ಆಲಿಯಾ ಭಟ್ ಈಗ ಬಯೋಪಿಕ್‍ನಲ್ಲಿ ನಟಿಸಲು ಉತ್ಸುಕಳಾಗಿದ್ದಾಳೆ? ಯಾರ ಮೇಲಿನ ಬಯೋಪಿಕ್ ಇರಬಹುದು, ಗೆಸ್ ಮಾಡಿ. ಅವರು ಭಾರತದವರಲ್ಲ. ಪಾಕಿಸ್ತಾನದ ಹೆಸರಾಂತ ಪಾಪ್‍ತಾರೆ ನಾಝಿಯಾ ಹಾಸನ್ ಕುರಿತಾದದ್ದು.
ತನ್ನ ಬಗೆಗಿನ ಸಿಲ್ಲಿ ಜೋಕುಗಳನ್ನು ಒಂದೊಂದಾಗಿಯೀ ಬದಿಗೊತ್ತುತ್ತಿರುವ ಆಲಿಯಾ, ತಾನೊಬ್ಬಳು ಗಂಭಿೀರ ನಟಿ ಎನ್ನುವುದನ್ನೀಗ ಸಾಬೀತು ಮಾಡ್ತಿದ್ದಾಳೆ. 35 ವರುಷದೊಳಗೇ ಸಂಗೀತಲೋಕದಲ್ಲಿ ಅಗಾಧ ಸಾಧನೆಗೈದು ಇಹಲೋಕ ತ್ಯಜಿಸಿದ ನಾಝಿಯಾಳ ಹಾಡುಗಳಂದ್ರೆ ಆಲಿಯಾಗೆ ತುಂಬಾ ಇಷ್ಟವಂತೆ.
ಮೊನ್ನೆ ಮುಂಬೈನಲ್ಲಿ `ಶಾಂದಾರ್' ಸಿನಿಮಾದ ಪ್ರೊಮೋಶನ್‍ನಲ್ಲಿ ಈ ಗುಟ್ಟನ್ನು ಬಿಚ್ಚಿಟ್ಟಳು. ನಾಝಿಯಾ ಮೇಲೆ ಸೂಕ್ತ ಕತೆ ಸಿಕ್ಕರೆ ತಾನು ನಟಿಸಲು ರೆಡಿ ಎಂದಿದ್ದಾಳೆ ಆಲಿಯಾ. ನಾಝಿಯಾ ಕೇವಲ ಪಾಕಿಗಲ್ಲ, ನಮಗೂ ಪರಿಚಿತಳೇ. ಫಿರೋಜ್ ಖಾನ್, ವಿನೋದ್ ಖನ್ನಾ ನಟಿಸಿದ `ಕುರ್ಬಾನಿ'ಯಲ್ಲಿನ `ಆಪ್ ಜೈಸಾ ಕೋಯಿ' ಹಾಡನ್ನು ಹಾಡಿದ್ದು ಇವಳೇ. ನಾಝಿಯಾ ಬಾಲಿವುಡ್‍ಗಾಗಿ ಹಾಡಿದ ಮೊದಲ ಹಾಡಿದು.
ಶ್ವಾಸಕೋಶ ಕ್ಯಾನ್ಸರ್‍ನಿಂದ ಬಳಲುತ್ತಿದ್ದ ಈ ಸುಂದರಿ ಗಾಯಕಿ 2000ದಲ್ಲಿ ಸಾವನ್ನಪ್ಪಿದಳು. ಬಯೋಪಿಕ್ ನಲ್ಲಿ ನಟಿಸ್ತೀರಾ ಅಂತ ಯಾರೋ ಕೇಳಿದಾಗ, ಆಲಿಯಾ ಈ ಗಾಯಕಿಯನ್ನು ಮತ್ತೆ ನೆನಪಿಸಿದಳಷ್ಟೇ!