ಹೃತಿಕ್ ರೋಶನ್ 'ಮೊಹೆಂಜೊದಾರೊ' ಎಂಬ ದೊಡ್ಡ ಚಿತ್ರದಲ್ಲಿ ನಟಿಸುತ್ತಿರುವುದು ನಿಮಗೆ ಗೊತ್ತೇ ಇದೆ. ಇದು ಹಲವು ಕಾರಣಗಳಿಂದ ಸುದ್ದಿ ಮಾಡುತ್ತಿದೆ.
ಇದೊಂದು ಮಧ್ಯಯುಗದ ಕತೆಯುಳ್ಳ ಸಿನೆಮಾ. ಹೃತಿಕ್ ಭರ್ತಿ ಒಂದು ವರುಷದ ಗ್ಯಾಪಿನ ನಂತರ ಮತ್ತೆ ಬರುತ್ತಿದ್ದಾನೆ. ಆತನ ಸಂಸಾರ ಒಡೆದ ಬಳಿಕ ಆತ ಕಾಣಿಸುತ್ತಿರುವುದೂ ಇದೇ ಮೊದಲು. ಹೃತಿಕ್ ಒಂದು ಬೃಹತ್ ಮೊಸಳೆಯ ಜತೆ ಹೋರಾಡುವ ಸೀನಂತೂ ಈ ಚಿತ್ರದಲ್ಲಿರಲಿದೆ ಎಂಬುದು ಗ್ಯಾರಂಟಿ. ಅದರ ಎಕ್ಸ್ ಕ್ಲೂಸಿವ್ ಚಿತ್ರಗಳೂ ಈಗಾಗಲೇ ಸಿಕ್ಕಿವೆ.
ಮೊಹೆಂಜೊದಾರೊ ಯುಗದಲ್ಲಿ ಬಾಳಿ ಬದುಕಿದ್ದ ಮಾನವರ ಕತೆಯಿದು ಎಂದು ನಾವು ಊಹಿಸಬಹುದು. ಆ ಕಾಲದಲ್ಲಿ ಬಲಿಷ್ಠ ಜೀವಿಯ ಉಳಿವು ಎಂಬುದು ಕೇವಲ ತತ್ವವಾಗಿರದೆ ಜೀವನದ ಹೋರಾಟವಾಗಿದ್ದ ಕಾಲ. ಆ ಯುಗಕ್ಕೆ ತಕ್ಕಂತೆ ಕತೆಯಿದೆ. ಅದಕ್ಕನುಗುಣವಾಗಿ ಹೃತಿಕ್‍ನ ಮೈಮೇಲೆ ಚರ್ಮದ ಉಡುಪನ್ನೂ ಗುಹೆಯೊಂದರಲ್ಲಿ ಆತನ ಪ್ರಣಯದ ದೃಶ್ಯವನ್ನೂ ನಾವು ನೋಡಬಹುದು. ಜೋಧಾ ಅಕ್ಬರ್‍ನಲ್ಲಿ ಹೃತಿಕ್‍ನನ್ನು ಆನೆಯೊಂದರ ಜತೆ ಹೋರಾಟಕ್ಕಿಳಿಸಿದ್ದ ಅಶುತೋಷ್ ಗೋವಾರಿಕರ್ ಈ ಬಾರಿ ಮೊಸಳೆ ಇಟ್ಟಿದ್ದಾನೆ. ಮಜಾ ತಗೊಳ್ಳೋಣ ಬಿಡಿ.