ಬಾಲಿವುಡ್ ನಟ ಅಜಿತ್ ಸಿಂಗ್ ಡಿಯೋಲ್ ನಿಧನ 
ಬಾಲಿವುಡ್

ಬಾಲಿವುಡ್ ನಟ ಅಜಿತ್ ಸಿಂಗ್ ಡಿಯೋಲ್ ನಿಧನ

ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಬಾಲಿವುಡ್ ನಟ ಹಾಗೂ ನಿರ್ದೇಶಕ ಅಜಿತ್ ಸಿಂಗ್ ಡಿಯೋಲ್ ಅವರು ಮುಂಬೈನಲ್ಲಿ ಶುಕ್ರವಾರ ಕೊನೆಯುಸಿರೆಳೆದಿದ್ದಾರೆಂದು ವರದಿಗಳಿಂದ ತಿಳಿದುಬಂದಿದೆ...

ಮುಂಬೈ: ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಬಾಲಿವುಡ್ ನಟ ಹಾಗೂ ನಿರ್ದೇಶಕ ಅಜಿತ್ ಸಿಂಗ್ ಡಿಯೋಲ್ ಅವರು ಮುಂಬೈನಲ್ಲಿ ಶುಕ್ರವಾರ ಕೊನೆಯುಸಿರೆಳೆದಿದ್ದಾರೆಂದು ವರದಿಗಳಿಂದ ತಿಳಿದುಬಂದಿದೆ

ಕಳೆದ ಹಲವು ದಿನಗಳಿಂದಲೂ ಮೂತ್ರಕೋಶ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದ ಅಜಿತ್ ಡಿಯೋಲ್ ಅವರು ಕಳೆದೆರಡು ದಿನಗಳ ಹಿಂದಷ್ಟೇ ಮುಂಬೈ ನ ಜುಹುವಿನ ಸನ್ ರಿಡ್ಜ್ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ಸಂಜೆ ಸುಮಾರು 6.30ರ ಸಮಯಕ್ಕೆ ನಿಧನರಾಗಿದ್ದಾರೆಂದು ತಿಳಿದುಬಂದಿದೆ.

ಅಜಿತ್ ಡಿಯೋಲ್ ಅವರು ಕೊನೆಯುಸಿರೆಳೆಯುವಾಗ ಪುತ್ರ ಅಭಯ್ ಡಿಯೋಲ್, ಸಹೋದರ ಧರ್ಮೇಂದ್ರ, ಮತ್ತವರ ಪುತ್ರ ನಟ ಸನ್ನಿ ಡಿಯೋಲ್ ಹಾಜರಿದ್ದರು. ಅಜಿತ್ ಡಿಯೋಲ್ ಅವರು ಖೋಟೆ ಸಿಕ್ಕೆ (1974) ಮೆಹರ್ಬಾನಿ (1982) ಮತ್ತು ಬಸ್ರಾತ್ (1995) ಎಂಬ ಚಿತ್ರಗಳಲ್ಲಿ ನಟಿಸಿದ್ದರು.

ಇಂದು ಬೆಳಿಗ್ಗೆ 9.00 ಗಂಟೆ ವೇಳೆಗೆ ಜುಹುವಿನ ಪವನ್ ಹಂಸ್ ನಲ್ಲಿ ಅಜಿತ್ ಡಿಯೋಲ್ ಅವರ ಅಂತ್ಯಸಂಸ್ಕಾರ ನಡೆದಿದ್ದು, ಅಜಿತ್ ಡಿಯೋಲ್ ಅವರ ಸಾವಿಗೆ ಇಡೀ ಬಾಲಿವುಡ್ ಚಿತ್ರರಂಗ ಕಂಬನಿ ಮಿಡಿದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!