ಸನ್ನಿ ಲಿಯೋನ್ ವಿರುದ್ಧ 100 ಕೋಟಿ ರು. ಮೊತ್ತದ ಮಾನನಷ್ಟ ಮೊಕದ್ದಮೆ ದಾಖಲು
ಹಿಂದಿ ಬಿಗ್ಬಾಸ್ ಸೀಸನ್-5ನ ಸ್ಪರ್ಧಾಳು ರೂಪದರ್ಶಿ ಪೂಜಾ ಮಿಶ್ರಾ ನಟಿ ಸನ್ನಿ ಲಿಯೋನ್ ವಿರುದ್ಧ ಮುಂಬೈ ಹೈಕೋರ್ಟ್ನಲ್ಲಿ 100 ಕೋಟಿ ರುಪಾಯಿ...
ಮುಂಬೈ: ಹಿಂದಿ ಬಿಗ್ಬಾಸ್ ಸೀಸನ್-5ನ ಸ್ಪರ್ಧಾಳು ರೂಪದರ್ಶಿ ಪೂಜಾ ಮಿಶ್ರಾ ನಟಿ ಸನ್ನಿ ಲಿಯೋನ್ ವಿರುದ್ಧ ಮುಂಬೈ ಹೈಕೋರ್ಟ್ನಲ್ಲಿ 100 ಕೋಟಿ ರುಪಾಯಿ ಮೊತ್ತದ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.
ಬಿಗ್ಬಾಸ್ ರಿಯಾಲಿಟಿ ಶೋ ಮೂಲಕ ತಾವು ಪ್ರಸಿದ್ಧಿಯಾಗಿದ್ದು, ತಮ್ಮ ವಿರುದ್ಧ ಸನ್ನಿ ಲಿಯೋನ್ ಮಾಧ್ಯಮಗಳಿಗೆ ಆಕ್ಷೇಪಾರ್ಹ ಹೇಳಿಕೆ ನೀಡುತ್ತಿದ್ದಾರೆ ಎಂದು ಪೂಜಾ ಮಿಶ್ರಾ ಆರೋಪಿಸಿದ್ದಾರೆ.
ಸನ್ನಿ ಲಿಯೋನ್ ಆಕ್ಷೇಪಾರ್ಹ ಹೇಳಿಕೆಯಿಂದಾಗಿ ತಮ್ಮ ವೃತ್ತಿ ಜೀವನದಲ್ಲಿ ಹಿನ್ನಡೆ ಉಂಟಾಗಿದ್ದು, ಈಗಾಗಲೇ 70 ಲಕ್ಷ ರು. ನಷ್ಟವಾಗಿದೆ. ಮಾನಸಿಕ ಹಾಗೂ ಆರ್ಥಿಕವಾಗಿ ಸಾಕಷ್ಟು ಸಮಸ್ಯೆಯಾಗಿವೆ. ಹೀಗಾಗಿ 100 ಕೋಟಿ ರು. ಪರಿಹಾರ ಕೊಡಿಸಬೇಕು ಎಂದು ಮಿಶ್ರಾ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.
ಬೇಸಿಗೆ ರಜೆ ಮುಗಿದ ನಂತರ ಜೂನ್ ನಲ್ಲಿ ಪ್ರಕರಣ ವಿಚಾರಣೆಗೆ ಬರಲಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.