್ನು ನೋಡಿದ್ದಾರೆ.

'ಕೇವಲ ಶೇ.2ರಷ್ಟು ಭಾರತೀಯರು ಚಿತ್ರಮಂದಿರಕ್ಕೆ ಬಂದು ಬಜರಂಗಿ ಭಾಯಿಜಾನ್ ಸಿನಿಮಾ ನೋಡಿದರೂ ಚಿತ್ರ 300 ಕೋಟಿ ರುಪಾಯಿ ಲಾಭ ಗಳಿಸಿದೆ. ಅದನ್ನು ನಾವು ಕನಿಷ್ಟ ಶೇ.5ಕ್ಕೆ ಹೆಚ್ಚಿಸಿದ್ದರೆ ಚಿತ್ರಕ್ಕೆ ಸಾಕಷ್ಟು ಆದಾಯ ಬರುತ್ತಿತ್ತು' ಎಂದು ನಿರ್ದೇಶಕ ಹಾಗೂ ಕಾರ್ನಿನಾಲ್ ಸಿನಿಮಾಸ್ ಸಿಇಒ ಪಿ.ವಿ.ಸುನೀಲ್ ಅವರು ಹೇಳಿದ್ದಾರೆ.

2014ರಲ್ಲಿ ಬಿಡುಗಡೆಯಾದ ಸಲ್ಮಾನ್ ಖಾನ್ ರ ಕಿಕ್ ಚಿತ್ರ 231. 86 ಕೋಟಿ ಗಳಿಸಿ ದಾಖಲೆ ಬರೆದಿತ್ತು. 2015ರಲ್ಲಿ ತೆರೆಕಂಡ ಬಜರಂಗಿ ಭಾಯಿಜಾನ್ 300 ಕೋಟಿ ಗಳಿಸುವ ಮೂಲಕ ಹಳೆಯ ದಾಖಲೆಯನ್ನು ಮುರಿದಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಉಪ ಚುನಾವಣೆ ಫಲಿತಾಂಶ| ಅಸ್ಸಾಂ, ಪ.ಬಂಗಾಳ, ತಮಿಳುನಾಡು, ಪುದುಚೇರಿಯ ಆರು ಕ್ಷೇತ್ರಗಳಲ್ಲಿ ಮತ ಎಣಿಕೆ ಪ್ರಗತಿಯಲ್ಲಿ

ಬಾಲಿವುಡ್ ನಟ ನಾನಾ ಪಾಟೇಕರ್ ನಿಧನಕ್ಕೆ ಬಿಗ್ ಟ್ವಿಸ್ಟ್: ಅಸಹಜ ಸಾವು ಕೇಸ್ ದಾಖಲಿಸಿದ ಗೋವಾ ಪೊಲೀಸರು!

ರೈಲಿನಲ್ಲಿ 'ನನ್ನ ಸುತ್ತಲೂ ಬರೀ ಪುರುಷರೇ ಇದ್ದಾರೆ': ಆಂಧ್ರದಲ್ಲಿ ಶವವಾಗಿ ಪತ್ತೆಯಾದ ಡ್ಯಾನ್ಸರ್‌ ಕೊನೆಯ ಸಂದೇಶ!

ಬೇಕಾದರೆ ನನ್ನ ವಿರುದ್ಧವೂ ಫಾರ್ಮ್‌ - 7 ಸಲ್ಲಿಸಿ: ಕಾಂಗ್ರೆಸ್'ಗೆ BJP ಸಂಸದ ಯದುವೀರ್ ಒಡೆಯರ್ ಸವಾಲು

Sting operation ಮೂಲಕ ನಿಮ್ಮನ್ನು ಸಿಲುಕಿಸಲು ಯತ್ನಿಸಿರುವುದು ನಿಜವೇ ಆಗಿದ್ದರೆ ತನಿಖೆಗೆ ಆದೇಶಿಸಿ: ಸಿಎಂ ಡಿಕೆ.ಶಿವಕುಮಾರ್'ಗೆ HDK ಸವಾಲು