ಸುಲ್ತಾನ್ ಚಿತ್ರದಲ್ಲಿ ಸಲ್ಮಾನ್ ಫಸ್ಟ್ ಲುಕ್
ಯಶ್ ರಾಜ್ ಫಿಲಂನ ಸುಲ್ತಾನ್ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದ್ದು, ಸಲ್ಮಾನ್ ಖಾನ್ ಚಿತ್ರದಲ್ಲಿ ಬಾಕ್ಸರ್ ರೀತಿ ಕಾಣುತ್ತಿದ್ದಾರೆ...
ಯಶ್ ರಾಜ್ ಫಿಲಂನ ಸುಲ್ತಾನ್ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದ್ದು, ಸಲ್ಮಾನ್ ಖಾನ್ ಚಿತ್ರದಲ್ಲಿ ಬಾಕ್ಸರ್ ರೀತಿ ಕಾಣುತ್ತಿದ್ದಾರೆ.
ಇತ್ತೀಚೆಗಷ್ಟೇ ಪ್ರೇಮ್ ರತನ್ ದನ್ ಪಾಯೋ ಚಿತ್ರದ ಟ್ರೈಲರ್ ಬಿಡುಗಡೆಗೊಂಡು ಅಭಿಮಾನಿಗಳಿಂದ ಉತ್ತಮ ಪ್ರಶಂಸ್ತೆ ದೊರಕಿತ್ತು. ಈ ಮಧ್ಯೆ ಟ್ವೀಟರ್ ನಲ್ಲಿ ತಮ್ಮ ಸುಲ್ತಾನ್ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಿದ್ದಾರೆ.
ತಲೆ ಕೂದಲು ಮತ್ತು ಮೀಸೆಯನ್ನು ನುಣ್ಣಗೆ ಕತ್ತರಿಸಿ ಹ್ಯಾಂಗ್ರಿ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಪೋಸ್ಟರ್ ನೋಡುತ್ತಿದ್ದರೆ, ಚಿತ್ರದಲ್ಲಿ ಸಲ್ಮಾನ್ ಖಾನ್ ಓರ್ವ ಬಾಕ್ಸರ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.
ಯಶ್ ರಾಜ್ ಬ್ಯಾನರ್ನಲ್ಲಿ ‘ಸುಲ್ತಾನ್’ ಸಲ್ಲುಗೆ ಎರಡನೇ ಚಿತ್ರ. ಈ ಮುಂಚೆ ‘ಏಕ್ ಥಾ ಟೈಗರ್’ ನಂತಹ ಬ್ಲಾಕ್ಬಾಸ್ಟರ್ ಹಿಟ್ ನೀಡಿದ್ದ ಯಶ್ ರಾಜ್ ಫಿಲಂ ಜೊತೆ ಮತ್ತೊಮ್ಮೆ ಸಲ್ಲು ಕೈ ಜೋಡಿಸುತ್ತಿದ್ದು, ಸದ್ಯ ‘ಭಜರಂಗಿ ಭಾಯ್ಜಾನ್’ ಮತ್ತು ‘ಪ್ರೇಮ್ ರತನ್ ಧನ್ ಪಾಯೋ’ ಪ್ರಮೋಷನ್ನಲ್ಲಿ ತೊಡಗಿಕೊಂಡಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.