ಮರಾಠಿ ಚಿತ್ರದಲ್ಲಿ ಗೀತಾ ಬಾಲಿಯಾಗಿ ವಿದ್ಯಾ ಬಾಲನ್ ಅವರ ಮೊದಲ ನೋಟ 
ಬಾಲಿವುಡ್

ಗೀತಾ ಬಾಲಿಯಾಗಿ ವಿದ್ಯಾ ಬಾಲನ್..

ಡರ್ಟಿ ಪಿಕ್ಚರ್ ಖ್ಯಾತಿಯ ಬಾಲಿವುಡ್ ಬೆಡಗಿ ವಿದ್ಯಾ ಬಾಲನ್ ಇದೀಗ ಮೊದಲ ಸಲ ಮರಾಠಿ ಭಾಷೆಯ ಚಿತ್ರವೊಂದರಲ್ಲಿ...

ಡರ್ಟಿ ಪಿಕ್ಚರ್ ಖ್ಯಾತಿಯ ಬಾಲಿವುಡ್ ಬೆಡಗಿ ವಿದ್ಯಾ ಬಾಲನ್ ಇದೀಗ ಮೊದಲ ಸಲ ಮರಾಠಿ ಭಾಷೆಯ ಚಿತ್ರವೊಂದರಲ್ಲಿ ನಟಿಸುತ್ತಿದ್ದಾರೆ. ಹಿಂದಿ ಚಿತ್ರರಂಗದ ಜನಪ್ರಿಯ ನಾಯಕಿ ಮತ್ತು ನಟ ಶಮ್ಮಿ ಕಪೂರ್‌ ಅವರ ಪತ್ನಿಯಾಗಿದ್ದ ಗೀತಾ ಬಾಲಿ ಅವರ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಮರಾಠಿಯಲ್ಲಿ ತಯಾರಾಗುತ್ತಿರುವ "ಏಕ್‌ ಅಲ್ಬೆಲಾ' ಚಿತ್ರದಲ್ಲಿ ವಿದ್ಯಾ ನಟಿಸುತ್ತಿದ್ದಾರೆ. ಈ ಚಿತ್ರ ಹಿಂದಿ ಮತ್ತು ಮರಾಠಿ ನಟ-ನಿರ್ಮಾಪಕ-ನಿರ್ದೇಶಕ ಭಗವಾನ್‌ ದಾದಾ ಅವರ ಕುರಿತದ್ದಾಗಿದೆ.'ಅವರ ಕುರಿತು ಶೇಖರ ಸರ್ತಾಂದೆಲ್‌ ಚಿತ್ರ ನಿರ್ಮಿಸುತ್ತಿದ್ದಾರೆ.

ಭಗವಾನ್‌ ಕುರಿತಾದ ಚಿತ್ರದಲ್ಲಿ ಗೀತಾ ಬಾಲಿ ಅವರ ವಿಷಯವಿಲ್ಲದಿದ್ದರೆ ಹೇಗೆ ಎಂದು ಗೀತಾ ಬಾಲಿಯ ಪಾತ್ರ ಕೂಡಾ ಚಿತ್ರದಲ್ಲಿದೆಯಂತೆ. ಮರಾಠಿ ನಟ ಮಂಗೇಶ್‌ ದೇಸಾಯಿ ಅವರು ಭಗವಾನ್‌ ಪಾತ್ರ ಮಾಡಿದರೆ, ವಿದ್ಯಾ ಬಾಲನ್‌ ಅವರು ಗೀತಾ ಬಾಲಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಈ ಚಿತ್ರದಲ್ಲಿ ವಿದ್ಯಾ ಬಾಲನ್‌, ಗೀತಾ ಬಾಲಿಯಾಗಿ ವಿಶೇಷ ಮತ್ತು ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 50ರ ದಶಕದ ನಟಿಯ ಮೇಕಪ್‌, ಕಾಸ್ಟೂಮ್‌ಗಳನ್ನು ತಕ್ಕ ಹಾಗೆ ವಿದ್ಯಾಗೆ ಡಿಸೈನ್‌ ಮಾಡಲಾಗಿದೆ. ವಿದ್ಯಾಧರ್‌ ಬಟ್ಟೆ ಮೇಕಪ್‌ ಮಾಡಿದರೆ, ಸುಬರ್ಣ ರೈ ಚೌಧರಿ ಅವರು ಕಾಸ್ಟೂಮ್‌ಗಳನ್ನು ಸಿದ್ಧಪಡಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT