ಪಾಕಿಸ್ತಾನದ ಮಹಿಳಾ ಸ್ಫುರದ್ರೂಪಿ ರಾಜಕಾರಣಿ ಯಾರು? ಹಿನಾ ರಬ್ಬಾನಿಖರ್ ಎಂದು ನೀವನ್ನುತ್ತೀರಿ. 2 ವರುಷದ ಹಿಂದೆ ಈಕೆ ಭಾರತಕ್ಕೆ ಬಂದು ಕೊಟ್ಟ ಪೋಸು, ನಂತರ ಪಾಕಿಸ್ತಾನದಲ್ಲಿ ಇವಳು ಎಬ್ಬಿಸಿದ ಅಕ್ರಮ ಸಂಬಂಧದ ಬಿರುಗಾಳಿಗಳೆಲ್ಲ ಈ ಹೊತ್ತಿಗೆ ನೆನಪಾಗುತ್ತವೆ.
ಭಾರತದ 'ದೈನಿಕ್ ಭಾಸ್ಕರ್' ಸೇರಿದಂತೆ ಅಮೆರಿಕದ ಪ್ರಖ್ಯಾತ 'ಬಸಲ್' ಮ್ಯಾಗಜಿನ್‍ಗಳೂ ಈಕೆಯನ್ನು ಟಾಪ್ 1 ಅತಿ ಸುಂದರಿ ರಾಜಕಾರಣಿಯೆಂದು ಘೋಷಿಸಿದ್ದಾಗಿದೆ. ಆದರೆ, ಪಾಕಿಸ್ತಾನದ ವೆಬ್‍ಸೈಟ್ 'ಆ್ಯರಿನ್ಯೂಸ್.ಕಾಂ' ಪಟ್ಟಿಯಲ್ಲಿ ಇವಳಿಗೀಗ ನಂ.1 ಸ್ಥಾನ ಸಿಕ್ಕಿಲ್ಲ! ಹಿನಾ ರಬ್ಬಾನಿಗಿಂತ ಸುಂದರಿ ಮತ್ತು ಸ್ಟೈಲಿಷ್ ರಾಜಕಾರಣಿಗಳು ಪಾಕ್‍ನಲ್ಲಿದ್ದಾರಂತೆ.
ಹಾಗಾದರೆ, ಹಿನಾಳ ಸ್ಥಾನ ಕಸಿದ ಆ ಸುಂದರ ಹೆಣ್ಣಾದರೂ ಯಾರು? ಇಮ್ರಾನ್‍ಖಾನ್ ಮೊನ್ನೆ ಮೊನ್ನೆಯಷ್ಟೇ ಕೈಹಿಡಿದ ರೆಹಮ್ ಖಾನ್! ಈ ರೆಹಮ್ ಖಾನ್ ಯಾರೆಂದು ಪಾಕಿನಲ್ಲಿ ಎಲ್ಲರಿಗೂ ಗೊತ್ತು. ಆದರೆ, ನಮ್ಗೆ ಮಾತ್ರ ಗೊತ್ತಿಲ್ಲ. ಆಜ್ ಟಿವಿ, ಲೀಗಲ್ ಟಿವಿ, ಪಿಟಿವಿ ಸೇರಿದಂತೆ ಡಾನ್ ಪತ್ರಿಕೆಯಲ್ಲೂ ಕೆಲಸ ಮಾಡಿರುವ ಪತ್ರಕರ್ತೆ. ಬಿಬಿಸಿಯಲ್ಲೂ ಚುಟುಕು ಅವ„ಯನ್ನು ಕಳೆದಿದ್ದಾಳೆ.
ಆದರೆ ಇವಳು ಯಾವತ್ತೂ ಸಕ್ರಿಯ ರಾಜಕಾರಣಿ ಆಗಿಲ್ಲ. ವೆಬ್‍ಸೈಟ್ ಯಾಕಾದರೂ ಇವಳ ಹೆಸರನ್ನು ತಂದು ಹಿನಾಗೆ ಹೊಟ್ಟೆಕಿಚ್ಚು ತರಿಸಿದೆಯೇ ಗೊತ್ತಿಲ್ಲ. ರೆಹಮ್ ಖಾನ್ ಕೂಡ ಮುಂದೆ ರಾಜಕಾರಣಿ ಆಗ್ತಾಳಾ ಎಂಬುದಕ್ಕೂ ಸ್ಪಷ್ಟತೆಯಿಲ್ಲ. ಈ ರೆಹಮ್ ಗೆ 42 ವರುಷವಂತೆ. ಈಗಿವಳಿಗೆ ಸಿನಿಮಾಗಳನ್ನು ಪ್ರೊಡ್ಯೂಸ್ ಮಾಡುವ ಆಸೆ ಹಿಡಿದಿದೆ. ಅಂದಹಾಗೆ, ಈ ವೆಬ್‍ಸೈಟಿನ ಪಟ್ಟಿಯಲ್ಲಿ 2ನೇ ಸ್ಥಾನ ನವಾಜ್ ಶರೀಫ್ ರ ಮಗಳು ಮಾರ್ಯಮ್ ಗೆ ಸಿಕ್ಕಿದೆ. 3ನೇ ಸ್ಥಾನದಲ್ಲಿ ಹಿನಾ ಇದ್ದಾಳೆ!
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos