ಮುಂಬೈ: ಇಂತಿಯಾಜ್ ಅಲಿ ನಿರ್ದೇಶನದ, ದೀಪಿಕಾ ಪಡುಕೋಣೆ ಮತ್ತು ರಣಬೀರ್ ಕಪೂರ್ ನಟನೆಯ 'ತಮಾಶಾ' ಸಿನೆಮಾದ ಟ್ರೇಲರ್ ಹುಟ್ಟಿಸಿರುವ ನಿರೀಕ್ಷೆಯನ್ನು ಕಾಯ್ದುಕೊಳ್ಳುವ ಭರವಸೆ ಇದೆ ಎಂದಿದ್ದಾರೆ ನಟಿ ದೀಪಿಕಾ.
"ಚಲನಚಿತ್ರದಿಂದ ಬಹಳಷ್ಟು ನಿರೀಕ್ಷೆ ಇದೆ. ನಿರೀಕ್ಷೆಗೆ ತಕ್ಕಂತೆ ನಾವೆಲ್ಲರೂ ನಟಿಸಿದ್ದೇವೆ ಎಂದು ನಂಬುತ್ತೇನೆ" ಎಂದು ಕಾರ್ಯಕ್ರಮವೊಂದರಲ್ಲಿ ದೀಪಿಕಾ ಹೇಳಿದ್ದಾರೆ.
ಸೂಜಿತ್ ಸರ್ಕಾರ್ ಅವರ ಹಾಸ್ಯ ಡ್ರಾಮ 'ಪಿಕು' ನಲ್ಲಿ ಈ ನಟಿ ಹಿಂದೆ ಕಾಣಿಸಿಕೊಂಡಿದ್ದರು ಮತ್ತು ಸಿನೆಮಾಗೆ ಒಳ್ಳೆಯ ಪ್ರತಿಕ್ರಿಯೆ ಕೂಡ ಬಂದಿತ್ತು.
ರಣಬೀರ್ ಕಪೂರ್ ಜೊತೆ ದೀರ್ಘ ಕಾಲದ ನಂತರ ಮತ್ತೆ ನಟಿಸಿರುವ ೨೯ ವರ್ಷದ ನಟಿ "'ತಮಾಶಾ', 'ಏ ಜವಾನಿ ಹೈ ದಿವಾನಿ' ಸಿನೆಮಾಗಿಂತಲೂ ವಿಭಿನ್ನವಾದ ಚಿತ್ರ. ನನಗೆ ಇದು ಕನಸಿನ ಚಿತ್ರತಂಡ.
"ರಣಬೀರ್ ಸಹನಟನಾಗಿ ಇಂತಿಯಾಜ್ ಜೊತೆ ಕೆಲಸ ಮಾಡುವ ಆಸೆ ಮೊದಲಿನಿಂದಲು ಇತ್ತು.. ಈಗ ಟ್ರೇಲರ್ ಗೆ ಒಳ್ಳೆಯ ಪ್ರತಿಕ್ರಿಯೆ ಬಂದಿದ್ದು, ಜನ 'ಏ ಜವಾನಿ ಹೈ ದಿವಾನಿ' ಸಿನೆಮಾದಿಂದ ಖುಷಿ ಪಟ್ಟಷ್ಟೇ ಈ ಸಿನೆಮಾದಿಂದಲೂ ಖುಷಿ ಪಡುತ್ತಾರೆ ಎಂದು ನಂಬಿದ್ದೀನಿ" ಎಂದಿದ್ದಾರೆ.
'ತಮಾಶಾ' ನವೆಂಬರ್ ೨೭ ರಂದು ತೆರೆ ಕಾಣಲಿದೆ. ಈ ಮಧ್ಯೆ ಸಂಜಯ್ ಲೀಲಾ ಬನ್ಸಾಲಿ ಅವರ ಐತಿಹಾಸಿಕ ಚಲನಚಿತ್ರ 'ಬಾಜಿರಾವ್ ಮಸ್ತಾನಿ'ಯಲ್ಲಿಯೂ ಕೂಡ ನಟಿಸಿದ್ದಾರೆ. ಈ ಸಿನೆಮಾ ಡಿಸೆಂಬರ್ ೧೮ ರಂದು ಬಿಡುಗಡೆಯಾಗಲಿದೆ.
ಟ್ರೇಲರ್ ಇಲ್ಲಿದೆ ನೋಡಿ