ಕರೀನಾ ಕಪೂರ್, ರ್ಸೈಫ್ ಅಲಿಖಾನ್
ಇಷ್ಟು ಬೇಗ ಮಕ್ಕಳನ್ನು ಪಡೆಯುವ ಇಚ್ಛೆ ಇಲ್ಲ ಎಂದು ಬಾಲಿವುಡ್ ನಟ ಸೈಪ್ ಅಲಿಖಾನ್ ಹೇಳಿದ್ದಾರೆ.
ಬಾಲಿವುಡ್ ನಟಿ ಕರೀನಾ ಕಪೂರ್ ಅವರನ್ನು ವಿವಾಹವಾಗಿರುವ ನಟ ಸೈಫ್ ಅಲಿಖಾನ್, ಕರೀನಾ ಕಪೂರ್ ಮಗುವನ್ನು ಹಡೆಯಲು ಸಿದ್ಧಳಾದಾಗ ಆ ಬಗ್ಗೆ ಯೋಚಿಸುವೆ. ಇನ್ನು ಎರಡು ಮೂರು ವರ್ಷಗಳ ಕಾಲ ಆಲೋಚನೆ ಮಾಡುವುದಿಲ್ಲ ಎಂದು ಹೇಳಿದ್ದಾರೆ.
ಸೈಫ್ ಅಲಿಖಾನ್ ಮೊದಲ ಪತ್ನಿಗೆ ಮಗಳು ಸಾರಾ, ಮಗ ಇಬ್ರಾಹಿಂ ಇಬ್ಬರು ಮಕ್ಕಳಿದ್ದು, ಅಮ್ರಿತಾ ಸಿಂಗ್ ಸೈಫ್ ಗೆ ವಿಚ್ಚೇದನ ಪಡೆದಿದ್ದಾರೆ. ಇದಾದ ಎರಡು ವರ್ಷಗಳ ಬಳಿಕ 2012ರಲ್ಲಿ ಕರೀನಾ ಕಪೂರ್ ನನ್ನು ಸೈಫ್ ವರಿಸಿದ್ದರು.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿರುವ ಅವರು, ಕರೀನಾ ಬಾಲಿವುಡ್ ಚಿತ್ರರಂಗದಲ್ಲಿ ಇನ್ನೂ ಸಕ್ರಿಯರಾಗಿದ್ದಾರೆ. ವಿವಾಹದ ಬಳಿಕವೂ ಅವರಿಗೆ ಹತ್ತು ಹಲವು ಅವಕಾಶಗಳು ಅರಸಿಕೊಂಡು ಬರುತ್ತಿವೆ. ಈಗಾಗಲೇ ಕೆಲ ಚಿತ್ರಗಳನ್ನು ಕರೀನಾ ಒಪ್ಪಿಕೊಂಡಿರುವ ಕಾರಣ ಸದ್ಯ ಮಗುವಿನ ಕುರಿತು ಯೋಚಿಸುತ್ತಿಲ್ಲವೆಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics