ಬಾಲಿವುಡ್

ಕರಣ್ ಚಿತ್ರದಲ್ಲಿ ಆತಿಯಾ

Vishwanath S
ಆತಿಯಾ ಶೆಟ್ಟಿಗೆ ಒಳ್ಳೆಯ ಓಪನಿಂಗ್ ಸಿಕ್ಕಿದೆ. `ಹೀರೋ' ರಿಮೇಕ್‍ನಲ್ಲಿ ಸೂರಜ್ ಪಾಂಚೋಲಿಯ ಜತೆ ನಟಿಸಿದ್ದು ಬಾಲಿವುಡ್‍ನ ಗಮನ ಸೆಳೆದಿದೆ. 
ಹೀರೋ ಸಾಕಷ್ಟು ಗಳಿಕೆಯನ್ನೂ ಮಾಡುತ್ತಿದೆ. ಆದರೆ ಹೀರೋ ರಿಮೇಕ್. ಈಕೆಯ ಮುಂದಿನ ಚಿತ್ರ ಕೂಡ ರಿಮೇಕ್ ಆಗುವ ಸಾಧ್ಯತೆಗಳು ದಟ್ಟವಾಗಿವೆ. ಈಕೆಯನ್ನು ಹಾಕಿಕೊಂಡು ಚಿತ್ರ ಮಾಡುವ ಇರಾದೆಯನ್ನು ಕರಣ್ ಜೋಹರ್ ವ್ಯಕ್ತಪಡಿಸಿದ್ದಾನಂತೆ. ಈಕೆ ಒಪ್ಪಿದರೆ, ಈಕೆಗೊಪ್ಪುವ ಹೀರೋನನ್ನು ಮುಂದೆ ಹುಡುಕಲಾಗುತ್ತದಂತೆ. 
ಒಂದು ಮೂಲದ ಪ್ರಕಾರ, ಕರಣ್ ಮಾಡುತ್ತಿರುವುದು 'ರಾಮ್ ಲಖನ್' ಚಿತ್ರದ ರಿಮೇಕ್. ಇದರಲ್ಲಿ ಮಾಧುರಿ ದೀಕ್ಷಿತ್ ಮಾಡಿದ ಪಾತ್ರವನ್ನು ಶ್ರದ್ಧಾ ಕಪೂರ್ ಮಾಡಲಿದ್ದಾಳೆ ಎಂದು ಇತ್ತೀಚೆಗೆ ಸುದ್ದಿಯಾಗಿತ್ತು. ಈಗ ಆತಿಯಾ ಪ್ರವೇಶದಿಂದ ಸುದ್ದಿ ಇನ್ನಷ್ಟು ಗೋಜಲಾಗಿದೆ.
SCROLL FOR NEXT